ಆಗ್ಲೇ ಒಂದು ವರ್ಷ ಆಯ್ತು ಅವಳಿಗೆ ಅವನ ಪರಿಚಯವಾಗಿ. ಅದೆಷ್ಟು ಬೇಗ ಒಂದು ವರ್ಷ ಕಳೆದು ಹೋಯ್ತೋ ಗೊತ್ತಾಗಲೇ ಇಲ್ಲ. ಸುಮ್ಮನೆ ಆಲೋಚನೆ ಮಾಡಿದರೆ ಅದೆಷ್ಟೋ ವರ್ಷದ ಸಂಬಂಧ, ಆತ್ಮೀಯತೆ ಇದೆಯೋ ಈ ಸ್ನೇಹದಲ್ಲಿ ಅನ್ನೋ ಭಾವ. ಕಳೆದ ದೀಪಾವಳಿ ಸಮಯದಲ್ಲಿ ಆತ್ಮೀಯರ ಮುಖೇನ ಪರಿಚಯವಾಗಿದ್ದ ಆತ. ಅವರು ಅವನನ್ನು ಪ್ರೀತಿಯಿಂದ ಗುಣಗಾನ ಮಾಡಿದ್ದರಿಂದ ಅವಳು ಧೈರ್ಯವಾಗಿ ಅವನಿಗೆ ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ಲು. ಆಗ ಹಬ್ಬದ ಸಮಯ ಆದ್ದರಿಂದ ಕಡುಬು ಕಳಿಸ್ರಿ.... ಅಂತಾ ಮೆಸೇಜ್ ಮಾಡಿ ಮಾತು ಶುರು ಮಾಡಿದ್ದ ಹುಡುಗ. ಅದು ಹೇಗೆ ದಿನೇ ದಿನೇ ಅತೀ ಅನಿಸುವಷ್ಟು ಆತ್ಮೀಯನಾದ್ನೊ ಅವಳಿಗೂ ಗೊತ್ತಿಲ್ಲ.
ನೀನು ನನಗಿಂತ ವಯಸ್ಸಿನಲ್ಲಿ ದೊಡ್ದೋನು, ನಾನು ಇನ್ನು ಚಿಕ್ಕೊಳು ಅಂತ ಒಂದಷ್ಟು ದಿನ ಅವನಿಗೆ ಸತಾಯಿಸಿ ಸತಾಯಿಸಿ ಕೊನೆಗೂ ನೀನಿನ್ನು ಪುಟ್ಟ ಹುಡುಗ ಅಂತ ಹೇಳಿದ್ದು ಇನ್ನು ಇತ್ತೀಚಿಗೆ ಅನ್ನೋ ಹಾಗಿದೆ ಅವಳಿಗೆ.
ಕೇವಲ ಫೇಸ್ ಬುಕ್ನಲ್ಲಿ ಚಾಟಿಂಗ್ ಮಾಡ್ತಾ ಇದ್ದವನಿಗೆ ಒಮ್ಮೆ ಫೋನ್ ನಂಬರ್ ಕೊಡೋ ಅನಿವಾರ್ಯತೆ ಬಂತು. ಅಲ್ಲಿಂದ ಶುರುವಾಯ್ತು ಅವನ ಬಗ್ಗೆ ಇನ್ನಷ್ಟು, ಮತ್ತಷ್ಟು ತಿಳಿದುಕೊಳ್ಳೋ ಸದವಕಾಶ. ಮತ್ತಷ್ಟು ಹತ್ತಿರಕ್ಕೆ ಭಾವನಾತ್ಮಕವಾಗಿ ಬೆಸೆಯೋ ದಿನಗಳು ಪ್ರಾರಂಭ ಆಯ್ತು . ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸ್ನೇಹ ಅಂದ್ರೆ ಹೇಗಿರುತ್ತೆ, ಅದರ ಸವಿ ಏನು ಅಂತ ಅರಿವಾದ ದಿನಗಳು ಅವಳಿಗೆ. ಅದೂ ಒಬ್ಬ ಪುಟ್ಟ ಹುಡುಗನೊಂದಿಗೆ. ಪ್ರತಿದಿನ ಅವನದ್ದೊಂದು ಮೆಸೇಜ್ ಇರಲೇ ಬೇಕು. ಅವಳ ಜೊತೆಯಲ್ಲಿ ಒಂದು ಅರ್ಧ ದಿನವಾದರೂ ಅವನು ಸಂಪರ್ಕದಲ್ಲಿ ಇಲ್ಲ ಅಂದರೆ ಆ ದಿನವೆಲ್ಲಾ ಖಾಲಿ ಖಾಲಿ, tension. ಎಲ್ಲಿ ಹೋದ ಈ ಹುಡುಗ ಅನ್ನೋ ಆತಂಕ. ಅವನ ಗುಡ್ಮಾರ್ನಿಂಗ್ ಸಂದೇಶಕ್ಕೆ ಅವಳು ತನ್ನ ಬಿಡುವಿನ ಸಮಯದಲ್ಲಿ ಉತ್ತರ ಕೊಟ್ರೂ, ಪ್ರತಿದಿನ ಅವನೇ ಮೆಸೇಜ್ ಮಾಡಿ ಮಾತಾಡ್ಸ್ಬೇಕೋ ಅನ್ನೋ ಆಸೆ, ಹಠ. ಅವನ ಮನಸ್ಥಿತಿ ಏನೇ ಇರ್ಲಿ ಆದ್ರೂ ತಪ್ಪದೆ ಅವಳನ್ನ ಖುಷಿಯಾಗಿ ಇಡೋ ಜವಾಬ್ದಾರಿ ಅವನದ್ದು.
