Thursday, 4 October 2012

ಹೆಸರಿನಲ್ಲೇನಿದೆ...????!!!!"ಹೆಸರಿನಲ್ಲೇನಿದೆ"....ಯಾರಿಗಾದರೂ ಈ ಪ್ರಶ್ನೆ ಕೇಳಿದರೆ ಉತ್ತರ ಬಹುಷಃ ಹೀಗಿರುತ್ತೆ...."ಅಯ್ಯೋ...ಅದು ಗುರುತು ಹಿಡಿಯಲಿಕ್ಕೆ ಒಂದು ಐಡೆಂಟಿಟಿ ಮಾತ್ರ.."  ಅಥವಾ.."ಮನುಷ್ಯನ ಗುಣ, ನಡತೆ, ವ್ಯಕ್ತಿತ್ವ ಮಾತ್ರ ಮುಖ್ಯ...ಹೆಸರಲ್ಲೇನಿದೆ... ಮಣ್ಣು..." ಇನ್ನೂ ಕೆಲವರು..."ಹೋಗ್ರಿ ಸುಮ್ನೆ..ಒಳ್ಳೊಳ್ಳೆ ದೇವರ ಹೆಸರೆಲ್ಲಾ ಇಟ್ಟುಕೊಂಡು ಅವರು ಮಾಡೋ ಅನಾಚಾರ ನೋಡಿದ್ರೆ ಸಾಕು...." ಹೀಗೆ ಅವರವರ ಭಾವಕ್ಕೆ ತಕ್ಕಂತೆ ಉತ್ತರ ಕೊಡಬಹುದು....

ಆದರೆ ನನ್ನ ಮಟ್ಟಿಗಂತೂ ನನ್ನ ಹೆಸರಿನ ಹಿಂದೆ ತುಂಬಾ ಹಳೆಯ ನೆನಪುಗಳಿವೆ...ಅದನ್ನೇ ಬರೆಯೋಣ ಅಂತ ಇಷ್ಟೊತ್ತು ಪೀಠಿಕೆ ಹಾಕಿದ್ದು...ಅದನ್ನು ನಿಮಗೆ ಹೇಳೊಕ್ಕೆ ಮುಂಚೆ ನನ್ನ "ಅಮೊಮ"(ಅಜ್ಜಿ) ಬಗ್ಗೆ ಸ್ವಲ್ಪ ಹೇಳಲೇ ಬೇಕಾಗುತ್ತೆ...ಇಲ್ಲಾ ಅಂದ್ರೆ ಈ ಕಥೆ ಮುಂದುವರಿಸಲಿಕ್ಕೆ ಆಗೋದಿಲ್ಲ...ಅಂದ ಹಾಗೆ ನನ್ನ ಪ್ರೀತಿಯ ಅಜ್ಜಿ ಶ್ರೀಮತಿ. ಶಾಂತ ಶೆಣೈ.ಹಳೆಯ ನೆನಪು ಪ್ರೀತಿಯ ಅಮೊಮನೊಂದಿಗೆ

