Thursday 25 October 2012

ಆಹಾರ - ಅಲಂಕಾರ ...ಸುದೀಪ ಸ್ಟೈಲ್ ನಲ್ಲಿ....ಭಾಗ - 1

ಫೇಸ್ಬುಕ್ ಮನುಷ್ಯನ  ಮೇಲೆ ಹೇಗೆಲ್ಲಾ ಪ್ರಭಾವ ಬೀರಬಹುದು...???? ಇದರಿಂದ ಏನೆಲ್ಲಾ ಹೊಸ ಹೊಸ ವಿಚಾರಗಳನ್ನು 

ಕಲಿಯಬಹುದು ...?? 

 ಅದಕ್ಕೆ ಸಣ್ಣ ಉದಾಹರಣೆ ಈ ತಾಣದಲ್ಲಿ ಹರಡಿರುವ ವಿಧವಿಧದ ಗುಂಪುಗಳು...ಕೆಲವರಿಗೆ ಸಾಹಿತ್ಯ ಇಷ್ಟ ಆದರೆ ಇನ್ನು 

ಕೆಲವರಿಗೆ ಸಿನೆಮಾ,ಮತ್ತೊಬ್ಬರಿಗೆ ಕಲೆ,ಇನ್ನು ಕೆಲವರಿಗೆ ಗಾರ್ಡನಿಂಗ್ ...ಹೀಗೆ ಪಟ್ಟಿ ಬೆಳೆಯುತ್ತಾ  ಹೋಗುತ್ತದೆ ... ಅವರವರ 

ಅಭಿರುಚಿಗೆ ತಕ್ಕಂತೆ   ಸದಸ್ಯರು ತಮ್ಮ ತಮ್ಮ ಗುಂಪನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನೊಂದು 

ಉಪಯೋಗ ಅಂದರೆ ನಮ್ಮ ಅಭಿರುಚಿಗೆ ತಕ್ಕ ಹೊಸ ಹೊಸ ಸ್ನೇಹಿತರ ಭೇಟಿ ಪ್ರಪಂಚದ  ಮೂಲೆ  ಮೂಲೆಯಿಂದಲೂ  

ನಮಗೆ ಲಭಿಸುತ್ತಾರೆ .....

.ನನ್ನ ಇಷ್ಟದ ಗುಂಪು ಅಡಿಗೆಗೆ ಸಂಭಂದಿಸಿದ್ದು ..ಇತ್ತೀಚೆಗೆ  ಸೇರಿದ ಆಹಾರದ ಗುಂಪುಗಳಲ್ಲಿ ಮನೆಯಲ್ಲಿ ಮಾಡಿದ 

ಪದಾರ್ಥಗಳನ್ನು ನನ್ನದೇ ರೀತಿಯಲ್ಲಿ ಶೃಂಗರಿಸುವುದು  ನನ್ನ ಹವ್ಯಾಸಗಳಲ್ಲಿ ಒಂದು...ಅದರ ಕೆಲವು ಚಿತ್ರಗಳು ಈ ಬಾರಿಯ 

ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೇನೆ .....ಇದನ್ನು ನೋಡಿದ ಮೇಲೆ ಖಂಡಿತಾ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ... :)) 




ಹಲಸಿನ ಹಣ್ಣಿನ ಕಡುಬು  ನನ್ನ ಮೊದಲ ಪ್ರಯತ್ನ ಈ  ಆಹಾರ ಕಲೆಯಲ್ಲಿ 


ಸಾಧಾರಣವಾಗಿ   ಎಲ್ಲರ  ಮನೆಯಲ್ಲೂ  ತಯಾರಿಸುವ   ಅಕ್ಕಿಯ  ಒತ್ತು  ಶ್ಯಾವಿಗೆ .... ಇತ್ತೀಚಿನ  ಭಾಷೆಯಲ್ಲಿ  ರೈಸ್  ನೂಡಲ್ಸ್ .... ನಮ್ಮ  ಹೂವಿನ ಜಡೆ  ಅಥವಾ  ಮೊಗ್ಗಿನ  ಜಡೆ  ಮಾದರಿಯಲ್ಲಿ 




ನಾಗರಪಂಚಮಿಯಂದು  ಮಾಡಿದ ಅರಿಷಣ  ಎಲೆ ಕಡುಬು 



ಮಾಲತಿ ಚಿಕ್ಕಮ್ಮನಿoದ  ಕಲಿತ  ಪಡುವಲ  ಬೀಜದ ತಂಬಳಿ 



ಕ್ಯಾಬೇಜ್  ಪಲ್ಯ  ಬೆಳಿಗ್ಗೆ  ಒಂದು  ಮದುವೆ  ಪತ್ರಿಕೆಯಲ್ಲಿ  ನೋಡಿದ  ಗಣಪತಿಯಿಂದ  ಪಡೆದ  ಸ್ಪೂರ್ತಿ 




