Wednesday, 10 April 2013

ಆಹಾರ-ಅಲಂಕಾರ ಸುದೀಪ ಸ್ಟೈಲ್ ನಲ್ಲಿ ......ಭಾಗ - 2


ಈ  ಫೇಸ್ಬುಕ್ ನಿಜಕ್ಕೂ ಒಂದು ರೀತಿ ಕಲಿಕೆಯ ತಾಣವಾಗಿದೆ. ಸ್ವಲ್ಪ ಫ್ರೀ ಸಮಯ, ತುಂಬಾ ಒಳ್ಳೆ ಮೂಡ್ ಇದ್ದಾಗ ನಮ್ಮ ಕೆಲವೊಂದು ಫುಡ್ ಗ್ರೂಪ್ಗೊಸ್ಕರ, ಕೆಲವೊಮ್ಮೆ ಆಹಾರದಲ್ಲಿ ನಂಗೆ  ಇಂತಹಾ ತರಲೆ, ಕಿತಾಪತಿ ಮಾಡೋ ಆಸೆ ಆಗುತ್ತೆ. ಆದ್ರೂ ಇತ್ತೀಚೆಗೆ  ತುಂಬಾನೇ ಸೋಮಾರಿಯಾಗಿದ್ದೀನಿ. ಆದರೂ  ಕೆಲವು ದಿನನಿತ್ಯದ ಅಡಿಗೆಗಳನ್ನ ನಮ್ಮ ಫುಡ್ ಗ್ರೂಪ್ನಲ್ಲಿ upload ಮಾಡಿದ ವಿಭಿನ್ನ  ಚಿತ್ರಗಳು ಇವು. ಒಂದೆರಡು ನಿಮಿಷದಲ್ಲಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ :-) 


ಅದ್ಯಾಕೋ ಇದು ನನ್ನ ಇಷ್ಟದ picture . ಸಿಂಪಲ್ ಆಗಿ + healthy ಆಗಿ  ಒಂದು ಪಾಲಕ್ ಸೊಪ್ಪಿನ ಪಲ್ಯ ,  ಪುಟ್ಟ handbag ಮಾದರಿಯಲ್ಲಿ :-) 

ಕುಕ್ಕರ್ನಲ್ಲಿ  ಮೊದಲ ಬಾರಿ ಮಾಡಿದ ಬಿಸ್ಕಿಟ್ ಕೇಕ್ ಪ್ರಯತ್ನ :-)ಹೀರೆಕಾಯಿ ಪಲ್ಯ ಹಾಗೆ ಸುಮ್ನೆ...


ನಮ್ಮ alltime fav ಮೆಣಸಿನ ಬೋಂಡಾ


ಕಹಿ ಹಾಗಲಕಾಯಿ deepfry.... ಆದ್ರೂ ಟೇಸ್ಟಿ ಮತ್ತು healthy 


ನಮ್ಮ food groupನಲ್ಲಿ ಪ್ರತಿ ತಿಂಗಳು 11ಕ್ಕೆ artistic food deco  theme  ಇರುತ್ತೆ . ಈ ಬಾರಿ ಅವಸರ ಅವಸರ ವಾಗಿ ಸ್ನೇಹಿತರ ಒತ್ತಾಯಕ್ಕೆ ಅರ್ಧ ಘಂಟೆಯಲ್ಲಿ ತಯಾರಿಸಿದ ರವಾ ಕೇಸರಿಬಾತ್, ಪುಟ್ಟ ಮಕ್ಕಳ ಸಲ್ವಾರ್ ಸೂಟ್   ಶೈಲಿಯಲ್ಲಿ :-)ಖಾರ ಪೊಂಗಲ್ ..ರಥದ ಶೇಪ್ ಕೊಡೋ ದುಸ್ಸಾಹಸ. 
ಕುಂಬಳಕಾಯಿ ಹುಳಿ .... ಏನಾದರೂ ಅರ್ಥ ಆಯ್ತಾ? :-P 


ಚೀನಿಕಾಯಿ ಪಲ್ಯ... ಲೈಕ್ ದ ಕಲರ್ .... 


apple ರಬ್ಡಿ , ಫೋಟೋ ಕ್ಲಿಕ್ ಮಾಡುವಾಗ ಸಿಕ್ಕಿದ್ದು ಒಂದು ಚಂದದ  invitation ....  i ಲೈಕ್ ಇಟ್  ಅಷ್ಟೇ .... 