ನನ್ನ ತಂದೆ ತಾಯಿಗೆ ನಾನು ಹತ್ತು ವರ್ಷ ನಂತರ ಹುಟ್ಟಿದ ಮಗಳು..ಅದಕ್ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ದೇವಸ್ಥಾನದಲ್ಲಿ ನನ್ನ ಹೆಸರು ಇಡ್ತೀವಿ ಅಂತ ಹರಕೆ ಹೊತ್ತಿದ್ರಂತೆ. ಸರಿ..ಹಾಗೆ ನನಗೆ ತೊಟ್ಟಿಲು ಶಾಸ್ತ್ರ ಮಾಡುವಾಗ ಹೆಸರು ಇಟ್ಟಿಲ್ಲ. ಮನೆಯಲ್ಲಿ ನಾನೇ ಚಿಕ್ಕ ಮಗು ಆಗಿದ್ದರಿಂದ ಎಲ್ಲರಿಗೂ ನನ್ನ ಕಂಡ್ರೆ ಸ್ವಲ್ಪ ಜಾಸ್ತೀನೆ ಪ್ರೀತಿ..ನಾನು ಚಿಕ್ಕವಳಿರುವಾಗ ನಮ್ಮ ತೀರ್ಥಹಳ್ಳಿ ಮನೆಯಲ್ಲಿ ಸುಮಾರು ೨೦ ಜನ ಇದ್ದರು.ನಮ್ಮದು ಅವಿಭಕ್ತ ಕುಟುಂಬ. ಹೀಗಾಗಿ ಮಗುವಿಗೆ ನಾಮಕರಣದ ಶಾಸ್ತ್ರ ಮಾಡೋದು ಹೇಗೂ ತಡ ಉಂಟು....ಅದಕ್ಕೆ ಅಲ್ಲಿಯವರೆಗೂ ನನ್ನ ಅಮೊಮ ಎಲ್ಲರಿಗೂ "ಮಗೂನ್ನ "ದೀಪ" ಅಂತ ಕರೀರಿ" ಅಂದ್ರಂತೆ...ಮನೆಯಲ್ಲಿ ಅಷ್ಟು ಜನ ಇದ್ರೂ ಒಬ್ಬರೂ "ದೀಪ" ಅನ್ನೋ ಹೆಸರನ್ನು ಕರೆದಿಲ್ಲ. ತಮಗೆ ತೋಚಿದ ಅಡ್ದ ಹೆಸರಿನಿಂದಲೇ ಕರೆಯುತ್ತಿದ್ದರು. ಇಂದೂ ಸಹಾ ಹಾಗೇ ಕರೆಯುತ್ತಾರೆ..ಆದರೆ ನನ್ನ ಅಮೊಮ ಮಾತ್ರ ತನ್ನ ಕೊನೆ ಉಸಿರಿನವರೆಗೂ ನನ್ನನ್ನು "ದೀಪ".."ದಿಪ್ಪೂ" ಅಂತಾನೇ ಕರೀತಿದ್ರು... :)) ಅವರ ಕಾಲವಾದ ನಂತರ ಎಲ್ಲರಿಗೂ, ನನ್ನನ್ನೂ ಸೇರಿಸಿ ಹೆಚ್ಚು-ಕಮ್ಮಿ ಆ ಹೆಸರೇ ಮರೆತು ಹೋಗಿತ್ತು. ಅನ್ನಬಹುದು...

ಹೀಗೆ ಸ್ಕೂಲ್, ಕಾಲೇಜ್ ವಿಧ್ಯಾಭ್ಯಾಸ ಆಯ್ತು..ಅಲ್ಲೆಲ್ಲಾ ನಾನು "ಸುಮತಿ" ಎಂಬ ಹೆಸರಿನಿಂದಲೇ ಪರಿಚಿತೆ..ಅದು ನನಗೆ ದೇವಸ್ಥಾನದಲ್ಲಿ ಇಟ್ಟ ಹೆಸರು... :))

ನಂತರ ಮದುವೆಯಾಯ್ತು..ನಮ್ಮಲ್ಲಿ ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಹೆಸರು ಬದಲಿಸುವ ಶಾಸ್ತ್ರ ಇದೆ..ಮದುವೆ ಮಂಟಪದಲ್ಲೇ ಹೊಸ ಹೆಸರನ್ನು ಅತ್ತೆ-ಸೊಸೆಯ ಕಿವಿಯಲ್ಲಿ ಮೂರು ಸಾರಿ ಹೇಳುತ್ತಾರೆ..ಯಾವಾಗಲೂ ಮದುವೆಗಳಲ್ಲಿ ಇದೊಂದು ಕುತೂಹಲದ ವಿಚಾರ..ಮದುಮಗಳಿಗೆ ಹೊಸ ಹೆಸರು ಏನಿರಬಹುದೆಂದು...??? ಹಾಗೆ ನನ್ನ ಮದುವೆಯಲ್ಲಿ ಸಹಜವಾಗಿ ನಾನು ಸ್ವಲ್ಪ ಉತ್ಸುಕಳಾಗಿದ್ದೆ..ನನ್ನ ಗಂಡನ ಹೆಸರು.."ದೇವದತ್" ಹಾಗಾಗಿ ನನ್ನ ಹೆಸರು ಹೇಗಿರಬಹುದು...!!!! ಸರಿ ಅತ್ತೆ ನನ್ನ ಕಿವಿಯ ಹತ್ತಿರ ಬಂದು ಹೇಳಿದ ಹೆಸರು ನನ್ನನ್ನು ಸಂತೋಷ ಮತ್ತು ಆಶ್ಚರ್ಯ ಎರಡನ್ನೂ ಆ ಘಳಿಗೆಯಲ್ಲಿ ಉಂಟು ಮಾಡಿತ್ತು... ಅವರು ನನಗೆ ಇಟ್ಟ ಹೆಸರು ಸಹಾ "ದೀಪ"...ಸುಮಾರು ೧೨ ವರ್ಷಗಳ ಹಿಂದೆ ಮರೆತಿದ್ದ ಹೆಸರಿಗೆ "ಪುನಃ ಜೀವ" ಬಂದಿತ್ತು...ಅಮೊಮನ ನೆನಪನ್ನು ಆ ಸಮಯದಲ್ಲಿ ತರಿಸಿತ್ತು.. :)) ಈಗ ಗಂಡನ ಮನೆಯಲ್ಲಿ ಎಲ್ಲರಿಗೂ ನಾನು "ದೀಪ"...ಬಹುಷಃ ಅವರು ಎರಡಕ್ಷರದ ಹೆಸರು...ಕರಿಯಲಿಕ್ಕೆ ತುಂಬಾ ಸುಲಭ...ಹಾಗೇ "ದೀಪ ದೇವದತ್" ಹೀಗೆ ಆಲೋಚನೆ ಮಾಡಿದ್ದರೆನಿಸುತ್ತೆ.. :)) ಇದು ನನ್ನ ಹೆಸರಿನ ಹಿಂದೆ ಇರುವ ಸಣ್ಣ ಕಥೆ...

