ಮೊನ್ನೆ 'ಡಿಸೆಂಬರ್ 25' ಕ್ರಿಸ್ಮಸ್ ದಿನ ಎಲ್ಲಾ ಮೊಬೈಲ್ ಕಂಪನಿಗಳು 'ಫ್ರೀ ಮೆಸೇಜ್' ಬಂದ್ ಮಾಡಿತ್ತು. ಅಕಸ್ಮಾತ್ ಮೆಸೇಜ್ ಮಾಡಿದ್ರೆ ಒಂದಕ್ಕೆ ಹತ್ತರಷ್ಟು ಚಾರ್ಜ್ ಮಾಡಿತ್ತು. ನಂತರ 'ಡಿಸೆಂಬರ್ ೩೧ ಮತ್ತು ಜನವರಿ ಒಂದು,' ಹೊಸ ವರ್ಷ ಅಂತ ಪುನಃ ಎಲ್ಲಾ ಫ್ರೀ ಮೆಸೇಜ್ ಬಂದ್...ಎಲ್ಲರೂ ಅದೆಷ್ಟು ಈ ಕಂಪನಿಗಳಿಗೆ ಬೈದುಕೊಂಡ್ರೋ ಗೊತ್ತಿಲ್ಲ.
ಮೊನ್ನೆ ನಾವೆಲ್ಲಾ ಆತ್ಮೀಯ ಸ್ನೇಹಿತರು ಡಿಸೆಂಬರ್ 30 ಕ್ಕೆ ಮಾತಾಡಿಕೊಂಡಿದ್ವಿ . "ಹೇ ನಾಳೆಯಿಂದ ಇನ್ನು ಎರಡು ದಿನ 'ಎಸ್ ಎಂ ಎಸ್ ' ಇಲ್ಲ . ತುಂಬಾನೇ ಬೋರ್. ಏನಿದ್ರೂ ಇವತ್ತು ರಾತ್ರಿ 12 ಘಂಟೆ ಒಳಗೆ ಎಲ್ಲಾ ನಮ್ಮ ಪಟ್ಟಾಂಗ ಕ್ಲೋಸ್ ಅಂತ.". ರಾತ್ರಿ11 ರಿಂದ 12 ತನಕ ನಮ್ಮ ಮೆಸೇಜ್ ಚಾಲೂ. ಕೊನೆಯ ಮೆಸೇಜ್ ಹೀಗಿತ್ತು."ಬೈ. ಇನ್ನು ಮುಂದಿನ ವರ್ಷ ಸಿಗೋಣ, ಟೇಕ್ ಕೇರ್...ಗುಡ್ ನೈಟ್, ಹ್ಯಾಪಿ ನ್ಯೂ ಇಯರ್ ಇನ್ ಅಡ್ವಾನ್ಸ್ ".....
ಈ "ಎಸ್ ಎಂ ಎಸ್" ಅನ್ನೋದು ನಮ್ಮ ಜೀವನದಲ್ಲಿ ಅದೆಷ್ಟು ಪ್ರಾಮುಖ್ಯತೆ ಪಡ್ಕೊಂಡಿದೆ ಅಂದ್ರೆ, ಮೊಬೈಲ್ನಲ್ಲಿ ಮೆಸ್ಸೇಜಿನ 'ಟುಯ್ ...ಟುಯ್ ...' ಶಬ್ದ ಇಲ್ಲದಿದ್ದರೆ ಮನೆ ಎಲ್ಲಾ ಖಾಲಿ ...ಖಾಲಿ.... ಆ ಶಬ್ದ ಒಂಥರಾ ಆನಂದ, ಖುಷಿ ಕೊಡುತ್ತೆ. ನಮ್ಮ ಜೊತೆ ಯಾರೋ ಒಬ್ಬ ಸ್ನೇಹಿತರು ಯಾವಾಗಲೂ ಇರ್ತಾರೆ ಅನ್ನೋ ಭಾವನೆ. ಈ ಹೊಸ ವರ್ಷದ ಗಲಾಟೇಲಿ ಈ ಎರಡು ದಿನಾ ಇದಕ್ಕೆಲ್ಲಾ ಪೂರ್ಣ ವಿರಾಮ.ದಿನಾ ಎಷ್ಟು ಮೆಸೇಜ್ ಮಾಡಿದ್ರು ಸುಸ್ತಾಗದ ಕೈಗಳಿಗೆ ಎರಡು ದಿನ ಫುಲ್ ರೆಸ್ಟ್ ... :-)