ಸುಮ್ನೆ ಕಿರಿಕ್ ಮಾಡ್ಬೇಡ , ಜೀವ ತಿನ್ಬೇಡ ಅಂದ್ರೆ, 'ನೀನೆ ಅಲ್ವಾ ಫೇಸ್ ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳ್ಸಿದ್ದು...ಈಗ ಅನುಭವಿಸು ಅಂತಾನೆ'.... ಅವಳ ಅಮ್ಮನಿಗೂ ಅವನ ಬಗ್ಗೆ ಎಲ್ಲ ಗೊತ್ತು. ಪ್ರತಿದಿನ ತವರಿಗೆ ಫೋನ್ ಮಾಡಿ ಮಾತಾಡೋ ಅವಳಿಗೆ ಪ್ರತಿದಿನ ಅವಳಮ್ಮನ ಪ್ರಶ್ನೆ.... 'ಹೇಗಿದ್ದಾನೆ ನಿನ್ನ ಫ್ರೆಂಡ್ ? ಏನಂತೆ ?' ಅವಳು ಅವಳ ಅಮ್ಮನ ಹತ್ರ, 'ಅವ್ನು ಸುಮ್ನೆ ಕಿರಿಕ್ ಮಾಡ್ತಾನೆ ಅಮ್ಮ' ಅಂದ್ರೆ, 'ಬೇಕಿತ್ತಾ ನಿನಗೆ ಅವ್ನ ಸಹವಾಸ' ... ಅಂತ ಅವರು ಮರುಪ್ರಶ್ನೆ ಮಾಡ್ತಾರೆ ...ಜೊತೆಗೆ ಅನುಭವಿಸು ಅಂತಾರೆ .... ಅವರಿಗೂ ಗೊತ್ತು ಇಬ್ಬರ ಸ್ನೇಹ ಎಷ್ಟು ಗಾಢವಾಗಿದೆ ಅಂತ .... ಇವಳದ್ದು ಒಂದು ಘಳಿಗೆಯ ಕೋಪ ಅವ್ನ ಮೇಲೆ ಎಂದು ಚೆನ್ನಾಗಿ ತಿಳಿದಿದ್ದಾರೆ ಅವರೂ ಸಹಾ.