ಆಂದ ಹಾಗೇ ಸ್ವಲ್ಪ ದಿನದ ಹಿಂದೆ ನಾನು ಹೊಸ ಬ್ಲಾಗ್ ಶುರು ಮಾಡಿದಾಗ... ಏನು ಹೆಸರು ಇಡಲಿ ಎಂದು ಆಲೋಚನೆ ಮಾಡ್ತಿದ್ದಾಗ... "ಸುದೀಪ" ಹೆಸರು ಆಯ್ಕೆ ಮಾಡಿಕೊಂಡಿದ್ದೆ...ಸುಮತಿಯ.."ಸು"+"ದೀಪ" = "ಸುದೀಪ" ....ನನ್ನ ಎರಡು ಹೆಸರುಗಳ ಸಮಾಗಮ...ಚೆನ್ನಾಗಿದೆ ಅನ್ನಿಸ್ತು... :)) ನನಗಂತೂ ಇಷ್ಟ ಆಯ್ತು..ಓದುವ ನಿಮಗೆ ಹೇಗನಿಸ್ತೋ ಗೊತ್ತಿಲ್ಲ...

ನಿಜ.. ಹೆಸರಿಗಿಂತ ಪ್ರೀತಿ, ಗುಣ, ನಡತೆ, ಒಳ್ಳೆಯ ವ್ಯಕ್ತಿತ್ವ ತುಂಬಾನೆ ಮುಖ್ಯ..ಆದರೂ ಕೆಲವೊಮ್ಮೆ ಇದೆಲ್ಲಾ ನೆನಪಾಗುತ್ತೆ..:))

ಯಾವಾಗಲೂ ಪ್ರೀತಿಯಿಂದ ನಿಮ್ಮೆಲ್ಲರ....

ಸುದೀಪ... :))
12 comments:

 1. Love you Munna!!i can never address you as sumathi...and maay used to call me nandeepa....(only your papa and now Vijayakka call me nandita)
  even i have a post ಹೆಸರಲ್ಲೇನಿದೆ...:-)
  ಗುಡ್ ವನ್
  :-)
  ಪಾಚ್ಚಿ

  ReplyDelete
  Replies
  1. Dear pacchi..i dont read u r post...still... and thanks for reading ... :)) love u... :))

   Delete
 2. "ನಿನ್ನ ಹೆಸರೇನು"
  "ಗೊರ ಎನ್ನುವ ಹೆಸರಿಂದ ಈ ದೇಹವನ್ನು ಗುರುತಿಸುತ್ತಾರೆ"
  ಭಕ್ತ ಕುಮ್ಬಾರದಲ್ಲಿನ ಅಣ್ಣಾವ್ರ ಈ ಸಂಭಾಷಣೆ ನೆನಪಿಗೆ ಬಂತು..ನಿಮ್ಮ ಲೇಖನ ನೋಡಿ..ಹೆಸರಲ್ಲೇ ಎಲ್ಲ ಇದೆ ಅನ್ನುವುದನ್ನು ನಿಮ್ಮ ಹೆಸರೇ ಸೂಚಿಸುತ್ತದೆ..ದೀಪ ಹಚ್ಚಬೇಕಾದರೆ ಮತಿ ಇರಬೇಕು..ಒಳ್ಳೆಯ ದೀಪ (ಸು-ದೀಪ) ಹಚ್ಚಿದ್ದಾಗ "ಮತಿ"ಯು ಸುಮತಿಯಾಗುತ್ತದೆ ..ಸುಂದರ ಲೇಖನ ಸಹೋದರಿ...ನಿಮ್ಮ ಅಜ್ಜಿಯ ನೆನಪು ಸುಂದರ ಅತಿ ಸುಂದರ...