ಫೇಸ್ಬುಕ್ ಅಥವಾ e-mail ಮುಖಾಂತರ ಸಹಾ ನಾವು ಸ್ನೇಹಿತರು ಸಂಪರ್ಕದಲ್ಲಿ ಇರಬಹುದು.ಆದರೆ ನೂರೆಂಟು ಸಮಸ್ಯೆ. ಕರೆಂಟ್ ಇಲ್ಲ, ನೆಟ್ವರ್ಕ್ ಪ್ರಾಬ್ಲಂ, ಸ್ನೇಹಿತರು online ಇದ್ದಾಗ ನನಗೆ ಅಡಿಗೆ ಕೆಲಸ. ಒಂದಕ್ಕೊಂದು ಸರಿ ಹೊಂದುವುದಿಲ್ಲ. ಅದೇ ಮೊಬೈಲ್ ಆದರೆ ಎಲ್ಲಿ ಬೇಕು ಅಲ್ಲಿ, ಯಾವಾಗ ಬೇಕು ಆವಾಗ ಉಪಯೋಗಿಸಬಹುದು. ಕೆಲವೊಮ್ಮೆ ಸ್ನೇಹಿತರು ಸುಮ್ಮನೆ 'ಖಾಲಿ ಮೆಸೇಜ್' ಕಳಿಸಿದರು 'ಟುಯ್ ಟುಯ್ ' ಶಬ್ದ ಕೇಳಿ ಇದ್ದ ಬದ್ದ ಕೆಲಸ ಎಲ್ಲ ಬಿಟ್ಟು, ಓಡಿ ಬಂದು ನೋಡಿದ್ದುಂಟು . ಕೊನೆಗೆ ಅವರಿಗೆ 'ತಲೆಹರಟೆ' ಸಾಕು ಅಂತ ಒಂದು ಮೆಸೇಜ್ ಕಳಿಸಿ ಬೈದಿದ್ದುಂಟು.
ಮೊದಲು ತಿಂಗಳಿಗೆ 200 ರಾಷ್ಟ್ರೀಯ ಮೆಸೇಜ್ ಉಚಿತವಾಗಿ ಇದ್ದದ್ದು, ಕಡಿತಗೊಂಡು ಈಗಂತೂ ಕೇವಲ 100 ರಾಜ್ಯ ಮೆಸೇಜ್ಗಳು...ಇದೆಲ್ಲಾ ಯಾರಿಗೆ ಸಾಲುತ್ತೆ, ಅಂತಾ ಆ ಅಸ್ಸಾಂ ಗಲಾಟೆ ಮಾಡಿದವರಿಗೊಂದಿಷ್ಟು ಶಾಪ... grrrrrrrrr..... ಅದು ಅಲ್ಲದೇ ಬೇರೆ ರಾಜ್ಯದ ಸ್ನೇಹಿತರಿಗೋಸ್ಕರ ಪ್ರತಿ ತಿಂಗಳು "ನ್ಯಾಷನಲ್ ಎಸ್ ಎಂ ಎಸ್ ರಿಚಾರ್ಜ್ ಪ್ಯಾಕೇಜ್ ಬೇರೆ"...ಇಷ್ಟೆಲ್ಲಾ ಆದ್ರೂ ನಾವು ಸ್ನೇಹಿತರು ತುಂಬಾ ಇಷ್ಟ ಪಡುವ ಒಂದು ಸಂಪರ್ಕ ಸಾಧನ... :-)
ದಿನ ಬೆಳಗಾದ್ರೆ 'ಗುಡ್ಮಾರ್ನಿಂಗ್'ನಿಂದ ಪ್ರಾರಂಭ ಆಗೋ ನಾನು ಮತ್ತು ನನ್ನ ಸ್ನೇಹಿತರ ಸಂದೇಶಗಳು ಅವತ್ತಿನ ತಿಂಡಿ,ಊಟ, ಮಕ್ಕಳ ಸ್ಕೂಲ್, ಪಾಠ , ಹೋಂವರ್ಕ್ , ಸಿನೆಮಾ, ಧಾರಾವಾಹಿಗಳು, ಜೋಕ್ಸ್, ಟೂರ್,ವಾಕಿಂಗ್ ...ಬಹುಷಃ ಯಾವುದೇ ವಿಷಯ ಬಿಡದ ಹಾಗೆ ಚರ್ಚೆ ಮಾಡ್ತಿವಿ. ಸ್ನೇಹಿತರ ಪ್ರೀತಿಯ ಮಾತು, ಜಗಳ, ಸಾಂತ್ವಾನ, ಚರ್ಚೆ,ಕೋಪ ಎಲ್ಲಾ ಈ ಮೆಸೇಜ್ಗಳಲ್ಲಿ ಅಡಗಿರುತ್ತೆ. ರಾತ್ರಿಯ 'ಗುಡ್ ನೈಟ್' ತನಕ ಈ ಸಂದೇಶಗಳು ವಿನಿಮಯ ಆಗ್ತಾ ಇರುತ್ತೆ.