'ಇರ್ಲಿ ಪಾಪ ಕಣಮ್ಮ ಅವ್ನು....' ಅಂದ್ರೆ, 'ಹಾಗಾದ್ರೆ ಇನ್ನು ಮುಂದೆ ನನ್ನ ಹತ್ರ ಅವನ ಬಗ್ಗೆ ಚಾಡಿ ಹೇಳಬೇಡ.... ನೀನೆ ಅನುಭವಿಸು ಅಂತಾರೆ' ...ಒಟ್ನಲ್ಲಿ ಅವಳನ್ನ ಸಪೋರ್ಟ್ ಮಾಡೋರು ಯಾರು ಇಲ್ಲ.... :-(
'ನಾನು ಒಂದಷ್ಟು ದಿನ ಊರಿಗೆ ಹೋಗ್ತಾ ಇದೀನಿ ಕಣೆ. ಅಲ್ಲಿ ಮೊಬೈಲ್ ನೆಟ್ವರ್ಕ್ , ಇಂಟರ್ನೆಟ್ ಏನೂ ಇಲ್ಲ... ಒಂದಷ್ಟು ದಿನ ನನ್ನ ಕಿರಿಕಿರಿ ಇಲ್ದೆ ಆರಾಮಾಗಿರು...' ಹೀಗೆ ಹೇಳಿ ಅವನು ಹೊರಟ್ರೆ ಒಂದಷ್ಟು ದಿನ ಬೋರ್. ಕೆಲವೊಮ್ಮೆ ಕೆಲಸದ ಒತ್ತಡದಿಂದ ಸ್ವಲ್ಪ ದಿನಕ್ಕೆ ಮತ್ತಷ್ಟು ದಿನಗಳು ಸೇರಿ ತುಂಬಾ ದಿನ ಹುಡುಗನ ಪತ್ತೆ ಇರೋಲ್ಲ. ಎಲ್ಲೋ ನೆಟ್ವರ್ಕ್ ಇರೋ ಹತ್ತಿರದ ಊರಿಗೆ ಬಂದಾಗ ಒಂದು ಮೆಸೇಜ್, ಒಂದು ಫೋನ್ ಕಾಲ್ನಲ್ಲಿ ಸ್ವಲ್ಪ ಸಮಯ ಸಂಪರ್ಕದಲ್ಲಿ ಸಿಗೋ ತೃಪ್ತಿ .
ಒಮ್ಮೆಅವನು ತನ್ನ ಊರಿಗೆ ಹೋದಾಗ, 'ಅಮ್ಮನ ಜೊತೆ ಪೇಟೆಗೆ ಬಂದಿದ್ದೀನಿ ... ಮಾತಾಡ್ತೀಯಾ ಅವಳತ್ರ...' ಅಂತ ಮೆಸೇಜ್ ಮಾಡಿದ್ರೆ , 'ಅವರ ಹತ್ರ ಮಾತಾಡಕ್ಕೆ ಹೆದರಿಕೆ ಆಗುತ್ತೆ ಮಾರಾಯಾ.....' ಅಂತ ರಿಪ್ಲೈ ಮಾಡಿದ್ಲು. ಕೊನೆಗೂ 'ಓಕೆ ಮಾತಾಡ್ತೀನಿ .....' ಅಂದಾಗ,
ಅವನು 'ನಿಂಗೆ ಮಾತಾಡಕ್ಕೆ ಬರಲ್ಲ..ಅವಳಿಗೆ ಗೊತಾಗಲ್ಲ.... ಚೆನ್ನಾಗಿದೆ' ... ಅಂತ ಇಬ್ಬರನ್ನು UNDER ESTIMATE ಮಾಡಿದ್ದ :-P ಅವ್ನು ಹೀಗೆ ಮೆಸೇಜ್ ಮಾಡ್ದಾಗ ನಿಜ .. ತನ್ನ ಗುಣವನ್ನ ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದಾನೆ ಅನ್ನಿಸ್ತು. ಯಾಕಂದ್ರೆ ಪ್ರತಿ ಬಾರಿ ಅವ್ನು ಅಪರೂಪಕ್ಕೆ ಫೋನ್ ಮಾಡಿದ್ರು ೧೦೦ಕ್ಕೆ ೯೫ ಭಾಗ ಅವ್ನು ಮಾತಾಡಿದ್ರೆ ಒಂದು ೫% ಅವ್ಳು ಮಾತಾಡೋಳು. :-P ಅವ್ನ ಅಮ್ಮನ ಜೊತೆ ಅಂತೂ ಇಂತೂ ಒಂದೆರಡು ನಿಮಿಷ ಕಷ್ಟ ಪಟ್ಟು ಮಾತಾಡಿ ಉಫ್ ಅಂತ ಉಸಿರು ಬಿಟ್ಟಿದ್ಲು ಆ ದಿನ ಅವಳು.
ಫೋನ್ ಇಟ್ಟ ಮೇಲೆ 'ಯಾಕೆ ಅವನನ್ನ ಸುಮ್ನೆ ಬೈತೀಯಾ....' ಅಂತಾ ಅಮ್ಮ ಕೇಳಿದ್ರೆ, 'ಹಂಗೆ ತರಲೆ ಮಾಡ್ತಾನಮ್ಮ... ಬರೋ ಸಿಟ್ಟಿಗೆ ಏನಾದರೂ ಮಾಡೋಣ ಅನ್ಸುತ್ತೆ ...' ಅಂದಿದ್ಲು...

