Thursday, 25 October 2012

ಆಹಾರ - ಅಲಂಕಾರ ...ಸುದೀಪ ಸ್ಟೈಲ್ ನಲ್ಲಿ....ಭಾಗ - 1

ಫೇಸ್ಬುಕ್ ಮನುಷ್ಯನ  ಮೇಲೆ ಹೇಗೆಲ್ಲಾ ಪ್ರಭಾವ ಬೀರಬಹುದು...???? ಇದರಿಂದ ಏನೆಲ್ಲಾ ಹೊಸ ಹೊಸ ವಿಚಾರಗಳನ್ನು 

ಕಲಿಯಬಹುದು ...?? 

 ಅದಕ್ಕೆ ಸಣ್ಣ ಉದಾಹರಣೆ ಈ ತಾಣದಲ್ಲಿ ಹರಡಿರುವ ವಿಧವಿಧದ ಗುಂಪುಗಳು...ಕೆಲವರಿಗೆ ಸಾಹಿತ್ಯ ಇಷ್ಟ ಆದರೆ ಇನ್ನು 

ಕೆಲವರಿಗೆ ಸಿನೆಮಾ,ಮತ್ತೊಬ್ಬರಿಗೆ ಕಲೆ,ಇನ್ನು ಕೆಲವರಿಗೆ ಗಾರ್ಡನಿಂಗ್ ...ಹೀಗೆ ಪಟ್ಟಿ ಬೆಳೆಯುತ್ತಾ  ಹೋಗುತ್ತದೆ ... ಅವರವರ 

ಅಭಿರುಚಿಗೆ ತಕ್ಕಂತೆ   ಸದಸ್ಯರು ತಮ್ಮ ತಮ್ಮ ಗುಂಪನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನೊಂದು 

ಉಪಯೋಗ ಅಂದರೆ ನಮ್ಮ ಅಭಿರುಚಿಗೆ ತಕ್ಕ ಹೊಸ ಹೊಸ ಸ್ನೇಹಿತರ ಭೇಟಿ ಪ್ರಪಂಚದ  ಮೂಲೆ  ಮೂಲೆಯಿಂದಲೂ  

ನಮಗೆ ಲಭಿಸುತ್ತಾರೆ .....

.ನನ್ನ ಇಷ್ಟದ ಗುಂಪು ಅಡಿಗೆಗೆ ಸಂಭಂದಿಸಿದ್ದು ..ಇತ್ತೀಚೆಗೆ  ಸೇರಿದ ಆಹಾರದ ಗುಂಪುಗಳಲ್ಲಿ ಮನೆಯಲ್ಲಿ ಮಾಡಿದ 

ಪದಾರ್ಥಗಳನ್ನು ನನ್ನದೇ ರೀತಿಯಲ್ಲಿ ಶೃಂಗರಿಸುವುದು  ನನ್ನ ಹವ್ಯಾಸಗಳಲ್ಲಿ ಒಂದು...ಅದರ ಕೆಲವು ಚಿತ್ರಗಳು ಈ ಬಾರಿಯ 

ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೇನೆ .....ಇದನ್ನು ನೋಡಿದ ಮೇಲೆ ಖಂಡಿತಾ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ... :)) 
ಹಲಸಿನ ಹಣ್ಣಿನ ಕಡುಬು  ನನ್ನ ಮೊದಲ ಪ್ರಯತ್ನ ಈ  ಆಹಾರ ಕಲೆಯಲ್ಲಿ 