ಈ ಮೆಸೇಜ್ಗಳು ಕೆಲವೊಮ್ಮೆ inboxನಲ್ಲಿ ಅದೆಷ್ಟು ತುಂಬಿರುತ್ತೆ ಅಂದ್ರೆ, ಹೊಸ ಸಂದೇಶಗಳಿಗೆ ಜಾಗವೇ ಇರುವುದಿಲ್ಲ. ಆದರೂ ಆ ಹಳೆಯ ಮೆಸೇಜ್ಗಳನ್ನು delete ಮಾಡಲು ಮನಸ್ಸು ಬರುವುದಿಲ್ಲ. ನನಗೆ ಕೆಲವೊಮ್ಮೆ ಮನಸ್ಸು ಬೇಸರ ಆದಾಗ, ಒಂಟಿಯಾಗಿ ಇದ್ದಾಗ ಈ inbox open ಮಾಡಿ ಓದಿ, ಹಳೆಯ ನೆನಪುಗಳನ್ನು 'ಮೆಲುಕು' ಹಾಕುವ ಅಭ್ಯಾಸ ಬೇರೆ ಇದೆ.
ಇನ್ನು ಗಮ್ಮತ್ತೆಂದರೆ ಯಾರಾದ್ರೂ ಸ್ನೇಹಿತರು ಬೇರೆ ಊರಿಗೆ ಪ್ರಯಾಣ ಮಾಡ್ತೇನೆ ಅಂದ್ರೆ, ಆರಾಮಾಗಿ 'ಸುಖಪ್ರಯಾಣ' ಅನ್ನೋ ಒಂದು ಸಂದೇಶ.ಆದರೆ ಅವರು ಆ ಜಾಗ ತಲುಪುವುದರೊಳಗಾಗಿ ಹತ್ತಾರು ಮೆಸೇಜ್ ವಿನಿಮಯ ಆಗಿರುತ್ತೆ. ಎಲ್ಲಿದ್ದೀಯಾ..?? ಇನ್ನು ಎಷ್ಟು ದೂರ...?? ಊಟ ಆಯ್ತಾ..?? ಅಕಸ್ಮಾತ್ ಅಪ್ಪಿತಪ್ಪಿ ಆ ಜಾಗದಲ್ಲಿ ನೆಟ್ವರ್ಕ್ ಇಲ್ಲದೇ, ಅವರ ಪ್ರತಿ ಉತ್ತರ ಬರದಿದ್ದರೆ, ಅಥವಾ ತಡವಾಗಿ ಅವರು ಉತ್ತರಿಸಿದರೆ, ಇನ್ನೂ ಚಿಂತೆ. ದೇವರೆ ...ಆರಾಮಾಗಿ ಅವರು ತಮ್ಮ ತಾಣ ತಲುಪಲಿ ಎನ್ನುವ ಹಾರೈಕೆ, ಪ್ರಾರ್ಥನೆ...
ಇನ್ನು ಈ ಮೆಸೇಜ್ಗಳ ಭಾಷೆಯೇ ಬೇರೆ. ಕನ್ನಡ,ಹಿಂದಿ, ಇಂಗ್ಲೀಶ್ ಜೊತೆಗೆ ನಮ್ಮ ಮಾತೃ ಭಾಷೆ ಎಲ್ಲಾ ಒಟ್ಟಾಗಿ ಟೈಪ್ ಮಾಡಿ send ಮಾಡ್ತಾ ಇರ್ತೇವೆ. 'ok' ಅಂತ ಇರೋದೇ ಎರಡಕ್ಷರ , ಅದನ್ನು short ಮಾಡಿ 'k ' ಅಂತ ಟೈಪ್ ಮಾಡ್ತೇವೆ.
