ಫೇಸ್ಬುಕ್ ಮನುಷ್ಯನ ಮೇಲೆ ಹೇಗೆಲ್ಲಾ ಪ್ರಭಾವ ಬೀರಬಹುದು...???? ಇದರಿಂದ ಏನೆಲ್ಲಾ ಹೊಸ ಹೊಸ ವಿಚಾರಗಳನ್ನು
ಕಲಿಯಬಹುದು ...??
ಅದಕ್ಕೆ ಸಣ್ಣ ಉದಾಹರಣೆ ಈ ತಾಣದಲ್ಲಿ ಹರಡಿರುವ ವಿಧವಿಧದ ಗುಂಪುಗಳು...ಕೆಲವರಿಗೆ ಸಾಹಿತ್ಯ ಇಷ್ಟ ಆದರೆ ಇನ್ನು
ಕೆಲವರಿಗೆ ಸಿನೆಮಾ,ಮತ್ತೊಬ್ಬರಿಗೆ ಕಲೆ,ಇನ್ನು ಕೆಲವರಿಗೆ ಗಾರ್ಡನಿಂಗ್ ...ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ... ಅವರವರ
ಅಭಿರುಚಿಗೆ ತಕ್ಕಂತೆ ಸದಸ್ಯರು ತಮ್ಮ ತಮ್ಮ ಗುಂಪನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನೊಂದು
ಉಪಯೋಗ ಅಂದರೆ ನಮ್ಮ ಅಭಿರುಚಿಗೆ ತಕ್ಕ ಹೊಸ ಹೊಸ ಸ್ನೇಹಿತರ ಭೇಟಿ ಪ್ರಪಂಚದ ಮೂಲೆ ಮೂಲೆಯಿಂದಲೂ
ನಮಗೆ ಲಭಿಸುತ್ತಾರೆ .....
.ನನ್ನ ಇಷ್ಟದ ಗುಂಪು ಅಡಿಗೆಗೆ ಸಂಭಂದಿಸಿದ್ದು ..ಇತ್ತೀಚೆಗೆ ಸೇರಿದ ಆಹಾರದ ಗುಂಪುಗಳಲ್ಲಿ ಮನೆಯಲ್ಲಿ ಮಾಡಿದ
ಪದಾರ್ಥಗಳನ್ನು ನನ್ನದೇ ರೀತಿಯಲ್ಲಿ ಶೃಂಗರಿಸುವುದು ನನ್ನ ಹವ್ಯಾಸಗಳಲ್ಲಿ ಒಂದು...ಅದರ ಕೆಲವು ಚಿತ್ರಗಳು ಈ ಬಾರಿಯ
ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೇನೆ .....ಇದನ್ನು ನೋಡಿದ ಮೇಲೆ ಖಂಡಿತಾ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ... :))
 |
ಹಲಸಿನ ಹಣ್ಣಿನ ಕಡುಬು ನನ್ನ ಮೊದಲ ಪ್ರಯತ್ನ ಈ ಆಹಾರ ಕಲೆಯಲ್ಲಿ |
 |
ಸಾಧಾರಣವಾಗಿ ಎಲ್ಲರ ಮನೆಯಲ್ಲೂ ತಯಾರಿಸುವ ಅಕ್ಕಿಯ ಒತ್ತು ಶ್ಯಾವಿಗೆ .... ಇತ್ತೀಚಿನ ಭಾಷೆಯಲ್ಲಿ ರೈಸ್ ನೂಡಲ್ಸ್ .... ನಮ್ಮ ಹೂವಿನ ಜಡೆ ಅಥವಾ ಮೊಗ್ಗಿನ ಜಡೆ ಮಾದರಿಯಲ್ಲಿ |
 |
ನಾಗರಪಂಚಮಿಯಂದು ಮಾಡಿದ ಅರಿಷಣ ಎಲೆ ಕಡುಬು |
 |
ಮಾಲತಿ ಚಿಕ್ಕಮ್ಮನಿoದ ಕಲಿತ ಪಡುವಲ ಬೀಜದ ತಂಬಳಿ |
 |
ಕ್ಯಾಬೇಜ್ ಪಲ್ಯ ಬೆಳಿಗ್ಗೆ ಒಂದು ಮದುವೆ ಪತ್ರಿಕೆಯಲ್ಲಿ ನೋಡಿದ ಗಣಪತಿಯಿಂದ ಪಡೆದ ಸ್ಪೂರ್ತಿ |