ಸಾಧಾರಣವಾಗಿ   ಎಲ್ಲರ  ಮನೆಯಲ್ಲೂ  ತಯಾರಿಸುವ   ಅಕ್ಕಿಯ  ಒತ್ತು  ಶ್ಯಾವಿಗೆ .... ಇತ್ತೀಚಿನ  ಭಾಷೆಯಲ್ಲಿ  ರೈಸ್  ನೂಡಲ್ಸ್ .... ನಮ್ಮ  ಹೂವಿನ ಜಡೆ  ಅಥವಾ  ಮೊಗ್ಗಿನ  ಜಡೆ  ಮಾದರಿಯಲ್ಲಿ 
ನಾಗರಪಂಚಮಿಯಂದು  ಮಾಡಿದ ಅರಿಷಣ  ಎಲೆ ಕಡುಬು ಮಾಲತಿ ಚಿಕ್ಕಮ್ಮನಿoದ  ಕಲಿತ  ಪಡುವಲ  ಬೀಜದ ತಂಬಳಿ ಕ್ಯಾಬೇಜ್  ಪಲ್ಯ  ಬೆಳಿಗ್ಗೆ  ಒಂದು  ಮದುವೆ  ಪತ್ರಿಕೆಯಲ್ಲಿ  ನೋಡಿದ  ಗಣಪತಿಯಿಂದ  ಪಡೆದ  ಸ್ಪೂರ್ತಿ 
ನೂಲು ಹುಣ್ಣಿಮೆ ಹಬ್ಬದಂದು ನಾವು ಯಾವಾಗಲು ತಯಾರಿಸುವ ಉದ್ದಿನಬೇಳೆಯ  ಕಡುಬು 
 ಬ್ರಾಹ್ಮಣನ ಆಕಾರ ದಲ್ಲಿ 
ರಾಖಿ ಹಬ್ಬಕ್ಕೆಂದು ತಯಾರಿಸಿದ  ಸಾಬುದಾನ ಪಾಯಸ 
ಅಕ್ಕಿ ಬೇಳೆ  ಕಾಳುಗಳಿಂದ  ತಯಾರಿಸಿದ ಕಾರ್ಟೂನ್  ಚಿತ್ರ 

ಹಾಗಲಕಾಯಿ ಮೊಸಳೆ 
ಹಾಗಲಕಾಯಿ ಎಣ್ಣೆಯಲ್ಲಿ ಫ್ರೈ ಮಾಡಿ ಹೀಗೊಂದು  ಚಿತ್ರ ನಮ್ಮ ಪತ್ರೋಡೆ   ಎಂಬ ತಿನಿಸಿಂದ   ಪಾಂಡಾ ಪ್ರಾಣಿಯ ಪ್ರತಿಕೃತಿ
ನಮ್ಮ ಇಷ್ಟದ ದಾಳಿತೋವೆ   ತೊಗರಿಬೇಳೆಯಿ0ದ  ಮಾಡಿದ್ದು 

ನನ್ನ ಪ್ರೀತಿಯ  ಮಾವಿನ ಹಣ್ಣಿನ ಸಾಸಿವೆ  
ಎಲ್ಲರ ಮನೆಯಲ್ಲೂ ಮಾಡುವ ಪುಲಾವ್  ಹಲಸಿನ ಬೀಜದ ಚಟ್ನಿ 
ನಮ್ಮ ಜಂಬೋ  ಸೆವೆನ್ ಕಪ್ ಬರ್ಫಿ  


ಹೀರೇಕಾಯಿ ಸಿಪ್ಪೆ ಚಟ್ನಿ ಒಂದು ಚಿತ್ರ ನೋಡಿ ಪ್ರೇರಣೆ ಪಡೆದಿದ್ದು ಮರಕೆಸು ಎಲೆಯ ಪತ್ರೊಡೆ ಮಳೆಗಾಲದ ತಿನಿಸು 

ಕ್ಯಾಬೇಜ್ ಅಂಬಡೆ  ನನ್ನದೇ ಶೈಲಿಯಲ್ಲಿ  


ನೇಂದ್ರ  ಬಾಳೆ  ಹಣ್ಣಿನ  ಸಿಹಿ ಹುಳಿ ಕೇರಳದ ಪುಕಳಮ್  ಶೈಲಿಯಲ್ಲಿ 
ಕೃಷ್ನಾಷ್ಟಮಿಗೆ  ನೈವೇದ್ಯಕ್ಕೆಂದು  ತಯಾರಿಸಿದ ಸಿಹಿ ಅವಲಕ್ಕಿ
ಬೆಳ್ಳುಳ್ಳಿ ಚಟ್ನಿ ಹೂವಿನ ಜೊತೆ 


ನಾವು ಬೆಳಗಿನ ತಿಂಡಿಗೆ ತಯಾರಿಸುವ ಗೋಧಿ ಶ್ಯಾವಿಗೆ ಉಸ್ಲಿ ಈ ಚಿತ್ರವನ್ನು ನನ್ನ ಮೊದಲ ಬರಹದಲ್ಲಿ ನೋಡೇ ಇರ್ತೀರಾ  ಬೆಳ್ಳುಳ್ಳಿ ಚಟ್ನಿ ಪುಡಿ ಉಪ್ಪಿಟ್ಟು ...ಛೋ ಟು  ಇಲಿಗಳ ಆಕಾರದಲ್ಲಿ 