ನೂಲು ಹುಣ್ಣಿಮೆ ಹಬ್ಬದಂದು ನಾವು ಯಾವಾಗಲು ತಯಾರಿಸುವ ಉದ್ದಿನಬೇಳೆಯ  ಕಡುಬು 
 ಬ್ರಾಹ್ಮಣನ ಆಕಾರ ದಲ್ಲಿ 




ರಾಖಿ ಹಬ್ಬಕ್ಕೆಂದು ತಯಾರಿಸಿದ  ಸಾಬುದಾನ ಪಾಯಸ 




ಅಕ್ಕಿ ಬೇಳೆ  ಕಾಳುಗಳಿಂದ  ತಯಾರಿಸಿದ ಕಾರ್ಟೂನ್  ಚಿತ್ರ 





ಹಾಗಲಕಾಯಿ ಮೊಸಳೆ 




ಹಾಗಲಕಾಯಿ ಎಣ್ಣೆಯಲ್ಲಿ ಫ್ರೈ ಮಾಡಿ ಹೀಗೊಂದು  ಚಿತ್ರ 



ನಮ್ಮ ಪತ್ರೋಡೆ   ಎಂಬ ತಿನಿಸಿಂದ   ಪಾಂಡಾ ಪ್ರಾಣಿಯ ಪ್ರತಿಕೃತಿ




ನಮ್ಮ ಇಷ್ಟದ ದಾಳಿತೋವೆ   ತೊಗರಿಬೇಳೆಯಿ0ದ  ಮಾಡಿದ್ದು 





ನನ್ನ ಪ್ರೀತಿಯ  ಮಾವಿನ ಹಣ್ಣಿನ ಸಾಸಿವೆ  




ಎಲ್ಲರ ಮನೆಯಲ್ಲೂ ಮಾಡುವ ಪುಲಾವ್  



ಹಲಸಿನ ಬೀಜದ ಚಟ್ನಿ 




ನಮ್ಮ ಜಂಬೋ  ಸೆವೆನ್ ಕಪ್ ಬರ್ಫಿ  


ಹೀರೇಕಾಯಿ ಸಿಪ್ಪೆ ಚಟ್ನಿ ಒಂದು ಚಿತ್ರ ನೋಡಿ ಪ್ರೇರಣೆ ಪಡೆದಿದ್ದು 



ಮರಕೆಸು ಎಲೆಯ ಪತ್ರೊಡೆ ಮಳೆಗಾಲದ ತಿನಿಸು 









ಕ್ಯಾಬೇಜ್ ಅಂಬಡೆ  ನನ್ನದೇ ಶೈಲಿಯಲ್ಲಿ  


ನೇಂದ್ರ  ಬಾಳೆ  ಹಣ್ಣಿನ  ಸಿಹಿ ಹುಳಿ ಕೇರಳದ ಪುಕಳಮ್  ಶೈಲಿಯಲ್ಲಿ 




ಕೃಷ್ನಾಷ್ಟಮಿಗೆ  ನೈವೇದ್ಯಕ್ಕೆಂದು  ತಯಾರಿಸಿದ ಸಿಹಿ ಅವಲಕ್ಕಿ




ಬೆಳ್ಳುಳ್ಳಿ ಚಟ್ನಿ ಹೂವಿನ ಜೊತೆ 


ನಾವು ಬೆಳಗಿನ ತಿಂಡಿಗೆ ತಯಾರಿಸುವ ಗೋಧಿ ಶ್ಯಾವಿಗೆ ಉಸ್ಲಿ 



ಈ ಚಿತ್ರವನ್ನು ನನ್ನ ಮೊದಲ ಬರಹದಲ್ಲಿ ನೋಡೇ ಇರ್ತೀರಾ  ಬೆಳ್ಳುಳ್ಳಿ ಚಟ್ನಿ ಪುಡಿ 







ಉಪ್ಪಿಟ್ಟು ...ಛೋ ಟು  ಇಲಿಗಳ ಆಕಾರದಲ್ಲಿ 


ಸಿಂಪಲ್ ತರಕಾರಿ ಪಲ್ಯ 


ಹಯಗ್ರೀವ ಎಂಬ ಸಿಹಿ ಮೆಹಂದಿ ರೂಪದಲ್ಲಿ 



ನಮ್ಮ ಉಪ್ಪಿಟ್ಟು ಅವಲಕ್ಕಿ ಕರ್ನಾಟಕ ಸ್ಪೆಷಲ್ 



ಇಷ್ಟೆಲ್ಲಾ  ಚಿತ್ರಗಳನ್ನು  ನೋಡಿ  ಸುಸ್ತಾದರೆ   ಕೆಳಗಿನ   ತಂಪು ತಂಪು   ಐ ಸ್ ಕ್ರೀಮ್  ಸವಿಯಿರಿ... :))


ಥಂಡಾ  ಥಂ ಡಾ  ಐ ಸ್ ಕ್ರೀಮ್ 






ಧನ್ಯವಾದಗಳು....ಸ್ನೇಹಿತರೇ.....

