Thursday, 18 September 2014

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 4


ತುಂಬಾ ದಿನ ಆಯ್ತು... ಬ್ಲಾಗ್ನಲ್ಲಿ ಏನು ಬರೆಯಕ್ಕೆ ವಿಷಯ ತೋಚ್ತಾ ಇಲ್ಲ ಅಂದಾಗ ನನಗೆ  ಸಹಾಯಕ್ಕೆ ಬರೋದೆ ಈ food pictures....  ಹಾಗಾಗಿ ನೀವು ಈ ಹೊಸ ಚಿತ್ರಗಳನ್ನ ನೋಡಿ ಹೇಗಿದೆ ಅಂತ feedback ಕೊಡಿ :-P 

so ಈಗ ramp walk ಶುರು ಆಗತ್ತೆ .... enjoy .... :D 



ಪಪ್ಪಾಯ ಪುಡ್ಡಿಂಗ್ .... :-)




ಪೈನಾಪಲ್ ಮೆಣಸುಕಾಯಿ ... :-)



ಇದು ಸಿಂಪಲ್ ಆಗಿರೋ ಕಾಂಚಿಪುರಂ ಇಡ್ಲಿ ... ವಿಶೇಷ ಅಂದ್ರೆ ಅದ್ರ ಕೆಳಗಡೆ ಇರೋ mat ... ನಾನೇ ಬಾಳೆ ಎಲೆಯಿಂದ ಮಾಡಿದ್ದು ಅಷ್ಟೇ ... :-P 




ಕರುಂ ಕುರುಂ  ಬೆಣ್ಣೆ ಮುರುಕು ... ಸ್ವಲ್ಪ mirror effect  ಕೊಟ್ಟಿರೋ photo ....



ಸೋರೆಕಾಯಿ ದಾಲ್ .... ನನ್ನದೇ ಶೈಲಿಯ ಅಲಂಕಾರ ... :-P 



ಪಪ್ಪಾಯ ಕಾಯಿ ಪಲ್ಯ .... twist  ಏನಪ್ಪಾ ಅಂದ್ರೆ ಪಪ್ಪಯಾ ಮರದ deco ಜೊತೆಗೆ... :-)



ಇದೊಂದು ನಮ್ಮ ಮಧ್ಯಾಹ್ನದ ಊಟ ... ನಮ್ಮ ಫುಡ್ ಗ್ರೂಪ್ನಲ್ಲಿ ಕೆಲವರಿಗೆ ಇದು flight ನಲ್ಲಿ ಕೊಡೊ ಊಟದ ರೀತಿ ಕಂಡರೆ ... ಇನ್ನು ಕೆಲವರಿಗೆ Japanese Bento  Lunch Box ತರಹ ಕಾಣಿಸ್ತಂತೆ.... ನಾನಂತೂ ಮೊದಲ ಬಾರಿ ಕೇಳಿದ್ದು ಈ ಹೆಸರನ್ನ... ಆಮೇಲೆ Google search ಮಾಡಿ ಅದೇನಪ್ಪ... ಹೇಗಿರತ್ತೆ  ಅಂತ ನೋಡಿದ್ದು... :-)



ಒಂದು ಭಾನುವಾರದ ಮಧ್ಯಾಹ್ನದ  ಸಿಂಪಲ್ north indian menu... ರೋಟಿ , ಪನೀರ್ ಮಸಾಲ, ಕ್ಯಾರೆಟ್ ಟೊಮೇಟೊ ಸೂಪ.. ;-)



ಮಿರ್ಚಿ ಕಾ ಸಾಲನ್ ... ಸಂಜೀವ್ ಕಪೂರ್  ಬ್ಲಾಗ್ನ follow ಮಾಡಿದ್ದು... n ಈ ಚಿತ್ರ ಅವರ ಫೇಸ್ಬುಕ್ pageನಲ್ಲೂ ಬಂದಿದೆ... :-)



ಪುಲ್ಕಾ ಜೊತೆಗೆ ಪಾಲಕ್ ಪನೀರ್....