ಅವಳ ಜೊತೆ ಮಾತಾಡೋವಾಗ ಅವನು ಏಕವಚನ ಉಪಯೋಗಿಸಿದರೆ, ಅವಳಿಗೆ ಈಗಲೂ, ಹೋಗೋ ಬಾರೋ ಅಂತ ಮಾತಾಡೋಕೆ ಕಷ್ಟ. ಮೆಸೆಜ್ನಲ್ಲಿ, ಫೋನ್ನಲ್ಲಿ ಮಾತಾಡೋವಾಗ ಮಾತ್ರ ಅವಳ ಧೈರ್ಯ, ಶೌರ್ಯ ಎಲ್ಲಾ... :-P ಮೊದ್ಲೇ ಅವಳು ಮುಜುಗರದ ಪ್ರಾಣಿ. ನಿಜಕ್ಕೂ ಅವನು ಎದುರಿಗೆ ಬಂದರೆ full silent. ಮತ್ತೆ ಏನು ವಿಶೇಷ? ಫೈನ್ ಏನಿಲ್ಲ.... ಮತ್ತೆ ...? ನಥಿಂಗ್ ..... ಇಷ್ಟು ಶಬ್ದ ಬಿಟ್ಟು ಬೇರೆ ಶಬ್ದಗಳು ಹೊರಗೆ ಬರಲ್ಲ :-P
ಅವನಿಗೆ ಅವಳು ಭೇಟಿಯಾಗಿದ್ದೆ ಎರಡು ಬಾರಿ. ಎದುರಿಗೆ ಸಿಕ್ಕಾಗ ಅವ್ನದ್ದು ಥೇಟ್ ಒರಟು. ಆದ್ರೆ ಮನಸ್ಸು ತುಂಬಾ ಮೃದು... ಹೀಗಂತ ಸ್ವಲ್ಪ ಹೊಗಳಿದರೆ ಹಾಗೆ ಹಿಗ್ಗಿ ಹೀರೆಕಾಯಿ ಆಗ್ತಾನೆ... :-P
ಅವನ ಋಣಾತ್ಮಕ ಯೋಚನೆಗಳೆಂದರೆ ಅವಳಿಗೆ ಎಲ್ಲಿಲ್ಲದ ಸಿಟ್ಟು . ಆ ಒಂದು ವಿಷಯಕ್ಕೆ SHE JUST HATES HIM..
ಅವಳದೊಂದು ಅಭ್ಯಾಸ.... ಮನಸ್ಸಲ್ಲಿ ಆ ಘಳಿಗೆಯಲ್ಲಿ ಅಚಾನಕ್ಕಾಗಿ ಮೂಡೋ ಭಾವ ಅಂದ್ರೂ ತಪ್ಪಿಲ್ಲ .... ಹೀಗೆ ಏನೋ ತನ್ನ ಕೆಲಸದಲ್ಲಿ ಇರ್ತಾಳೆ. ಇದ್ದಕ್ಕಿದ್ದಂತೆ ಅವನ ನೆನಪಾಗುತ್ತೆ. ತುಂಬಾ ಪ್ರೀತಿ, ಆತ್ಮೀಯತೆ ಉಕ್ಕಿ ಹರಿಯುತ್ತೆ. :-P ಆ ಕ್ಷಣದಲ್ಲಿ ಅವ್ನಿಗೆ 'ಲವ್ ಯೂ ಕಣೋ ....' ಅಂತ ಹೇಳಲೇಬೇಕು .. ಆ ಘಳಿಗೇಲಿ ಅವನಿಗೆ ಅವಳ ಆ ಪ್ರೀತಿ ಬೇಕೋ ಬೇಡ್ವೋ ... ಅವಳಿಗದು no matters... ಮನಸ್ಸಿಗೆ ಅನಿಸಿದ್ದನ್ನ ಕೂಡಲೆ ಹೇಳಿ ಹಗುರಾಗ್ಬೇಕು.... ಅಷ್ಟೇ ಅವಳ ಪಾಲಿಸಿ... :-D
ಅವಳ ಹುಟ್ಟುಹಬ್ಬಕ್ಕೆ ರಾತ್ರಿ ೧೨ ಘಂಟೆಗೆ ನಿದ್ದೆಗಣ್ಣಲ್ಲಿ ವಿಶ್ ಮಾಡಿದ ಭೂಪ ಅವ್ನು. ಅದೇನು ಅರ್ಧ ನಿದ್ದೆ ಅರ್ಧ ಎಚ್ಚರದಲ್ಲಿ ಮಾತಾಡಿದ್ನೋ ಅವನಿಗೆ ಗೊತ್ತಿಲ್ಲ ಪಾಪ :-P
'ಬಚಾವ್, ಹತ್ರದಲ್ಲಿ ನಾನಿಲ್ಲ.....' ಅಂತ ರಿಪ್ಲೈ ಬರತ್ತೆ... ;-) ಇದ್ದಿದ್ರೆ ಅಷ್ಟೇ .... ಅಂತ ಮನಸ್ಸಲ್ಲಿ ಎಣಿಸಿ ನಗ್ತಾಳೆ ಅವ್ಳು.