ಮಾವಿನ ಹಣ್ಣಿನ ಸೀಸನ್ ಶುರುವಾಯ್ತು.ಇದು ನನ್ನ ಇಷ್ಟದ pineapple ಮೆಣಸುಕಾಯಿ ...tasty ಟೇಸ್ಟಿ ...yummy  ಯಮ್ಮಿ ... :-)


ಇದೊಂದು ಸಿಂಪಲ್ ಅಳಸಂದೆ ಪಲ್ಯ.  ಒಂದು ನೆಕ್ಲೆಸ್  ಮತ್ತು earring  ಆಕಾರದಲ್ಲಿ  ಪ್ರೆಸೆಂಟ್ ಮಾಡಿದ್ದು  :-)


ಮಾವಿನಹಣ್ಣಿನ ಸಾಸಿವೆಯ ಇನ್ನೊಂದು ಅವತಾರ್ :-)

ಈ ಚಿತ್ರ ಅವತ್ತೊಮ್ಮೆ ಮನೆಯಲ್ಲಿ ತಯಾರಿಸಿದ ಕಡಲೆಬೇಳೆ ಹೋಳಿಗೆಯದ್ದು .  ಹೋಳಿಗೆ  ತಯಾರಿಸಿ ಪ್ಲೇಟ್ ನಲ್ಲಿ ಇಟ್ರೆ  ಯಾಕೋ ತುಂಬಾ dull ಅನ್ನಿಸ್ತು ಅಂತ ಚಂದದ ಈ ನೃತ್ಯಗಾತಿಯರ ಚಿತ್ರದ ಜೊತೆ ಕ್ಲಿಕ್ ಏನೋ ಮಾಡ್ದೆ. Dancers ತುಂಬಾ bright ಆಗಿ ಕಾಣ್ತಾ ಇದ್ದಾರೆ, but ಹೋಳಿಗೆಗಳು ಪುನಃ ಡಲ್  :-p 

ಮನೆಯಲ್ಲಿ ಯಾವಾಗಲು ಮಾಡುವ ಬೆಳ್ಳುಳ್ಳಿ ಚಟ್ನಿಗೆ ಪುಟ್ಟ ಕೈಗನ್ನಡಿ (ಹ್ಯಾಂಡ್ mirror ) ಆಕಾರ ನಿಡುವ ಹುಚ್ಚು ಪ್ರಯತ್ನ . 


ಗೋಬಿ ................ homemade :-)


ಯಾವಾಗಲೂ ರೆಸ್ಟೋರೆಂಟ್ ಗೆ ಹೋದಾಗ order ಮಾಡುವ 'ಪನೀರ್ ಬಟರ್ ಮಸಾಲ' ಮನೆಯಲ್ಲಿ ತಯಾರಿಸಿದಾಗ ಅದರ ಲುಕ್ ಹೀಗಿತ್ತು :-)

ಇದನ್ನೆಲ್ಲಾ ನೋಡಿದ ನೀವು, ಸುದೀಪನಿಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂತ ಬೈಕೊಂಡಿರಬಹುದು. ಪರವಾಗಿಲ್ಲ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ, ನನ್ನನ್ನ ಸಹಿಸಿಕೊಳ್ಳಿ ... :-P 


ಪ್ರೀತಿಯಿಂದ 

ಸುದೀಪ... 