  ReplyDelete
  Replies
  1. ಧನ್ಯವಾದಗಳು...ಶ್ರೀಕಾಂತ್...ನನ್ನ ಹೆಸರಲ್ಲಿ ಇಷ್ಟೆಲ್ಲಾ ಅರ್ಥ ಇದೆ ಎಂದು ತಿಳಿಸಿ ಕೊಟ್ಟಿದ್ದಕ್ಕೆ... :))

   Delete
 3. ಹೆಸರಿನಲ್ಲೇನಿದೆ ನಾವು ನಮ್ಮ ನಡವಳಿಕೆಯಲ್ಲಿದೆ... ಅಜ್ಜಿಯ ಬಗ್ಗೆ ಬರೆದು ನನ್ನಜ್ಜಿಯ ನೆನಪು ಮಾಡಿಸಿದಿರಿ

  ReplyDelete
  Replies
  1. ಧನ್ಯವಾದಗಳು.."ಮನಸು"....ಅಜ್ಜಿ ಶಬ್ದವೇ ಹಾಗೆ..."ಸಿಹಿತಿನಿಸಿನ ತರಹ"... :))

   Delete
 4. ನಮ್ಮ ಕಡೆ ಮದುವೆಯ ನಂತರ ಗಂಡನ ಮನೆ ಕಡೆಯವರು ಹೆಸರು ಬದಲಿಸುವ ಶಾಸ್ತ್ರ, ಅಜ್ಜಿಯ ನೆನಪು ಎಲ್ಲ ಚೆನ್ನಾಗಿದೆ..
  ಅಜ್ಜಿ ಇಟ್ಟ ಹೆಸರನ್ನೇ ಗಂಡನ ಮನೆಯವರೂ ಇಟ್ಟಿರುವುದು ಅದೃಷ್ಟವೇ ಸರಿ...
  ಚೆನ್ನಾಗಿದೆ ಅಕ್ಕಾ..ಆ ಹಳೆ ಫೋಟೋ ಕೂಡ ಸೂಪರ್...

  .

  ReplyDelete
 5. ಧನ್ಯವಾದಗಳು ಮೌನರಾಗ.. :))

  ReplyDelete
 6. ಚೆನ್ನಾಗಿದೆ.. ಹಳೆಯ ಪೋಟೋವೂ ಪೂರಕವಾಗಿದೆ.
  ನಮ್ಕಡೆನೂ ಪಾಪು, ಅಪ್ಪಿ, ಮಾಣಿ ಹಿಂಗೆ ಸುಮಾರಷ್ಟು ಮನೇಲಿ ಕರ್ಯೋ ಹೆಸ್ರುಗಳೇ ಹೊರಗಡೆನೂ ಚಾಲ್ತಿಗೆ ಬಂದು ಬಿಡತ್ತೆ.
  ಮದ್ವೆ ಸಮಯದಲ್ಲಿ ಹೆಸ್ರು ಬದಲಿಸೋ ಸಂಪ್ರದಾಯ ನಮ್ಕಡೇಲೂ ಅವಾಗಾವಾಗ ನಡೀತಿರತ್ತೆ. ಈಗೀಗ ಸ್ವಲ್ಪ ಕಡಿಮೆ ಆಗಿದೆ..

  ಒಳ್ಳೆ ಬರಹ :-)

  ReplyDelete
  Replies
  1. ಧನ್ಯವಾದಗಳು...ಪ್ರಶಸ್ತಿ.... :))

   Delete
 7. ದೀಪಕ್ಕಿಂತಲೂ ಸುಮತಿ ಹೆಚ್ಚು ಸಾಂಪ್ರದಾಯಿಕ ಹೆಸರು. ದೀಪ ಎಂಬ ಹೆಸರು ಮತ್ತೆ ಬಂದದ್ದು ಅಚ್ಚರಿ ಅಲ್ಲವೇ? ಅಂದಹಾಗೆ ದೇವದತ್ತ ಅಮೋಘವಾದ ಹೆಸರು. ಅವರು ದೇವದತ್ತವಾಗಿ ಸುಂದರ.

  ಓಹೋ ಸುದೀಪದದ ಹಿಂದಿನ ಕಥೆ ಹೀಗಾ?

  ReplyDelete
  Replies
  1. ಬದರಿಜೀ ... ಹೌದು ಇದು ನನ್ನ ಹೆಸರಿನ ಹಿಂದಿನ ಕತೆ.... :))

   Delete