ಪ್ರತಿ ದಿನಾ ಒಂದಷ್ಟು ಆತ್ಮೀಯ ಸ್ನೇಹಿತರು ಮೆಸೇಜ್ ಮಾಡ್ಕೋತಾ ಇರ್ತೇವೆ. ಎಲ್ಲಾದರೂ ಅಪ್ಪಿತಪ್ಪಿ ಒಬ್ಬ ಸ್ನೇಹಿತರು ಒಂದು ದಿನ ನಮ್ಮ ಜೊತೆ ಸಂಪರ್ಕದಲ್ಲಿ ಇಲ್ಲ ಅಂದರೆ ಕಾದುಕಾದು ಕೊನೆಗೆ, 'r u ok..???', "where r u.." ಎಂಬ ಕಾಳಜಿಯ ಸಾಲುಗಳು ನಮ್ಮಿಂದ ಹೊರಡುತ್ತೆ. ಒಬ್ಬ ಸ್ನೇಹಿತರ ಸಂಪರ್ಕ ಒಂದು ದಿನ ತಪ್ಪಿದರೆ ಎನೋ ಕಳೆದುಕೊಂಡ ಭಾವನೆ ...ಮನಸ್ಸೆಲ್ಲಾ 'ಇವತ್ತು ಎನೋ missing...missing ...ಅಂತಾ ಇರತ್ತೆ'. ಕೊನೆಗೆ ಅವರು, "ಹೇ ನಾನು ಇವತ್ತು ತುಂಬಾ ಬ್ಯುಸಿ, catch u later"...ಅಂದ್ರೆ ಸಮಾಧಾನದ ನಿಟ್ಟುಸಿರು. ಅಷ್ಟೊಂದು ಭಾಂಧವ್ಯದ ಭಾವ ಈ ಸಂದೇಶಗಳ ಮೂಲಕ ನಮ್ಮಲ್ಲಿ ಮೂಡಿಸುತ್ತೆ .
ಇನ್ನು ಈ ಮೆಸೇಜ್ಗಳ ಭಾಷೆಯೇ ಬೇರೆ. ಕನ್ನಡ,ಹಿಂದಿ, ಇಂಗ್ಲೀಶ್ ಜೊತೆಗೆ ನಮ್ಮ ಮಾತೃ ಭಾಷೆ ಎಲ್ಲಾ ಒಟ್ಟಾಗಿ ಟೈಪ್ ಮಾಡಿ send ಮಾಡ್ತಾ ಇರ್ತೇವೆ. 'ok' ಅಂತ ಇರೋದೇ ಎರಡಕ್ಷರ , ಅದನ್ನು short ಮಾಡಿ 'k ' ಅಂತ ಟೈಪ್ ಮಾಡ್ತೇವೆ.
ಪ್ರತಿ ದಿನಾ ಒಂದಷ್ಟು ಆತ್ಮೀಯ ಸ್ನೇಹಿತರು ಮೆಸೇಜ್ ಮಾಡ್ಕೋತಾ ಇರ್ತೇವೆ. ಎಲ್ಲಾದರೂ ಅಪ್ಪಿತಪ್ಪಿ ಒಬ್ಬ ಸ್ನೇಹಿತರು ಒಂದು ದಿನ ನಮ್ಮ ಜೊತೆ ಸಂಪರ್ಕದಲ್ಲಿ ಇಲ್ಲ ಅಂದರೆ ಕಾದುಕಾದು ಕೊನೆಗೆ, 'r u ok..???', "where r u.." ಎಂಬ ಕಾಳಜಿಯ ಸಾಲುಗಳು ನಮ್ಮಿಂದ ಹೊರಡುತ್ತೆ. ಒಬ್ಬ ಸ್ನೇಹಿತರ ಸಂಪರ್ಕ ಒಂದು ದಿನ ತಪ್ಪಿದರೆ ಎನೋ ಕಳೆದುಕೊಂಡ ಭಾವನೆ ...ಮನಸ್ಸೆಲ್ಲಾ 'ಇವತ್ತು ಎನೋ missing...missing ...ಅಂತಾ ಇರತ್ತೆ'. ಕೊನೆಗೆ ಅವರು, "ಹೇ ನಾನು ಇವತ್ತು ತುಂಬಾ ಬ್ಯುಸಿ, catch u later"...ಅಂದ್ರೆ ಸಮಾಧಾನದ ನಿಟ್ಟುಸಿರು. ಅಷ್ಟೊಂದು ಭಾಂಧವ್ಯದ ಭಾವ ಈ ಸಂದೇಶಗಳ ಮೂಲಕ ನಮ್ಮಲ್ಲಿ ಮೂಡಿಸುತ್ತೆ .
