ಇನ್ನೊಂದು ತಿಂಗಳು ಕಳೆದರೆ ಈ ಘಟನೆ ನಡೆದು ೧೧ ವರ್ಷ ತುಂಬುತ್ತದೆ...ಆ ದಿನದ ನೆನಪಾದರೆ ಇಷ್ಟು ಬೇಗ ಕಳೆಯಿತೇ ಆ
ಹನ್ನೊಂದು ವರ್ಷ ಎಂದೆನಿಸುವುದು ಸುಳ್ಳಲ್ಲ....ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಒಂದು ಮೂಲೆಯಲ್ಲಿ ಈ ಭಯಾನಕ
ದುರಂತ ಆ ದಿನ ನಡೆದಿತ್ತು... ಇದನ್ನು ಕರಾಳ ದಿನವೆಂದೇ ಹೇಳಬಹುದು..ಇಡೀ ಪ್ರಪಂಚವನ್ನೇ ಅಲುಗಾಡಿಸಿತ್ತು ಆ ದಿನ ..
ಅವತ್ತು ಸೆಪ್ಟೆಂಬರ್ ಹನ್ನೊಂದು ಎರಡು ಸಾವಿರದ ಒಂದನೇ ಇಸವಿ.. ಆ ದಿನ ನನ್ನ ಮದುವೆಯಾಗಿ ಕೇವಲ ಹತ್ತು ದಿನ
ಕಳೆದಿತ್ತಷ್ಟೆ..ಹೊಸ ಜೀವನ, ಹೊಸ ಪರಿಸರ, ಹೊಸ ಸಂಬಂಧಗಳು ಹೀಗೆ ನಿರಾತಂಕವಾಗಿ ಸಾಗಿತ್ತು...ಆ ದಿನ ಸಹಾ
ಮಾಮೂಲಿನಂತೆ ಬೆಳಕಾಗಿತ್ತು..ಬೆಳಗಿನ ತಿಂಡಿ ಆದ ಮೇಲೆ ಯಜಮಾನರು ತಮ್ಮ ಕೆಲಸಕ್ಕೆ ಆಫೀಸಿಗೆ ಹೋಗಿದ್ದರು.. ಮನೆ
ಗುಡಿಸಿ,ಒರೆಸಿ ಆದ ಮೇಲೆ ಮಧ್ಯಾಹ್ನದ ಅಡಿಗೆ ತಯಾರಿ ಸಹಾ ಮುಗಿದಿತ್ತು..ಸುಮಾರು ಒಂದು ಘಂಟೆಗೆ ಯಜಮಾನರು
ಊಟಕ್ಕೆ ಬಂದು ಊಟ ಮಾಡಿ ಪುನಃ ಆಫೀಸಿಗೆ ಹೋಗಿ ಆಗಿತ್ತು.. ಮಧ್ಯಾಹ್ನ ನಾನು ಸಹಾ ಊಟ ಮಾಡಿ ಒಂದು ಸಣ್ಣ ನಿದ್ದೆ
ತೆಗೆದು ಸಂಜೆಯ ಚಹಾ ತಯಾರಿ ನಡೆದಿತ್ತು..ಸಂಜೆ ಸುಮಾರು ಐದು ಘಂಟೆ ಆಗ್ತಾ ಬಂದಿತ್ತು.. ಅಷ್ಟರಲ್ಲಿ ಫ್ಹೋನ್
ರಿಂಗಾಯಿತು..ಯಾರಪ್ಪ ಅಂತ ಯೋಚನೆ ಮಾಡ್ತಾ...ಹಲೋ...ಅಂದಾಗ ಧ್ವನಿ ಯಜಮಾನರದ್ದೆ ಆಗಿತ್ತು...ಏನಪ್ಪ...ಇಷ್ಟು