ಅವನದ್ದೊಂದು ಟಿ - ಶರ್ಟ್ ಅದೇಕೆ ಅವಳಿಗೆ ಪ್ರೀತಿನೊ ಗೊತ್ತಿಲ್ಲ... ಆ ಶರ್ಟ್ನಲ್ಲಿ ಇರುವ ಅವನ ಹಳೆಯ ಫೋಟೋಗಳು ಅವಳಿಗೆ ಅತ್ಯಂತ ಪ್ರಿಯವಾದದ್ದು... ಅದರಲ್ಲೂ ಅವನ ಅಮ್ಮನ ಜೊತೆ ಇರುವ ಒಂದು ಫೋಟೋ. ಆ ಹಳೆಯ ಚಿತ್ರಗಳಲ್ಲಿ ಅವ್ನು ಇಲಿಮರಿ ಹಂಗೆ ಕಾಣ್ತಾನೆ ಅದೆಕೋ ಯಾವಾಗ್ಲೂ ಅವಳಿಗೆ :-P
ಇನ್ನೊಂದು ವಿಶೇಷ ಅಂದ್ರೆ ಪ್ರತಿಬಾರಿ ಅವಳೇ ತಪ್ಪು ಮಾಡಿದರೂ, ಅವನ ಮನಸ್ಸು ನೊಯಿಸಿದ್ರೂ 'ಸಾರಿ' ಕೇಳೋದು ಅವ್ನೆ. ಅಷ್ಟು ಒಳ್ಳೆ ಹುಡುಗ ಇನ್ನು ಯಾರೂ ಅವಳಿಗೆ ಸ್ನೇಹಿತನಾಗಿ ಸಿಗಲಿಕ್ಕಿಲ್ಲ :-P
ಪ್ರತಿದಿನ ಬೆಳಗಿನ ಗುಡ್ಮಾರ್ನಿಂಗ್ ಮೆಸೆಜ್ಗಳಿಂದ ಅವಳ ನಿದ್ದೆ ಹಾಳು ಮಾಡೋ ಅವನು, ನಿದ್ದೆಮರಿಯಾದ ಅವಳಿಗೆ ಬರೋ ಕೋಪಕ್ಕೆ ಹಂಗೆ ಎದುರಿಗಿದ್ರೆ ಚಟ್ನಿ ಮಾಡೋ ಅಷ್ಟು ಸಿಟ್ಟು. ಅಪರೂಪಕ್ಕೆ ಅವಳಾಗಿ 'ಗುಡ್ಮಾರ್ನಿಂಗ್' ಅಂದ್ರೂ ಅದಕ್ಕೂ ಒಂದಷ್ಟು ಕಾಲೆಳೆಯೋ ಕಾಮೆಂಟ್ಸ್. ಯಾಕಾದ್ರೂ ಇವನಿಗೆ ಫೋನ್ ನಂಬರ್ ಕೊಟ್ನೋ ಅಂತ ಅವಳಿಗೆ ಅವಳೇ ಮನಸ್ಸಲ್ಲಿ ಬೈದುಕೊಂಡಿದ್ದ ದಿನಗಳದೆಷ್ಟೋ .... :-P
ಅವನ ಪ್ರತಿಯೊಂದು ಸಂತಸದ ಕ್ಷಣದಲ್ಲೂ ಅವಳಿಗೊಂದು ಪಾಲು. ಅದನ್ನ ಆ ಘಳಿಗೆಯಲ್ಲೇ ಹಂಚೋ ಹುಡುಗ ಅವನು. ಒಂಥರಾ LIVE T V channel ಇದ್ದ ಹಾಗೆ....