ಸಿಂಪಲ್ ತರಕಾರಿ ಪಲ್ಯ 


ಹಯಗ್ರೀವ ಎಂಬ ಸಿಹಿ ಮೆಹಂದಿ ರೂಪದಲ್ಲಿ ನಮ್ಮ ಉಪ್ಪಿಟ್ಟು ಅವಲಕ್ಕಿ ಕರ್ನಾಟಕ ಸ್ಪೆಷಲ್ ಇಷ್ಟೆಲ್ಲಾ  ಚಿತ್ರಗಳನ್ನು  ನೋಡಿ  ಸುಸ್ತಾದರೆ   ಕೆಳಗಿನ   ತಂಪು ತಂಪು   ಐ ಸ್ ಕ್ರೀಮ್  ಸವಿಯಿರಿ... :))


ಥಂಡಾ  ಥಂ ಡಾ  ಐ ಸ್ ಕ್ರೀಮ್ 


ಧನ್ಯವಾದಗಳು....ಸ್ನೇಹಿತರೇ.....

ಪ್ರೀತಿಯಿಂದ

ಸುದೀಪ.........


Thursday, 4 October 2012

ಹೆಸರಿನಲ್ಲೇನಿದೆ...????!!!!"ಹೆಸರಿನಲ್ಲೇನಿದೆ"....ಯಾರಿಗಾದರೂ ಈ ಪ್ರಶ್ನೆ ಕೇಳಿದರೆ ಉತ್ತರ ಬಹುಷಃ ಹೀಗಿರುತ್ತೆ...."ಅಯ್ಯೋ...ಅದು ಗುರುತು ಹಿಡಿಯಲಿಕ್ಕೆ ಒಂದು ಐಡೆಂಟಿಟಿ ಮಾತ್ರ.."  ಅಥವಾ.."ಮನುಷ್ಯನ ಗುಣ, ನಡತೆ, ವ್ಯಕ್ತಿತ್ವ ಮಾತ್ರ ಮುಖ್ಯ...ಹೆಸರಲ್ಲೇನಿದೆ... ಮಣ್ಣು..." ಇನ್ನೂ ಕೆಲವರು..."ಹೋಗ್ರಿ ಸುಮ್ನೆ..ಒಳ್ಳೊಳ್ಳೆ ದೇವರ ಹೆಸರೆಲ್ಲಾ ಇಟ್ಟುಕೊಂಡು ಅವರು ಮಾಡೋ ಅನಾಚಾರ ನೋಡಿದ್ರೆ ಸಾಕು...." ಹೀಗೆ ಅವರವರ ಭಾವಕ್ಕೆ ತಕ್ಕಂತೆ ಉತ್ತರ ಕೊಡಬಹುದು....

ಆದರೆ ನನ್ನ ಮಟ್ಟಿಗಂತೂ ನನ್ನ ಹೆಸರಿನ ಹಿಂದೆ ತುಂಬಾ ಹಳೆಯ ನೆನಪುಗಳಿವೆ...ಅದನ್ನೇ ಬರೆಯೋಣ ಅಂತ ಇಷ್ಟೊತ್ತು ಪೀಠಿಕೆ ಹಾಕಿದ್ದು...ಅದನ್ನು ನಿಮಗೆ ಹೇಳೊಕ್ಕೆ ಮುಂಚೆ ನನ್ನ "ಅಮೊಮ"(ಅಜ್ಜಿ) ಬಗ್ಗೆ ಸ್ವಲ್ಪ ಹೇಳಲೇ ಬೇಕಾಗುತ್ತೆ...ಇಲ್ಲಾ ಅಂದ್ರೆ ಈ ಕಥೆ ಮುಂದುವರಿಸಲಿಕ್ಕೆ ಆಗೋದಿಲ್ಲ...ಅಂದ ಹಾಗೆ ನನ್ನ ಪ್ರೀತಿಯ ಅಜ್ಜಿ ಶ್ರೀಮತಿ. ಶಾಂತ ಶೆಣೈ.ಹಳೆಯ ನೆನಪು ಪ್ರೀತಿಯ ಅಮೊಮನೊಂದಿಗೆ