ಪ್ರೀತಿಯಿಂದ

ಸುದೀಪ.........














27 comments:

  1. ಆಹಾ.. ಎಷ್ಟೊಂದು ವೆರೈಟಿ ಕಲೆ. ಅಡುಗೆಮನೆಯಲ್ಲೂ ಕಲೆ, ಅಡುಗೆಯೂ ಒಂದು ಕಲೆ. ಸೂಪರ್ ಆಗಿದೆ. ಬಾಯಲ್ಲಿರುವ ನೀರಿಗೆ ಈಗ ಬೆಲೆ ಬಂತು.

    ReplyDelete
    Replies
    1. ಹ..ಹ..ಧನ್ಯವಾದಗಳು ಈಶ್ವರ್....ನಿಜ... ನಿಮ್ಮ ಮಾತು...ಪ್ರತಿಯೊಂದು ಕೆಲಸವೂ ಕಲೆಯೇ ...ಅದನ್ನು ಅನುಭವಿಸಿದರೆ ಮಾತ್ರ ಅದಕ್ಕೆ ಬೆಲೆ.. :))

      Delete
  2. ಮಸ್ತಾಗಿದೆ ಮೇಡಂ..
    ಹೊಸತನವನ್ನು ಪ್ರಸ್ತುತ ಪಡಿಸುವ ನಿಮ್ಮ ಕಲೆಗಾರಿಕೆಗೊಂದು ಸಲಾಂ...
    ಮಧ್ಯಾಹ್ನ ದ ಹೊತ್ತು ನಿಮ್ಮ ಬ್ಲಾಗ್ ನೋಡಿದೆ... ಹೊಟ್ಟೆ ಜೋರಾಗಿ ತಾಳ ಹಾಕಲಾರಂಭಿಸಿದೆ...
    ಮಾವಿನ ಹಣ್ಣಿನ ಸಾಸಿವೆ ಯಾ ನೆನಪು ಜೋರಾಗೆ ಕಾಡುತ್ತಿದೆ ಮೇಡಂ...

    ಚಂದದ ಲೇಖನ...
    ಕ್ರಿಯೇಟಿವ್ ಆಗಿದೆ......

    ReplyDelete
    Replies
    1. ತುಂಬಾ ಸಂತೋಷ ಮೌನರಾಗ.... ಲೇಖನ ಇಷ್ಟ ಪಟ್ಟಿದ್ದಕ್ಕೆ... :))

      Delete
  3. Wonderful, ಎಷ್ಟು ಚೆನ್ನಾಗಿ ಮಾಡಿದಿರಿ ಮತ್ತು ಚಿತ್ರ ತೆಗೆದಿದಿರಿ.
    Very creative.
    Keep it going

    ReplyDelete
    Replies
    1. Swarna...ಹೀಗೆ ಸುಮ್ಮನೆ timepass ಅಷ್ಟೇ.. :)) Thank u very much... for liking..:))

      Delete
  4. Hayagreeva- eshtu chendada hesaru! Idannu "raayara" aaradhaneyalli tinta iddiddu marete bittidde.. Mouth watering items..good. :-)
    -Rj

    ReplyDelete
  5. Thank u Rj.....ನಿಜ ಇದನ್ನು ಪ್ರಸಾದ ರೂಪದಲ್ಲಿ ಯಾವಾಗಲು ತಿನ್ತಾ ಇರ್ತೇವೆ... :))

    ReplyDelete
  6. beautifulllll ..all those pics that we oohh && aahhhed ...all in 1 place :)- usha bhat

    ReplyDelete
    Replies
    1. Thank u Usha Bhat akka..iske peeche kiskaa haath he...aapko bilkul maalum he naa.... ???? :))

      Delete
  7. super.. aahaaravannu ishtu sundaravaagi alankarisiddu nodi hasivu hechhaayitu :) very creative

    ReplyDelete
    Replies
    1. Thank u Anitha...ಇಷ್ಟ ಪಟ್ಟಿದ್ದಕ್ಕೆ... :))

      Delete
  8. ಬರೀ ಬ್ಲಾಗನಲ್ಲಿ ಹಾಕಿದ್ರ ಹೆಂಗ್ರಿ ಮಾಡಿದಾಗ ಊಟಕ್ಕ ಕರೀರಿ..
    ತಿಂದು ನೋಡಿ ಹೇಳತೇವಿ..