ಜೊತೆಗೆ ಅವಳ ಮನಸ್ಸು ನೊಂದಾಗಲೂ ಸಾಂತ್ವಾನ ಹೇಳೋ ಹುಡುಗ ಅವನು. ಅವನು ಹಂಚಿಕೊಳ್ಳೋ ಚಿಕ್ಕ ಪುಟ್ಟ ಖುಷಿಗಳು ನಿಜಕ್ಕೂ ಅವಳಲ್ಲೂ ಸಂತಸದ ಅಲೆ ಹರಿಸುತ್ತೆ.
ಅವನಿಗೆ ಅವಳು ನೋವು ಕೊಟ್ಟ ಆ ವಿಷಯವನ್ನ ಪುನಃ ನೆನಪಿಸಿ, ಜಗಳ ತೆಗೆದು ರಾಜಿ ಆಗಿ ಪುನಃ ಅದೇ ವಿಷಯಕ್ಕೆ ಕಾಲೆಳೆಯೋದಂದ್ರೆ ಅವಳಿಗೆ ತುಂಬಾ ಇಷ್ಟ :-P
ಜೀವನದಲ್ಲಿ ಎಲ್ಲವೂ ಇದ್ದು ಏನೂ ಅನುಭವಿಸಿದ ಅವಳಿಗೆ ಖುಷಿಯಾಗಿ ಹೀಗೂ ಇರಬಹುದು ಎಂದು ಆ ಹುಡುಗ ತೋರಿಸಿ ಕೊಟ್ಟಿದ್ದ. ಅದೆಷ್ಟೋ ಹೊಸ ಹುರುಪು, ಭರವಸೆ ಅವಳಲ್ಲಿ ಮೂಡಿಸಿದ್ದ .
ಒಮ್ಮೊಮ್ಮೆ ಅತಿ ಅನಿಸುವಷ್ಟು ನಗಿಸೋ ಅವನು, ಇನ್ನೊಮ್ಮೆ ಕಣ್ಣು ಒದ್ದೆ ಮಾಡಿಸೋ TWO IN ONE ಹುಡುಗ .....
ಅವಳಿಗೆ ಅತಿಯಾಗಿ ಹಿಂಸೆ ಆಗೋದು ಅವನೂರಿನ ಭಾಷೆ. ಅವಳಿಗೆ ಆ ಭಾಷೆ ಅರ್ಧ ಅರ್ಥ ಆದ್ರೆ, ಇನ್ನರ್ಧ ಅರ್ಥ ಆಗಲ್ಲ . 'ಇವತ್ತು ಹಬ್ಬದ ಸ್ಪೆಶಲ್ ಅಡಿಗೆ ಕಣೆ , ಊಟಕ್ಕೆ ಬಾರೆ ಅಂತ ಅವ್ನು ಕರೆದ್ರೆ', ಅದನ್ನು ಓದಿ ಅರ್ಥ ಆಗದ ಅವಳು, 'ಹೇ ನಂಗೆ ಊಟಕ್ಕೆ ಕರ್ದೆ ಇಲ್ಲ ಅಂತ' .... , 'ಆಗ್ಲೇ ಕರೆದ್ನಲ್ಲೇ ಅಂತ ಅವ್ನು '..... 'ನೆಟ್ಟಗೆ ನಂಗೆ ಅರ್ಥ ಆಗೋ ಹಾಗೆ ಮೆಸೇಜ್ ಮಾಡೋಕೆ ಏನು ರೋಗ ಅಂತ ಅವ್ಳು' ...? ಹೀಗೆ ಅಲ್ಲೊಂದು ಚಿಕ್ಕ ಕೋಳಿ ಜಗಳ .... :-D
ಪ್ರತಿ ಬಾರಿಯೂ ಒಂದಲ್ಲ ಒಂದು ವಿಷಯಕ್ಕೆ ಭಿನ್ನಾಭಿಪ್ರಾಯಗಳು, ಕೋಪ, ವಾದ- ವಿವಾದ, ಜಗಳ, ಕಾಲೆಳೆಯೋದು, UNLIMITED ಪ್ರೀತಿ, ಒಂದಷ್ಟು ಕಷ್ಟ - ಸುಖ ವಿನಿಮಯ ಎಲ್ಲಾ ಎಲ್ಲಾನೂ ಇದೆ ಆ ಸ್ನೇಹದಲ್ಲಿ.... ಇವೆಲ್ಲವನ್ನ ಅನುಭವಿಸಿ ಕಳೆದ ಒಂದು ವರ್ಷ ಅವಳಿಗೆ ಇಟ್ಸ್ ಗ್ರೇಟ್, fantastic. :-)
ಕೊನೆಯದಾಗಿ 'ಲವ್ ಯೂ ಕಣೋ......' ಅಂತ ಪ್ರೀತಿಯಿಂದ ಆಗಾಗ್ಗೆ ಹೇಳೋಕಾದ್ರೂ ಆ BOY FRIEND ಬೇಕೇ ಬೇಕು ..... ;-)
ಅವರಿಬ್ಬರ ಸ್ನೇಹ ಚಿರಂಜೀವಿಯಾಗಿ ಸದಾ ಇರಲಿ ಅನ್ನೋ ಹಾರೈಕೆ..... TOUCH WOOD ..... :-)
TOUCHWOOD ಮುನ್ನಾ!! :-)
ReplyDeletePacchi.... :-)
Deleteತುಂಬಾ ಚನ್ನಾಗಿದೆ.....