ನನ್ನ ತಂದೆ ತಾಯಿಗೆ ನಾನು ಹತ್ತು ವರ್ಷ ನಂತರ ಹುಟ್ಟಿದ ಮಗಳು..ಅದಕ್ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ದೇವಸ್ಥಾನದಲ್ಲಿ ನನ್ನ ಹೆಸರು ಇಡ್ತೀವಿ ಅಂತ ಹರಕೆ ಹೊತ್ತಿದ್ರಂತೆ. ಸರಿ..ಹಾಗೆ ನನಗೆ ತೊಟ್ಟಿಲು ಶಾಸ್ತ್ರ ಮಾಡುವಾಗ ಹೆಸರು ಇಟ್ಟಿಲ್ಲ. ಮನೆಯಲ್ಲಿ ನಾನೇ ಚಿಕ್ಕ ಮಗು ಆಗಿದ್ದರಿಂದ ಎಲ್ಲರಿಗೂ ನನ್ನ ಕಂಡ್ರೆ ಸ್ವಲ್ಪ ಜಾಸ್ತೀನೆ ಪ್ರೀತಿ..ನಾನು ಚಿಕ್ಕವಳಿರುವಾಗ ನಮ್ಮ ತೀರ್ಥಹಳ್ಳಿ ಮನೆಯಲ್ಲಿ ಸುಮಾರು ೨೦ ಜನ ಇದ್ದರು.ನಮ್ಮದು ಅವಿಭಕ್ತ ಕುಟುಂಬ. ಹೀಗಾಗಿ ಮಗುವಿಗೆ ನಾಮಕರಣದ ಶಾಸ್ತ್ರ ಮಾಡೋದು ಹೇಗೂ ತಡ ಉಂಟು....ಅದಕ್ಕೆ ಅಲ್ಲಿಯವರೆಗೂ ನನ್ನ ಅಮೊಮ ಎಲ್ಲರಿಗೂ "ಮಗೂನ್ನ "ದೀಪ" ಅಂತ ಕರೀರಿ" ಅಂದ್ರಂತೆ...ಮನೆಯಲ್ಲಿ ಅಷ್ಟು ಜನ ಇದ್ರೂ ಒಬ್ಬರೂ "ದೀಪ" ಅನ್ನೋ ಹೆಸರನ್ನು ಕರೆದಿಲ್ಲ. ತಮಗೆ ತೋಚಿದ ಅಡ್ದ ಹೆಸರಿನಿಂದಲೇ ಕರೆಯುತ್ತಿದ್ದರು. ಇಂದೂ ಸಹಾ ಹಾಗೇ ಕರೆಯುತ್ತಾರೆ..ಆದರೆ ನನ್ನ ಅಮೊಮ ಮಾತ್ರ ತನ್ನ ಕೊನೆ ಉಸಿರಿನವರೆಗೂ ನನ್ನನ್ನು "ದೀಪ".."ದಿಪ್ಪೂ" ಅಂತಾನೇ ಕರೀತಿದ್ರು... :)) ಅವರ ಕಾಲವಾದ ನಂತರ ಎಲ್ಲರಿಗೂ, ನನ್ನನ್ನೂ ಸೇರಿಸಿ ಹೆಚ್ಚು-ಕಮ್ಮಿ ಆ ಹೆಸರೇ ಮರೆತು ಹೋಗಿತ್ತು. ಅನ್ನಬಹುದು...

ಹೀಗೆ ಸ್ಕೂಲ್, ಕಾಲೇಜ್ ವಿಧ್ಯಾಭ್ಯಾಸ ಆಯ್ತು..ಅಲ್ಲೆಲ್ಲಾ ನಾನು "ಸುಮತಿ" ಎಂಬ ಹೆಸರಿನಿಂದಲೇ ಪರಿಚಿತೆ..ಅದು ನನಗೆ ದೇವಸ್ಥಾನದಲ್ಲಿ ಇಟ್ಟ ಹೆಸರು... :))