ಹೊತ್ತಿನಲ್ಲಿ ಅಂತ ಕೇಳಿದಾಗ "ಟಿ ವಿ ನೋಡ್ತಾ ಇದ್ದೀಯಾ" ಅಂದರು.."ಇನ್ನು ಹಾಕಿಲ್ಲ...ಚಹಾ ಆಗ್ತಾ ಇದೆ" ಅಂದೆ..ಅದಕ್ಕೆ
ಅವರು ಬೇಗ ನ್ಯೂಸ್ ಚಾನಲ್ ನೋಡು ಅಂತ ಫ್ಹೊನ್ ಕಟ್ ಮಾಡಿದ್ರು ಅಂಥಹದ್ದೇನಪ್ಪ ನ್ಯೂಸ್ ಅಂಥ ಟಿ ವಿ
..ಚಾಲೂ ಮಾಡಿದ್ರೆ...ಬ್ರೇಕಿಂಗ್ ನ್ಯೂಸ್ಗಳ ಸರಮಾಲೆಯೇ ನಡೆದಿತ್ತು...ನನಗೆ ಒಂದು ಕ್ಷಣ ಅದನ್ನು ಅರ್ಥ ಮಾಡಿಕೊಳ್ಳಕ್ಕೆ
ಕೆಲವು ನಿಮಿಷಗಳೇ ಬೇಕಾಯ್ತು.. ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ಎರಡು ಗಗನಚುಂಬಿ ಬೃಹತ್ ಕಟ್ಟಡಗಳಿಗೆ
ವಿಮಾನ ಡಿಕ್ಕಿ ಹೊಡೆದ ವಿಡಿಯೋಗಳು ಪ್ರಸಾರವಾಗುತ್ತಿತ್ತು..ಒಂದು ಕಟ್ಟಡಕ್ಕೆ ವಿಮಾನ ಅಪ್ಪಳಿಸಿ ಬೆಂಕಿ
ಹೊತ್ತಿಉರಿಯುವಾಗಲೇ ಸ್ವಲ್ಪ ನಿಮಿಷದಲ್ಲಿ ಇನ್ನೊಂದು ವಿಮಾನ ಮತ್ತೊಂದು ಕಟ್ಟಡಕ್ಕೆ ಅಪ್ಪಳಿಸುತ್ತದೆ. ಕ್ಷಣಾರ್ಧದಲ್ಲಿ
ಬೆಂಕಿಯ ಹೊಗೆ ಆ ಅಂತಸ್ತುಗಳಿಗೆಲ್ಲ ಹರಡುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜನಗಳು ಕಿಟಕಿಗಳಿಂದ ಹಾರುತ್ತಿರುವ
ದ್ರಶ್ಯ,ಇನ್ನೊಂದು ಸ್ವಲ್ಪ ಸಮಯದಲ್ಲೇ ಎರಡೂ ಕಟ್ಟಡಗಳು ನೆಲಕ್ಕೆ ಉರುಳಿ ಬೀಳುತ್ತದೆ. ಇಷ್ಟೆಲ್ಲಾ ಸುಮಾರು ಒಂದು
ಘಂಟೆಯಲ್ಲಿ ನಡೆದು ಹೋಗುತ್ತದೆ. ಸಾವಿರಾರು ಜನರು ತಮ್ಮ ಪ್ರಾಣ ಯಾವುದೇ ತಪ್ಪು ಮಾಡದೇ ಕಳೆದುಕೊಳ್ಳುತ್ತಾರೆ..