ReplyDeleteತೀರಾ ಸಹಜ ಸಾಲುಗಳಲ್ಲಿ ಹಿಡಿದಿಟ್ಟ friendly ಭಾವ.....
ತುಂಬಾ ಚಂದ.....
Thank u so much Raghav.... :-)
DeleteGood to know about good friendship. May god bless both of you...
ReplyDeleteNats..... :-)
Deleteಒಳ್ಳೆಯದಾಗುವಂತಿದ್ದರೆ ಅದು ಯಾವ ದಿಕ್ಕಿನಿಂದಲಾದರೂ ಆಗಲಿ ಏನಂತೀರ? ಹಾರೈಸುವ ಅಭಿನಂದಿಸುವ ಸಕಾಲ ನಮ್ಮದಾಗಲಿ.
ReplyDeleteಧನ್ಯವಾದಗಳು ಬದರಿ ಭಾಯ್.... :-)
Delete"ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು ಈ ಮೌನ ಇನ್ನು ಏತಕೆ" ತಿರುಗುಬಾಣ ಚಿತ್ರದ ಹಾಡು ನೆನಪಿಗೆ ಬಂತು ನಿಮ್ಮ ಲೇಖನ ಓದಿ. ಗೆಳೆತನದಲ್ಲಿ ನಗು, ಅಳು, ತುಸು ಮುನಿಸು, ಮತ್ತೆ ಒಂದಾಗುವಿಕೆ ಇವೆಲ್ಲ ಊಟದಲ್ಲಿ ಉಪ್ಪಿನಕಾಯಿ ಎನ್ನುವ ಹಾಗೆ ಇರಲೇಬೇಕು. ಸುಂದರ ಬರಹ ಗೆಳೆತನದ ಹಲವಾರು ಮುಖಗಳನ್ನು ಪರಿಚಯಿಸುತ್ತಾ ಆ ಕ್ಷಣದ ಭಾವುಕ ಸಂಗತಿಗಳನ್ನು ಹರಡಿರುವ ರೀತಿ ಖುಷಿ ಕೊಡುತ್ತದೆ. ಗೆಳೆತನ ಆರಂಭಕ್ಕೂ ಮತ್ತು ........ ಮಧ್ಯೆ ಇಂಥಹ ಸುಂದರ ಸಂಗತಿಗಳು ಮನಸ್ಸನ್ನು ಮುದಗೊಳಿಸುತ್ತದೆ. ಅಮರ ಗೆಳೆತನ ಚಿರಾಯುವಾಗಲಿ. ಸುಂದರ ಲೇಖನ ಇಷ್ಟವಾಯಿತು
ReplyDeleteಥ್ಯಾಂಕ್ಯೂ ಶ್ರೀಕಾಂತ್.... :-)
Deleteಚಂದದ ಭಾವವಿದು .... ಇಷ್ಟವಾಯ್ತು ಜೊತೆಗೆ ಭಾವ ನಂಗೂ ಹತ್ತಿರ ಅನ್ನಿಸ್ತು ಸುಮತಿ ಅಕ್ಕಾ :)
ReplyDeleteದಕ್ಕಲಿ ಎಲ್ಲರಿಗೂ ಈ ತರಹದ ಗೆಳೆಯನೊಬ್ಬ.