ನಂತರ ಮದುವೆಯಾಯ್ತು..ನಮ್ಮಲ್ಲಿ ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಹೆಸರು ಬದಲಿಸುವ ಶಾಸ್ತ್ರ ಇದೆ..ಮದುವೆ ಮಂಟಪದಲ್ಲೇ ಹೊಸ ಹೆಸರನ್ನು ಅತ್ತೆ-ಸೊಸೆಯ ಕಿವಿಯಲ್ಲಿ ಮೂರು ಸಾರಿ ಹೇಳುತ್ತಾರೆ..ಯಾವಾಗಲೂ ಮದುವೆಗಳಲ್ಲಿ ಇದೊಂದು ಕುತೂಹಲದ ವಿಚಾರ..ಮದುಮಗಳಿಗೆ ಹೊಸ ಹೆಸರು ಏನಿರಬಹುದೆಂದು...??? ಹಾಗೆ ನನ್ನ ಮದುವೆಯಲ್ಲಿ ಸಹಜವಾಗಿ ನಾನು ಸ್ವಲ್ಪ ಉತ್ಸುಕಳಾಗಿದ್ದೆ..ನನ್ನ ಗಂಡನ ಹೆಸರು.."ದೇವದತ್" ಹಾಗಾಗಿ ನನ್ನ ಹೆಸರು ಹೇಗಿರಬಹುದು...!!!! ಸರಿ ಅತ್ತೆ ನನ್ನ ಕಿವಿಯ ಹತ್ತಿರ ಬಂದು ಹೇಳಿದ ಹೆಸರು ನನ್ನನ್ನು ಸಂತೋಷ ಮತ್ತು ಆಶ್ಚರ್ಯ ಎರಡನ್ನೂ ಆ ಘಳಿಗೆಯಲ್ಲಿ ಉಂಟು ಮಾಡಿತ್ತು... ಅವರು ನನಗೆ ಇಟ್ಟ ಹೆಸರು ಸಹಾ "ದೀಪ"...ಸುಮಾರು ೧೨ ವರ್ಷಗಳ ಹಿಂದೆ ಮರೆತಿದ್ದ ಹೆಸರಿಗೆ "ಪುನಃ ಜೀವ" ಬಂದಿತ್ತು...ಅಮೊಮನ ನೆನಪನ್ನು ಆ ಸಮಯದಲ್ಲಿ ತರಿಸಿತ್ತು.. :)) ಈಗ ಗಂಡನ ಮನೆಯಲ್ಲಿ ಎಲ್ಲರಿಗೂ ನಾನು "ದೀಪ"...ಬಹುಷಃ ಅವರು ಎರಡಕ್ಷರದ ಹೆಸರು...ಕರಿಯಲಿಕ್ಕೆ ತುಂಬಾ ಸುಲಭ...ಹಾಗೇ "ದೀಪ ದೇವದತ್" ಹೀಗೆ ಆಲೋಚನೆ ಮಾಡಿದ್ದರೆನಿಸುತ್ತೆ.. :)) ಇದು ನನ್ನ ಹೆಸರಿನ ಹಿಂದೆ ಇರುವ ಸಣ್ಣ ಕಥೆ...

ಆಂದ ಹಾಗೇ ಸ್ವಲ್ಪ ದಿನದ ಹಿಂದೆ ನಾನು ಹೊಸ ಬ್ಲಾಗ್ ಶುರು ಮಾಡಿದಾಗ... ಏನು ಹೆಸರು ಇಡಲಿ ಎಂದು ಆಲೋಚನೆ ಮಾಡ್ತಿದ್ದಾಗ... "ಸುದೀಪ" ಹೆಸರು ಆಯ್ಕೆ ಮಾಡಿಕೊಂಡಿದ್ದೆ...ಸುಮತಿಯ.."ಸು"+"ದೀಪ" = "ಸುದೀಪ" ....ನನ್ನ ಎರಡು ಹೆಸರುಗಳ ಸಮಾಗಮ...ಚೆನ್ನಾಗಿದೆ ಅನ್ನಿಸ್ತು... :)) ನನಗಂತೂ ಇಷ್ಟ ಆಯ್ತು..ಓದುವ ನಿಮಗೆ ಹೇಗನಿಸ್ತೋ ಗೊತ್ತಿಲ್ಲ...

ನಿಜ.. ಹೆಸರಿಗಿಂತ ಪ್ರೀತಿ, ಗುಣ, ನಡತೆ, ಒಳ್ಳೆಯ ವ್ಯಕ್ತಿತ್ವ ತುಂಬಾನೆ ಮುಖ್ಯ..ಆದರೂ ಕೆಲವೊಮ್ಮೆ ಇದೆಲ್ಲಾ ನೆನಪಾಗುತ್ತೆ..:))

ಯಾವಾಗಲೂ ಪ್ರೀತಿಯಿಂದ ನಿಮ್ಮೆಲ್ಲರ....

ಸುದೀಪ... :))