    ReplyDelete
  9. ಹ..ಹ...ಉಮೇಶ್ ಸರ್...ಖಂಡಿತಾ ...ಸ್ವಾಗತ ಯಾವಾಗಲು... :))

    ReplyDelete
  10. a delight to the eyes summmiiiiii.......loved looking at each and every picture.....truly you are soo creative girl...keep it up and give us many more to enjoyyy....lots of love and wishes..jayashri baleri..

    ReplyDelete
    Replies
    1. Thank u jay ...it all happens because of you peoples inspiration always... :))

      Delete
  11. such beautiful and creative pictures sumi....loved gazing at each and every picture....keep up the good work and give us many more to enjoyyy.....lots of love and best wishes..jayashri baleri.

    ReplyDelete
  12. ಅಡುಗೆ ಬ್ಲಾಗ್ ಎಂದೊಂಡನೆ ನನಗೆ ನೆನಪಾಗುವವರು ತಮ್ಮ ಬ್ಲಾಗಿನಲ್ಲಿ ವೈವಿದ್ಯಮಯ ಅಡುಗೆಗಳನ್ನು ಬರೆಯುವ ಮಾಲತಿ ಶಣೈ.

    ಇಲ್ಲಿ ನೀವು ಕೊಟ್ಟಿರುವ ಎಲ್ಲಾ ಆಹಾರ ಕಲೆಯ ಚಿತ್ರಗಳು ಬಾಯಲ್ಲಿ ನೀರೂರಿಸುತ್ತವೆ.

    ReplyDelete
    Replies
    1. ನನ್ನ ಅಡಿಗೆ ಮನೆಗೆ ಭೇಟಿ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು...ಬದರಿ ಭಾಯ್.... :))

      Delete
  13. ಸಹೋದರಿ ಸುದೀಪ...ಏನ್ರಿ ನಿಮ್ಮ ಕಲೆಯ ಕಳೆಯ ಕಳೆ ಬಲೆ...ಹೊಟ್ಟೆ ಹಸಿದಾಗ ತುಂಬಿಸುವ ಆಹಾರ ಕಣ್ಣನ್ನು ತುಂಬಿಸಲು ಸಾಧ್ಯವೇ...ಅದು ಹೌದು ಸಾಧ್ಯ ಎನ್ನುತ್ತದೆ ನಿಮ್ಮ ಲೇಖನ...ನಿಮ್ಮ ಕ್ರಿಯಾಶೀಲತೆಗೆ ನನ್ನ ಸಲಾಮು...ತುಂಬಾ ಸೊಗಸಾಗಿದೆ..
    ಗಣಪ, ಕೃಷ್ಣ , ಮಕರ, ರಾಖಿ, ಏನಿಲ್ಲ, ಏನುಂಟು ಎಲ್ಲವು ಇದೆ..ಅಭಿನಂದನೆಗಳು

    ReplyDelete
    Replies
    1. ಶ್ರೀಕಾಂತ್ ತಮ್ಮ ಪ್ರತಿಕ್ರೆಯೆಗೆ ಧನ್ಯವಾದಗಳು .... ನಿಜ ...ಮೊದಲು ಕಣ್ಣಿಗೆ ಇಷ್ಟ ಆದರೆ ಒಂದು ತುತ್ತು ಹೆಚ್ಚಿಗೆನೆ ಸೇರುತ್ತೆ.... :))

      Delete
    2. ಸುದೀಪ..
      ಆಹಾ ಹೆಸರಿಗೆ ತಕ್ಕಂತೆ ಸುಂದರ ದೀಪ. ಹೆಗ್ಗಡತಿಗೆ ನಳಮಹಾರಾಜನ ವರ ಸಿಕ್ಕಿದಂತೆ ಕಾಣುತ್ತದೆ. ಪ್ರತಿಯೊಂದು ಪದಾರ್ಥದಲ್ಲೂ ವೈವಿಧ್ಯತೆ ತುಂಬಿದೆ. ಗಣಪನ ಇಲಿಯೂ ಸೈ..ಕೃಷ್ಣನ ಕಾಳಿಂಗನೂ ಸೈ.. ಶಹಬ್ಬಾಸ್ ಗೆಳತಿ..ಅಡಿಗೆ ಎಂಬುದೂ ಒಂದು ಕಲೆಯೆಂದು ತೋರಿಸಿಕೊಟ್ಟೆ. ಅಭಿನಂದನಾರ್ಹ. ಇನ್ನೂ ಮುಂದುವರೆಯಲಿ ನಿನ್ನ ವೈವಿಧ್ಯಮಯ ನಳಪಾಕ.

      Delete
    3. This comment has been removed by a blog administrator.

      Delete
    4. This comment has been removed by a blog administrator.

      Delete
    5. .ಪ್ರೀತಿಯಿಂದ ಧನ್ಯವಾದಗಳು ಸವಿತಾ ಮೇಡಂ .. :)

      Delete

      Delete