ಅಲ್ಲಿ ಆಗ ಸುಮಾರು ಬೆಳಿಗ್ಗೆ ಒಂಬತ್ತು ಘಂಟೆಯ ಸಮಯ. ಸಹಜವಾಗಿ ನೌಕರರು ತಮ್ಮ ಕಛೇರಿಗಳಲ್ಲಿ ಕೆಲಸ ಶುರು
ಮಾಡಿಕೊಂಡಿದ್ದರು.ಮನೆಯಿಂದ ಹೊರಡುವಾಗ ಅವರು ಕನಸು ಮನಸ್ಸಿನಲ್ಲೂ ಇಂಥಹ ವಿಧ್ವಂಸಕ ಕೃತ್ಯ ನಡೆಯುತ್ತದೆ
ಅಂದು ಬಹುಶಃ ಯೋಚಿಸಿರಲಿಕ್ಕಿಲ್ಲ. ಕೆಳಗೆ ಜನರ ಆಕ್ರಂದನ, ಆಶ್ಚರ್ಯದಿಂದ ನೋಡುತ್ತಿರುವ ಜನಗಳು, ಆಂಬುಲೆನ್ಸ್, ಫ಼ೈರ್
ಎಂಜಿನ್ಗಳ ರೊಯ್...ರೊಯ್..ಸದ್ದು...ಇಡೀ ವಾತಾವರಣವೇ ಗೊಂದಲಮಯ.. ಒಬ್ಬ ಕಲ್ಲು ಹೃದಯದ ವ್ಯಕ್ತಿಯ ಕೃತ್ಯದಿಂದ
ಅದೆಷ್ಟೋ ನಿರ್ದೋಶಿ ಜೀವಿಗಳ ಮಾರಣಹೋಮ..
ಪ್ರತಿವರ್ಷ ನನ್ನ ಮದುವೆಯ ವಾರ್ಶಿಕೋತ್ಸವ ಬಂದಾಗಲೂ ಈ ಘಟನೆ ಮನಸ್ಸಿನಲ್ಲಿ ಆ ದಿನದ ನೆನಪನ್ನು ಮೆಲಕು
ಹಾಕುತ್ತದೆ.. ನಮ್ಮ ಮನೆಯಲ್ಲಿ ಸಂಭ್ರಮದಲ್ಲಿ ಸಿಹಿ ತಿಂದು ಆಚರಿಸಿದರೆ ಇನ್ನು ಹತ್ತೇ ದಿನದಲ್ಲಿ ಅದೆಷ್ಟೋ ಮನೆಗಳಲ್ಲಿ ತಮ್ಮ
ತಂದೆ ತಾಯಿಯನ್ನೋ, ಸಹೋದರ ಸಹೋದರಿಯರನ್ನೋ, ಆತ್ಮೀಯ ಸ್ನೇಹಿತರನ್ನೋ, ಕುಟುಂಬ ವರ್ಗದವರನ್ನೋ
ಕಳೆದುಕೊಂಡ ಆ ವ್ಯಕ್ತಿಗಳು ಸಂಕಟವನ್ನು ಅನುಭವಿಸುತ್ತಾರೆ ಅನಿಸುವುದುಂಟು.. ಎಲ್ಲ ವಿಧಿ ಲಿಖಿತ.
.ಇದೇ ಜೀವನದ ಆಟ...ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಕಥೆ ನಡೆಯುತ್ತಿರುತ್ತದೆ..
ಆ ದಿನ ನಡೆದ ಘಟನೆಗಳ ಚಿತ್ರಗಳು ಲಗತ್ತಿಸಿದ್ದೇನೆ..ಇವು ಮನಸ್ಸನ್ನು ನಿಜವಾಗಲೂ ನೋಯಿಸುತ್ತದೆ..
![]() | ||
ಎಷ್ಟೊಂದು ಅಧ್ಬುತವಾದ ಕಟ್ಟಡಗಳು
ಢಿಕ್ಕಿ ಹೊಡೆಯುವ ವಿಮಾನ |
![]() |
ಕಿಟಕಿಗಳಿಂದ ಪ್ರಾಣ ಉಳಿಸಿ ಎಂದು ಕೇಳುವ ಜನರು |
![]() | ||
ಬೆಂಕಿಯ ಕೆನ್ನಾಲಿಗೆ
|
![]() |
ಜೀವಕ್ಕಾಗಿ ಓಡುವ ನಾಗರೀಕರು |
![]() |
ಎಲ್ಲೆಲ್ಲೂ ಧೂಳುಮಯ |
![]() |
ಗಾಯಾಳು |
![]() |
ಈಗ ಉಳಿದಿರುವ ನೆನಪು ಝೀರೊ ಗ್ರೌಂಡ್ನದ್ದು ಮಾತ್ರ |
.