ಇವತ್ತು ಜನವರಿ 2. 2013. ಇವತ್ತಿನಿಂದ ಪುನಃ ನಮ್ಮ ಸ್ನೇಹಿತರ ಗುಂಪಿನಲ್ಲಿ ಚಟುವಟಿಕೆ ಪ್ರಾರಂಭ ಆಗಿದೆ. ಮೆಸೇಜ್ toneಗಳ ಶಬ್ದ ಮನೆಯಲ್ಲಿ ಕೇಳಲಿಕ್ಕೆ ಪ್ರಾರಂಭ ಆಗಿದೆ. ಕಳೆದ ಎರಡು ದಿನಗಳು, ಎಷ್ಟೋ ವರ್ಷಗಳು ಕಳೆದೆವೆನೋ ಎಂಬ ಭಾವನೆ ನಮ್ಮ ಮನದಲ್ಲಿ. ಇವತ್ತಿನಿಂದ ಪುನಃ ನಮ್ಮ ತರಲೆ, ತಮಾಷೆ, ಪ್ರೀತಿ ಮುಂದುವರಿಯುತ್ತದೆ. :-)
ಆತ್ಮೀಯ ಸ್ನೇಹಿತರೆ,ನನ್ನ ಬ್ಲಾಗಿಗೆ ಭೇಟಿ ಕೊಟ್ಟ ನಿಮಗೆಲ್ಲರಿಗೂ 'ಹೊಸ ವರ್ಷದ ಶುಭಾಶಯಗಳು'. ಎಲ್ಲರಿಗೂ ಈ ವರ್ಷ ಚೆನ್ನಾಗಿರಲಿ.....
ಪ್ರೀತಿಯಿಂದ
ಸುದೀಪ.....
ಹಹಹ, ಸುಮತಿ.. ಈ ಮೊಬೈಲ್ ಎಂತಹ ಮಾಯದ ಪರಿಕರ? ಅಲ್ವಾ???
ReplyDeleteಇದು ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ ಹಾಗಾಗಿದೆ ನಮ್ಮ ಜೀವನ ಶೈಲಿ.
ತುಂಬಾ ಸರಳವಾಗಿ, ಸ್ವಾರಸ್ಯಕರವಾಗಿ ನಿರೂಪಿಸಿದ್ದೀರಿ ವಿಷಯವನ್ನು.
ಧನ್ಯವಾದಗಳು ಅಜಾದ್ ಭಾಯ್, ನಿಜ mobile ಇಲ್ಲದೆ ಜೀವನ ಇಲ್ಲ ಅನ್ನೋ ಹಾಗೆ ಆಗಿದೆ ಪರಿಸ್ಥಿತಿ.... :)
Deleteಸುಮತಿ ಹಹಹ ಚೆನ್ನಾಗಿದೆ ಪಾಪ ಹೀಗಾಗಬಾರದಿತ್ತು...:) ಎಸ್.ಎಂ.ಎಸ್ ನಿಂದ ಎರಡು ದಿನ ಫ್ರೀ ಇಲ್ಲದೇ ನೀವು ಫ್ರೀ ಆಗಿದ್ರಿ ಅಲ್ವಾ
ReplyDeleteಮನಸು(ಸುಗುಣ), ಎರಡು ದಿನ ಸ್ವಲ್ಪ ಫ್ರೀ, ಆದರೆ ತುಂಬಾನೇ ಖಾಲಿ ಖಾಲಿ...
Deleteಚೆನ್ನಾಗಿದೆ ಮೆಸೇಜ್ ಮಹಾತ್ಮೆ..... ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...
ReplyDeleteಧನ್ಯವಾದಗಳು ದಿನಕರ್ ಸರ್, ತಮಗೂ ಹೊಸ ವರ್ಷದ ಶುಭಾಶಯಗಳು....