 

corn ಕೂರ್ಮ .... ಅದೇನು ವಿಶೇಷ ಅಲ್ಲ.... ಆದ್ರೆ ಹಿಂದಿರೋ ಟೇಬಲ್ ಕ್ಯಾಲೆಂಡರ್ special.... ಪ್ಹೆಸ್ಬುಕ್ನ ಒಬ್ಬ ಗೆಳತಿಯ ಮನೆಯಲ್ಲಿ ಬೆಳೆಯೋ ಕಸಿ ಮಾಡಿದ ಅತಿ ಅಪರೂಪದ ದಾಸವಾಳಗಳು.... ಕೂರ್ಮಕ್ಕಿಮ್ತ ಎಲ್ಲರಿಗೂ ಇಷ್ಟ ಆದದ್ದು ಈ ಕ್ಯಾಲೆಂಡರ್ನಲ್ಲಿ ಇರೋ ಚಿತ್ರ :-)



ಉಪ್ಪಿನಕಾಯಿ....




Mango Phirni.... ಮಾವಿನ ಹಣ್ಣಿನ ಸೀಸನ್ ಸ್ಪೆಷಲ್ ....




ಪಂಜಾಬಿ ಚೋಲೆ ಬಟೂರ ...




ಸಿಹಿ ಕುಂಬಳಕಾಯಿ ಹೂವಿನ ಸಾಸಿವೆ...




ಪೈನಾಪಲ್ ಪುಡ್ಡಿಂಗ್...




Capcicum ಬೇಸನ್.... ಇದರಲ್ಲಿ ನಾವು ಸ್ಕೂಲ್ ಕಾಲೇಜ್ನಲ್ಲಿ ನೋಟ್ ಬುಕ್ನ ಕೊನೆಯ ಪೇಜ್ನಲ್ಲಿ ಆಡ್ತಿದ್ದ ಆಟದ ಚಿತ್ರವನ್ನ ದೊಣ್ಣೆ ಮೆಣಸಿನ ಬೀಜದಲ್ಲಿ try ಮಾಡಿದ್ದು ... ಆ ಆಟದ  ಹೆಸರು Tic - Tac -Toe ಅಂತ ಮೊನ್ನೇನೆ ಗೊತ್ತಾದದ್ದು ನನಗೆ :-)




ಇದು amchi ಪತ್ರೊಡೆ ... ಕೊಂಕಣಿ ವಿಶೇಷ ... :-)



ಬೆಣ್ಣೆ ಮಸಾಲ ದೋಸ.... :-)



ಮೊನ್ನೆ ನಮ್ಮ ಮದುವೆ anniversary ಗೆ ಮಾಡಿದ pressure cooker cake.... full flop.... ಸ್ಟಿಲ್ ನೆನಪಿಗಾಗಿ ಅದರ ಒಂದು ಚಿತ್ರ :-P



ಫೆಬ್ರವರಿಯಲ್ಲಿ  valentines day ಗಾಗಿ ಸುಮ್ನೆ ಚಟ್ನಿ ಪುಡಿಯಿಂದ ಮಾಡಿದ ಒಂದು ಪುಟ್ಟ ಪ್ರಯತ್ನ .. :-)


ಈ ಸಂಚಿಕೆಗೆ ಇಷ್ಟು ಸಾಕು...

ಮತ್ತೊಮ್ಮೆ ಮತ್ತಷ್ಟು ಚಿತ್ರದೊಂದಿಗೆ ....

ಅಲ್ಲಿವರೆಗೂ ...