 |
ನೂಲು ಹುಣ್ಣಿಮೆ ಹಬ್ಬದಂದು ನಾವು ಯಾವಾಗಲು ತಯಾರಿಸುವ ಉದ್ದಿನಬೇಳೆಯ ಕಡುಬು
ಬ್ರಾಹ್ಮಣನ ಆಕಾರ ದಲ್ಲಿ |
 |
ರಾಖಿ ಹಬ್ಬಕ್ಕೆಂದು ತಯಾರಿಸಿದ ಸಾಬುದಾನ ಪಾಯಸ |
 |
ಅಕ್ಕಿ ಬೇಳೆ ಕಾಳುಗಳಿಂದ ತಯಾರಿಸಿದ ಕಾರ್ಟೂನ್ ಚಿತ್ರ |
 |
ಹಾಗಲಕಾಯಿ ಮೊಸಳೆ |
 |
ಹಾಗಲಕಾಯಿ ಎಣ್ಣೆಯಲ್ಲಿ ಫ್ರೈ ಮಾಡಿ ಹೀಗೊಂದು ಚಿತ್ರ |
 |
ನಮ್ಮ ಪತ್ರೋಡೆ ಎಂಬ ತಿನಿಸಿಂದ ಪಾಂಡಾ ಪ್ರಾಣಿಯ ಪ್ರತಿಕೃತಿ |
 |
ನಮ್ಮ ಇಷ್ಟದ ದಾಳಿತೋವೆ ತೊಗರಿಬೇಳೆಯಿ0ದ ಮಾಡಿದ್ದು |
 |
ನನ್ನ ಪ್ರೀತಿಯ ಮಾವಿನ ಹಣ್ಣಿನ ಸಾಸಿವೆ |
 |
ಎಲ್ಲರ ಮನೆಯಲ್ಲೂ ಮಾಡುವ ಪುಲಾವ್ |
 |
ಹಲಸಿನ ಬೀಜದ ಚಟ್ನಿ |
 |
ನಮ್ಮ ಜಂಬೋ ಸೆವೆನ್ ಕಪ್ ಬರ್ಫಿ |
 |
ಹೀರೇಕಾಯಿ ಸಿಪ್ಪೆ ಚಟ್ನಿ ಒಂದು ಚಿತ್ರ ನೋಡಿ ಪ್ರೇರಣೆ ಪಡೆದಿದ್ದು
|
 |
ಮರಕೆಸು ಎಲೆಯ ಪತ್ರೊಡೆ ಮಳೆಗಾಲದ ತಿನಿಸು |
 |
ಕ್ಯಾಬೇಜ್ ಅಂಬಡೆ ನನ್ನದೇ ಶೈಲಿಯಲ್ಲಿ |
 |
ನೇಂದ್ರ ಬಾಳೆ ಹಣ್ಣಿನ ಸಿಹಿ ಹುಳಿ ಕೇರಳದ ಪುಕಳಮ್ ಶೈಲಿಯಲ್ಲಿ |
 |
ಕೃಷ್ನಾಷ್ಟಮಿಗೆ ನೈವೇದ್ಯಕ್ಕೆಂದು ತಯಾರಿಸಿದ ಸಿಹಿ ಅವಲಕ್ಕಿ |
 |
ಬೆಳ್ಳುಳ್ಳಿ ಚಟ್ನಿ ಹೂವಿನ ಜೊತೆ
|
 |
ನಾವು ಬೆಳಗಿನ ತಿಂಡಿಗೆ ತಯಾರಿಸುವ ಗೋಧಿ ಶ್ಯಾವಿಗೆ ಉಸ್ಲಿ |
 |
ಈ ಚಿತ್ರವನ್ನು ನನ್ನ ಮೊದಲ ಬರಹದಲ್ಲಿ ನೋಡೇ ಇರ್ತೀರಾ ಬೆಳ್ಳುಳ್ಳಿ ಚಟ್ನಿ ಪುಡಿ |
 |
ಉಪ್ಪಿಟ್ಟು ...ಛೋ ಟು ಇಲಿಗಳ ಆಕಾರದಲ್ಲಿ |
 |
ಸಿಂಪಲ್ ತರಕಾರಿ ಪಲ್ಯ |
 |
ಹಯಗ್ರೀವ ಎಂಬ ಸಿಹಿ ಮೆಹಂದಿ ರೂಪದಲ್ಲಿ |
ನಮ್ಮ ಉಪ್ಪಿಟ್ಟು ಅವಲಕ್ಕಿ ಕರ್ನಾಟಕ ಸ್ಪೆಷಲ್
ಇಷ್ಟೆಲ್ಲಾ ಚಿತ್ರಗಳನ್ನು ನೋಡಿ ಸುಸ್ತಾದರೆ ಕೆಳಗಿನ ತಂಪು ತಂಪು ಐ ಸ್ ಕ್ರೀಮ್ ಸವಿಯಿರಿ... :))
|
ಥಂಡಾ ಥಂ ಡಾ ಐ ಸ್ ಕ್ರೀಮ್
ಧನ್ಯವಾದಗಳು....ಸ್ನೇಹಿತರೇ.....
ಪ್ರೀತಿಯಿಂದ
ಸುದೀಪ.........
|