Deleteಎಸ್.ಎಂ.ಎಸ್ ಪುರಾಣ ಬಹಳ ಚೆನ್ನಾಗಿದೆ.
ReplyDeleteಇನ್ನೂ ಕೆಲವರಿದ್ದಾರೆ ಅವರಿಗೆ ಅವರ ಇನ್ ಬಾಕ್ಸಿಗೆ ಬಂದು ಬೀಳುವ ಎಸ್.ಎಂ.ಎಸ್ ಗಳನ್ನು ಫಾರ್ವರ್ಡ್ ಮಾಡುವ ಖಯಾಲಿ. ಒಮ್ಮೆ ನನಗೆ ಬಂದ ಎಸ್.ಎಂ.ಎಸ್ "ನಾನು ಅಪ್ಪನಾದೆ" ಅನ್ನುವ ಅರ್ಥ ಕೊಡುವ ಉದ್ದದ ಎಸ್.ಎಂ.ಎಸ್. ನನಗೆ ಅರ್ಥವಾಗಲಿಲ್ಲ ಏಕೆಂದರೆ ಅದನ್ನು ಫಾರ್ವರ್ಡ್ ಮಾಡಿದ ಭೂಪ ಇನ್ನೂ ಪಿ.ಉಇ.ಸಿ ಪೋರ!
ಬದರಿ ಭಾಯ್....ನಾವು ಮೆಸೇಜ್ forward ಮಾಡ್ತಿವಿ.. ಆದರೆ ಯಾರಿಗೆ ಯಾವ message ಕಳಿಸಬೇಕು ಅಂತ ಸ್ವಲ್ಪ ಯೋಚನೆ ಮಾಡ್ತಿವಿ... :-)
Deleteಚಂದದ ಬರಹ....
ReplyDeleteನನ್ನ ಗೆಳೆಯನೊಬ್ಬ ಮೆಸೆಜ್ ಕಳಿಸ್ತಾನೆ..
ಪ್ರತಿ ದಿನ ಬೆಳಿಗ್ಗೆ ಸರಿಯಾಗಿ ಆರು ಗಂಟೆಗೆ...
ಎಲ್ಲದಿನವೂ ನಾನು ಉತ್ತರಿಸಲಾಗುವದಿಲ್ಲ..
ಬಹಳ ದಿನ ಉತ್ತರ ಬರದಿದ್ದಲ್ಲಿ ಆತ..
" ಜನುಮ ದಿನದ ಶುಭಾಶಯಗಳು"
ಅಥವಾ..
ಲಾಲೂ ಪ್ರಸಾದನ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು" ಅಂತಲೊ ಮೆಸೆಜ್ ಮಾಡ್ತಾನೆ...
ಆಗ ಅನಿವಾರ್ಯವಾಗಿ ತಕ್ಷಣ ಉತ್ತರಿಸುತ್ತೇನೆ...
ಪ್ರಕಾಶಣ್ಣ, ಹಾಗೆ ಕೆಲವೊಮ್ಮೆ ಈ ಸ್ನೇಹ-ಸಂಭಂಧಗಳು ಈ ಮೆಸೇಜ್ಗಳಿಂದ ಇನ್ನು ಗಟ್ಟಿಯಾಗುತ್ತೆ... ನಿಮ್ಮ ಸ್ನೇಹಿತನ ತರಹ ನನಗೊಬ್ಬ ಸ್ನೇಹಿತೆಯೂ ಇದ್ದಾಳೆ... :)
Deleteಶ್ರೀ.... :) :) :)
ReplyDeleteಸುಂದರ ಬರಹ . ನಿಮಗೂ ಹೊಸವರ್ಷದ ಶುಭಾಶಯಗಳು
ReplyDeleteಧನ್ಯವಾದಗಳು ಸ್ವರ್ಣ....
Deleteಸುಮತಿ ಅಕ್ಕಾ,
ReplyDeleteಚೆನಾಗಿದೆ ಮೆಸ್ಸೆಜ್ ಪುರಾಣ....
ನನಗಂತೂ ಓದಲು ಇಷ್ಟೇಲ್ಲಾ ಸಮಯ ಸಿಗತ್ತಾ ಅಂತಾ ಅನ್ಸಿದ್ದು ೩೧ ಹಾಗೂ ೧ ಕ್ಕೆ!!!!