ಪ್ರೀತಿಯಿಂದ 

ಸುದೀಪ... :-)

16 comments:

  1. ದೀಪಾ -
    ಆಹಾ......... ಇಷ್ಟೆಲ್ಲಾ ತಿಂಡಿಗಳ ರುಚಿ ನೊಡಬೇಕು ಅಂದ್ರೆ ನಾನು ಎಷ್ಟು ದಿನ ನಿಮ್ಮನೇಲಿ ಬಂದು ಉಳಕೋಬೇಕಾಗಬಹುದು..........:p

    ReplyDelete
    Replies
    1. ಶ್ರೀ .... ಯೋಚನೆ ಮಾಡು ...ಒಂದು ತಿಂಗಳು ಲೀವ್ ಹಾಕಿ ಬಾ.... :D :-)

      Delete
  2. ಮತ್ತೆ ಮತ್ತೆ ನೋಡ್ದೆ ಹೊಟ್ಟೆ ತುಂಬೋಯ್ತು........

    ReplyDelete
    Replies
    1. ಹ ಹ.... ಇವತ್ತು ಊಟ ಮಾಡೋದು ಬೇಡ ಹಾಗಾದ್ರೆ :-P

      Delete
  3. Lovely pictures!! too good :-) loved watching :-) Appreciate your talent and efforts!

    ReplyDelete
    Replies
    1. Thank u so much Divya.... Glad you liked it :-)

      Delete
  4. ಓಹ್. ನೋಡಿಯೇ ಸುಸ್ತಾದೆ. ಅಡುಗೆ ಮಾಡುವುದೇ ಕಷ್ಟದ ಕೆಲಸ. ಮಾಡಿದ್ದನ್ನು ಇಷ್ಟು ಚೆನ್ನಾಗಿ ಅಲಂಕಾರ ಆಹ್ ಎಷ್ಟು ತಾಳ್ಮೆ, ತನ್ಮಯತೆ. ನಿಮಗೆರಡು ಸೆಲ್ಯೂಟ್. ಖುಷಿ ಆಯಿತು.
    ಮಾಲಾ

    ReplyDelete
    Replies
    1. ಧನ್ಯವಾದಗಳು ಮಾಲ ... :-)

      Delete
  5. ಆಹಾ!
    ಎಷ್ಟೆಲ್ಲಾ ಅಡುಗೆ ಕಲಿತು ಬಿಟ್ಟಿದ್ದಿರಿ.. ವಿಥ್ ಅಲಂಕಾರ ಬೇರೆ!

    -ಚಂದ ಚಂದ..

    ReplyDelete
  6. ಪೆಂಟಾಸ್ಟಿಕ್ಕು... :)

    ReplyDelete
  7. ತಟ್ಟೆಯಲ್ಲಿ, ಡಬ್ಬದಲ್ಲಿ, ಅಡಿಗೆಮನೆಯಲ್ಲಿ ಏನಾದರೂ ತಿನ್ನುವ ಪದಾರ್ಥ ಕಂಡರೆ ಅದು ಸೀದಾ ಹೊಟ್ಟೆಗೆ ಸೇರುವ ತನಕ ನೆಮ್ಮದಿ ಇರೋಲ್ಲ ನನಗೆ.. ಈ ನಿಮ್ಮ ಚಿತ್ರಗಳನ್ನು ನೋಡಿದಾಗ ಮೊದಲು ಅಭಿನಂದನೆ ಹೇಳಬೇಕಾದ್ದು ನಿಮ್ಮ ತಾಳ್ಮೆಗೆ. ತಿಂಡಿ ತಿನಿಸು ಮಾಡಿ ಅದರ, ಅದನ್ನು ಅಲಂಕಾರ ಮಾಡಿ, ಅದರ ಚಿತ್ರ ತೆಗೆದು ಯಪ್ಪಾ.. ಇಷ್ಟೊಂದು ಪರಿಶ್ರಮ ಲೇಖನದಲ್ಲಿ ಎದ್ದು ಕಾಣುತ್ತಿದೆ.
    ಪ್ರತಿಯೊಂದು ಸ್ಪೆಷಲ್..

    ಸೂಪರ್ ತಿನಿಸುಗಳ ಬರಹಾ.. ಹೊಟ್ಟೆ ಹಸಿತಾ ಇದೆ.. ನಾ ಓಡಿ ಹೊರಟೆ ಅಡಿಗೆ ಮನೆಯತ್ತ...

    ReplyDelete