18 comments:

 1. ವಾಹ್ ಸಕ್ಕತ್ತಾಗಿವೆ ಅಲಂಕಾರ... ಬಾಯಲ್ಲಿ ನೀರು ಬರ್ತಾ ಇದೆ. ಇಪ್ಪತ್ತನೇ ಸಂಚಿಕೆಗೆ ಶುಭಾಶಯಗಳು ಮುನ್ನಡೆಯಲಿ ಹೀಗೆ

  ReplyDelete
  Replies
  1. ಧನ್ಯವಾದಗಳು ಮನಸು :-)

   Delete
 2. ವಾಹ್.. ಬಾಯಲ್ಲಿ ನೀರು... ಈ ರೀತಿ ಅಲಂಕಾರ ಮಾಡಿ ನನ್ನ ಮುಂದಿಟ್ಟರೆ.. ನಾನಂತೂ ಅಲಂಕಾರ ಕೆಡಿಸಿ ತಿನ್ನಲಾರೆ.. :)
  ನಿಮ್ಮ ಕ್ರಿಯೇಟಿವಿಟಿ ತುಂಬಾ ಇಷ್ಟ ಆಗತ್ತೆ ಅಕ್ಕಾ...
  ಸೂಪರ್ ..

  ReplyDelete
  Replies
  1. ಹ..ಹ...ಸುಷ್ಮಾ... thank u for u r sweet words. :-)

   Delete
 3. ನೋಟದಾಗೆ ಚಿತ್ರಗಳ ಮೀಟಿ
  ರುಚಿಯಾಗೆ (ಬಾಳೇ)ಎಲೆಯ ದಾಟಿ
  ರುಚಿಯಾದ ಲೇಖನ ಕೊಡುವ ಸಹೋದರಿಯ ಹೆಸರು
  ಅಕ್ಷರಗಳಲ್ಲಿ ದೀಪವ ಹಚ್ಚುವ ಸುದೀಪ.
  ಸೂಪರ್ ತಿಂಡಿ-ತಿನಿಸುಗಳ ಚಿತ್ರ ಲೇಖನ....

  ReplyDelete
  Replies
  1. ನಿಮ್ಮ ಚಂದದ ಪ್ರತಿಕ್ರಿಯೆಗೆ ಮತ್ತು ಯಾವಾಗಲೂ ನೀವು ನೀಡುವ ಪ್ರೋತ್ಸಾಹಕ್ಕೆ ಧನ್ಯವಾದಗಳು ಶ್ರೀಕಾಂತ್... :-)

   Delete
 4. nice to see ur pld pics sumi..waiting for more

  ReplyDelete
 5. wow munna u r so creative. my fav were holige/kesaribhaath (dress) and alsande..just sooper...loved it go...
  :-)
  pachchi

  ReplyDelete
  Replies
  1. Ohhh.... thank u so much pacchi, its just a timepass nothing else.... :-)

   Delete
 6. really yummmmieee.....very creative ....soooper sumati

  ReplyDelete
 7. ಚೂಡಿದಾರಿನ ಕೇಸರಿ ಬಾತು tops my list...you are so talented.
  But ಅಲಂಕಾರ ಹಾಳುಮಾಡಿ ತಿನ್ನೋಕೆ ಮನಸು ಬರಲ್ಲ :) :(

  ReplyDelete
  Replies
  1. ಒಹ್...ಧನ್ಯವಾದಗಳು ಸ್ವರ್ಣ ಅವರೆ ಇಷ್ಟ ಪಟ್ಟಿದ್ದಕ್ಕೆ :-)

   Delete
 8. ಅನ್ಯಾಯನಪ್ಪಾ ಇದು...ಹೀಗೆ ಬಾಯಲ್ಲಿ ಜೊಲ್ಲು ಉಕ್ಕೋ ಹಾಗೆ ಮಾಡಿ...ನೋಡಿ ಹೇಳಿ ಅಂದ್ರೆ...?? ಹೇಳೋದಾ... ಸುಮ್ನೆ ಉಗುಳು ನುಂಗೋದಾ ಹೇಳಿ...???!!!

  ReplyDelete
  Replies
  1. ಅಜಾದ್ ಭಾಯ್... ಬೇರೆ ಉಪಾಯ ಇಲ್ಲ... ನೋಡಿ ಆನಂದಿಸಿ ಅಷ್ಟೇ :-)

   Delete