ನಾನೂ ಒಂದಾನೊಂದು ಕಾಲದಲ್ಲಿ "ಓಂ ಮೆಸ್ಸೆಜಾಯ ನಮಃ " ಎಂದು ಮೆಸ್ಸೆಜನ್ನು ದೇವರಿಗೆ ಹೋಲಿಸುತ್ತಾ ಒಂದು ಬರಹ ಬರೆಯುವ ಪ್ರಯತ್ನ ಮಾಡಿದ್ದೆ...ಆಮೇಲೆ ಯಾಕೋ ನಿಂತೋಯ್ತು...
ನಿಮ್ಮ ಬರಹ ಓದಿ ಯಾಕೋ ನೆನಪಾಯ್ತು..ನೋಡಣಾ ನಿಮ್ಮ ಬರಹವಾದರೂ ನನ್ನ ಸೋಮಾರಿ ಮನಸ್ಸಿಗೆ ಸ್ಪೂರ್ತಿಯಾಗಲಿ...
ಬರೆದ ರೀತಿ ಚೆನಾಗಿತ್ತು ಅಕ್ಕಾ...
ಬರೀತಾ ಇರಿ...
ಹಾಂ ಅದು ಶಾರ್ಟ್ ಕಟ್ ಮೆಸ್ಸೆಜುಗಳ ಬಗ್ಗೆ ಬರೆದದ್ದಂತೂ ಮಸ್ತಾಗಿತ್ತು...
ನಮಸ್ತೆ :)
thank u chinmay.... :)
Deleteಮೀನನ್ನು ಹಿಡಿಯಲಿಕ್ಕೆ ಬಿಡುವ ಗಾಳದ ತುದಿಯ ಹುಳುವಿನ ಹಾಗೆ ಈ ಸಂದೇಶಗಳು.. ಹತ್ತಿರ ದೂರದ ಪ್ರಶ್ನೆ ಬರುವುದೇ ಇಲ್ಲ...ಬಂಧು ಮಿತ್ರರ ಉ.ಕು.ಸಾಂ ಕಲಿಸಿದರೆ ಸಾಕು..ಮತ್ತೆ ಕೊಂಡಿ ಬೆಸೆದು ಬರುತ್ತದೆ...ಒಂದು ಚಿಕ್ಕ ಎಸ್.ಎಂ.ಎಸ್ ಬಗ್ಗೆ ಎಷ್ಟು ಸುಂದರವಾಗಿ ಬರೆಯಬಹುದು ಎನ್ನುವುದನ್ನು ನಿಮ್ಮ ಲೇಖನ ಓದಿದಾಗ ತಿಳಿಯುತ್ತದೆ. ತುಂಬಾ ಸೊಗಸಾಗಿದೆ...ಹೊಸ ದಿನಸೂಚಿ ತೋರುವ ಪಟದ ವರುಷಕ್ಕೆ ಹರುಷದ ಶುಭಾಶಯಗಳು!!!
ReplyDeleteಶ್ರೀಕಾಂತ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... :)
Deleteಹೌದಲ್ಲವೇ,
ReplyDeleteನಿಜಕ್ಕೂ ಮೊಬೈಲ್ ಬಂದಾಗಿನಿಂದ ತೀರ ಮಾತಾಡಲು ಅವಶ್ಯಕತೆಯಿಲ್ಲದೆ ಬರೀ ಸಂದೇಶ ಕಳಿಸಲು ಸಹಾಯಕವಾಗಿದ್ದು ಈ SMS ಗಳು. ಪ್ರೀತಿಯ ಹೊಸತರಲ್ಲಿ ಈ SMS ಗಳೇ ಬಹಳಷ್ಟು ಬಾರಿ ನನ್ನ ಅವಳ ಜಗಳಗಳನ್ನು ಪರಿಹರಿಸಿವೆ!! :)
ಇವತ್ತಿಗೂ ಜೋಕುಗಳನ್ನು ನೋಡಿ ಎಂಜಾಯ್ ಮಾಡುವುದು SMS ಗಳಲ್ಲೇ!!
good article !!
ಸಂತೋಷ್... ;-) sms ತಂತ್ರಜ್ನ್ಯಾನ ಕಂಡುಹಿಡಿದವರಿಗೆ ಒಂದು ಸಲಾಂ... :)
Delete