ಬದುಕಿಗೆ ಜೊತೆಯಾಗಿ ,ಬದುಕ ಪ್ರೀತಿಯ ತಿಳಿಸಿಕೊಡ್ತಾ ,ಜೊತೆಗೊಂದಿಷ್ಟು ಜಗಳ ಮಾಡ್ತಾ ,ಮನಸ ಪೂರ್ತಿ ನಗ್ತಾ,ರೇಗಿಸ್ತಾ ,ನಮ್ಮಗಳ ಮೇಲೆ ನಮಗೂ ಜಾಸ್ತಿ ಅನ್ನೋ ಅಷ್ಟು ಪ್ರೀತಿಯಾಗೋ ತರಹ ಮಾತಾಡ್ತಾ ಇರೋ ಅವಳ ಈ ಗೆಳೆಯನಿಗೊಂದು ನಮನ ..ಹಾಗೆಯೇ ಇದ ಸಲುಹಿಕೊಂಡು, ಅವನಿಗದೆಲ್ಲೋ ಒಂದಿಷ್ಟು ಸಮಾಧಾನ ಕೊಡ್ತಿರೋ,ಅವನದೊಂದಿಷ್ಟು ನಗುವಿನ ಮೂಲವಾಗಿರೋ ಅವಳಿಗೂ ನನ್ನದೊಂದು ನಮನ ....
ಇರಲಿ ಈ ಗೆಳೆತನ ಚಿರಕಾಲ ಹೀಗೇ ..
ಧನ್ಯವಾದ ಭಾಗ್ಯ.... ಚಂದದ ಪ್ರತಿಕ್ರಿಯೆಗೆ...
Deleteನಿಜ ಎಲ್ಲರಿಗೂ ಸಿಗಲಿ ಹೀಗೊಬ್ಬ ಗೆಳೆಯಾ... :-)
ದೀಪಾ ಜೀ -
ReplyDeleteಮನಸಿನಂಗಳದ ತುಂಬ ಸ್ನೇಹದ ಮಲ್ಲಿಗೆ ಬಳ್ಳಿ ಹಸನಾಗಿ ಹಬ್ಬಿ ಹರಡಿ ನಗೆಯ ಬಿಳಿ ಬಿಳಿ ಹೂವನರಳಿಸಿ ಘಮಘಮಿಸಲಿ... :)
ಅಳುವ ಮರೆಸಿ ಬರೀ ನಗುವನೇ ನೀಡೋ ಸ್ನೇಹ ನೂರು - ಸಾವಿರವಾಗಿ ನಿಮ್ಮ ಸೇರಲಿ... ನಗುವೇ ಬದುಕಾಗಲಿ... :)
ಒಂಥರಾ ಇಷ್ಟವಾಯ್ತು ಭಾವ ಬರಹ... :)
Thank u so much Shrivatsa....
Deleteನಿಮ್ಮ ಹಾರೈಕೆಗೆ... :-) :-D
ಅಕ್ಕಾ..
ReplyDeleteನನಗೂ ಆ ಹುಡುಗಿಯ ಥರದ್ದೇ ಒಬ್ಬ ಹುಡುಗನಿದ್ದಾನೆ.. ಇಲ್ಲಿರೋ ಅಷ್ಟೂ ಗುಣವಿಶೇಷಗಳನ್ನ ಹೊತ್ತು ಕೊಂಡಿರುವವ ಬಾಯ್ ಫ್ರೆಂಡು..
ಸಕ್ಕತ್ ಇಷ್ಟ ಆಯಿತು... ಇದ್ದಿದ್ದನ್ನ ಇದ್ದ ಹಾಗೆ ಬರೆಯೋದು ಕಷ್ಟ.. ನೀವು ಗೆದ್ದಿದಿರಿ ಆ ವಿಷಯದಲ್ಲಿ... ಅಭಿನಂದನೆಗಳು...
ಚಿರಕಾಲ ಇರಲಿ ಈ ಸ್ನೇಹ... :)
ವುಡ್ ಟಚ್ .... :)
ಸುಷ್ಮಾ.... ಥ್ಯಾಂಕ್ಯೂ ಸೊ ಮಚ್...
Delete:-)
ಚಂದದ ಬರಹ. RICHWOOD...
ReplyDeleteಧನ್ಯವಾದಗಳು....
DeleteNice. Carry on.
ReplyDeleteThank u....
DeleteExcellent simple story narration madam....Thank you
ReplyDeleteThank u very much :)
Delete