ಬರವಣಿಗೆ ಶೈಲಿ ಉತ್ತಮವಾಗಿದೆ. ಹಿಡಿದಿಡುತ್ತದೆ. ನೆನಪುಗಳಿಗೊಂದು ಬರಹಚಿತ್ತಾರ ಮೂಡಿಸಿದ್ದು ಅನೂಹ್ಯ.
ReplyDeleteಮತ್ತೆ ನೆನಪಿಸಿದಿರಿ ಮತ್ತೆ ಮತ್ತೆ ನೆನಪಾಗುವ ಘಟನೆಯನ್ನು
ReplyDeleteಬರಹದ ಶೈಲಿ ಚೆನ್ನಾಗಿದೆ.
ಬರವಣಿಗೆ ಮುಂದುವರೆಸಿ.
wow aaneka chanda baraha...keep going babes
ReplyDeletepachchi
good narration of the real incident!!
ReplyDeleteabbaa......aa ghataneya nenape ishtondu bhaya untumaaduttade........nimma baravanige shaily tumbaa ishta aaytu.baravanige heege saagali....
ReplyDeleteಮೊದಲನೆಯದಾಗಿ ನಿಮ್ಮ ಬ್ಲಾಗಿನ ಮುಖ ಪುಟ ತುಂಬಾ ಸೊಗಸಾಗಿ ಅರ್ಥಗರ್ಭಿತವಾಗಿದೆ..ಅಭಿನಂದನೆಗಳು..
ReplyDeleteಲೇಖನದ ಓಘ..ತುಂಬಾ ಸುಂದರವಾಗಿದೆ..ಆ ಕರಾಳ ಘಟನೆಯ ಮರು ಪ್ರಸಾರ..ಮನಕಲಕುತ್ತದೆ..
ನಿಮ್ಮ ಬರಹದ ಶೈಲಿ ಇಷ್ಟವಾಗುತ್ತದೆ..ಮುಂದುವರೆಸಿ..ಅಭಿನಂದನೆಗಳು..
nice attempt but i think some editing was needed but good luck u have chances of becomeing a good blogger i will follow ur blog liked it
ReplyDeleteThanks...Neelesh...:)yaa...its true that lots of improvement should i follow in my coming posts...thanks for the suggestion.. :)
Deleteಮನುಕುಲದ ಚರಿಯಲಿ ಇದು ಕಪ್ಪು ಅಧ್ಯಾಯ.
ReplyDeleteಉಕ್ಕು ಹಕ್ಕಿಯ ತಿವಿತಕೆ ಸಿಕ್ಕು ದೊಡ್ಡ ದೇಶದ ಮಾನ ಹಾರಾಜದ ಆ ದಿನ ನೆನೆದಾಗಲೆಲ್ಲ, ಬೂದಿಯಡಿಯಲಿ ಗುರುತಿಗೆ ಸಿಗದ ಮೂಳೆ ರಾಶಿಯೂ ಮಹಡಿ ಮಹಡಿಗಳಿಂದ ಜಿಗಿದ ಮನುಜರೂ ನೆನಪಾಗುವರು.
ಉತ್ತಮ ಮನೋ ಚಿಕಿತ್ಸಕ ಬರಹ.
ಲೇಖನ ಚಿಂತನೆಗೆ ಒಳಪಡಿಸುತ್ತದೆ , ಬರವಣಿಗೆ ಶೈಲಿ ಚೆನ್ನಾಗಿದೆ ಅಭಿನಂದನೆಗಳು.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]