ಸ್ನೇಹಿತರೇ ...ಹಿಂದಿನ ಸಂಚಿಕೆಯಲ್ಲಿ ಅಪ್ಲೋಡ್ ಆಗದ "ರಿವರ್ ಕ್ರೂಸ್ನ" ಇನ್ನೊಂದು ವಿಡಿಯೋ ನಿಮಗಾಗಿ...ಈ ಬಾರಿ ಪುನಃ ಕಷ್ಟ ಪಟ್ಟು ಅಪ್ಲೋಡ್ ಆಗಿದೆ.....ಇದು ನನ್ನ ಇಷ್ಟದ ವಿಡಿಯೋ ಸಹಾ .... :))
ಮುಂದುವರಿದ ಪ್ರವಾಸ ಕಥೆ.....
ಮರುದಿನ ಅಂದರೆ ಅವತ್ತು ತಾರೀಕು ಅಕ್ಟೋಬರ್ 20...ಸ್ನೇಹಿತರ ಮನೆಯಲ್ಲಿ ಬೆಳಕಾಯ್ತು ...ಬಿಸಿಬಿಸಿ ಚಹಾ ಸೇವನೆಯ ನಂತರ ಸ್ನೇಹಿತರ ಮಗನ ಶಾಲೆಯಲ್ಲಿ ಅವತ್ತು "ಓಪನ್ ಡೇ " ಇದ್ದದ್ದರಿಂದ ಅವರಿಗೆ ಶಾಲೆಗೆ ಹೋಗಬೇಕಿತ್ತು....ಬೇಗ ಬೇಗ ಸ್ನಾನ ಮುಗಿಸಿ ...ಸ್ನೇಹಿತೆ ತಯಾರಿಸಿದ ಚಿತ್ರಾನ್ನ ತಿಂದು...ನಾವು ರೆಡಿಯಾದ್ವಿ .. ಅವರು ಶಾಲೆಗೆ ಹೋಗಿ ಅಲ್ಲಿಯ ಕೆಲಸ ಮುಗಿಸಿ ಬಂದ ನಂತರ , ಅವರ ಮಗ ದಾಮೋದರ್ ಸಹಾ ನಮ್ಮ ಜೊತೆ ಆ ದಿನ ಪ್ರವಾಸಕ್ಕೆ ಹೊರಟಿದ್ದ .....
ನಂತರ ನಮ್ಮ ಅವತ್ತಿನ ಪ್ರಯಾಣ ಶುರು ಆಗಿದ್ದು 10 ಘಂಟೆಗೆ ...ನಿಸರ್ಗ ರಮಣೀಯವಾದ "ದೂದ್ ಸಾಗರ್ ಫಾಲ್ಸ್ಗೆ".... ಗೋವ ಟೂರಿಸಂನವರು ಫಾಲ್ಸ್ನ ಪ್ಯಾಕೇಜನ್ನು ಇನ್ನು ಶುರು ಮಾಡದೆ ಇರುವುದರಿಂದ ನಾವು ಖಾಸಗಿ ಟ್ಯಾಕ್ಸಿ ಮಾಡಿ ಹೊರಟಿದ್ದೆವು...ಮಡಗಾಂವ್ನಿಂದ ಸುಮಾರು ಒಂದು ಘಂಟೆಯ ಪ್ರಯಾಣ... ನಮ್ಮ ಡ್ರೈವರ್ ಅಬ್ದುಲ್ಲ ದಾರಿಯಲ್ಲಿ ಸಿಗುವ ಯಾವುದೇ ವಿಶೇಷ ಸ್ಥಳಗಳ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತ ಡ್ರೈವ್ ಮಾಡ್ತಿದ್ದರು ....ಆ ರಸ್ತೆ ಮಾತ್ರ ತುಂಬಾ ತಿರುವುಗಳು...ನಿಮಿಷಕ್ಕೊಂದು ತಿರುವು ....ನನಗಂತು ತಲೆ ಹೊಟ್ಟೆಯಲ್ಲಿ ತಿರುಗಿದ ರೀತಿ ಸಂಕಟ.....ಸಾಕಪ್ಪಾ ...ಸಾಕು ಈ ಪ್ರಯಾಣ ಅನ್ನಿಸ್ತಿತ್ತು ..
.ಕೊನೆಗೂ ನಮ್ಮ ಸ್ಥಳ ತಲುಪಿದಾಗ ಹನ್ನೊಂದು ಘಂಟೆ ಸಮಯ ....ನಮಗೆ ಅಲ್ಲಿಯ ಆಫೀಸಿನಲ್ಲಿ ಹಣ ಕಟ್ಟಿ ಅವರದ್ದೇ ವಾಹನದಲ್ಲಿ ಮುಂದಿನ ಪ್ರಯಾಣ....ನಮ್ಮ ಖಾಸಗಿ ವಾಹನಕ್ಕೆ ಒಳಗೆ ಅನುಮತಿಯಿಲ್ಲ ...ಅವರು ಸಧ್ರಢವಾಗಿರುವ ಜೀಪ್ನಲ್ಲಿ ಸುಮಾರು 8-9 ಜನರನ್ನು ಕೂರಿಸಿಕೊಂಡು ಪ್ರಯಾಣ ಶುರು ಮಾಡ್ತಾರೆ...ಪುನಃ ಸುಮಾರು ಮುಕ್ಕಾಲು ಘಂಟೆಯ ದಾರಿ .....ಆ ದಾರಿ ನೆನಪಿಸಿಕೊಂಡರೆ ಈಗಲೂ ಚಳಿ-ಜ್ವರ ಬರುತ್ತೆ....ಸುತ್ತಲು ಕಾಡು ...ಕೊರಕಲು ಹಾದಿ..ಕಲ್ಲು ಮಣ್ಣುಗಳ ಒರಟಾದ ರಸ್ತೆ..ಬೆನ್ನು, ಸೊಂಟದಲ್ಲಿ ಎಷ್ಟು ಮೂಳೆಗಳಿವೆ ಎಂಬುದನ್ನು ಲೆಕ್ಕ ಹಾಕಬಹುದು...ಅಷ್ಟೊಂದು ಅಲುಗಾಟ ... ಇಡೀ ಮೈಯನ್ನು ನುಜ್ಜು ಗುಜ್ಜಾಗ್ಸಿ ಬಿಡುತ್ತದೆ ಆ ಪ್ರಯಾಣ...
ಆ ಜೀಪ್ನಲ್ಲಿ ಕೂತು ಒಂದು ಫೋಟೋ ತೆಗಿಬೇಕಂದ್ರೆ ಹರಸಾಹಸ.... ಹತ್ತಾರು ಕ್ಲಿಕ್ಕ್ಗಳು ...ಎಲ್ಲವೂ ಬ್ಲರ್.... ಎಷ್ಟು ಕಷ್ಟ ಅಂದ್ರೆ, ನಾನು ಕೂತ ಸೀಟ್ನಿಂದ ಕೆಳಗೆ ಬೀಳ್ತಿನೋ, ಅಥವಾ ನನ್ನ ಕೈಯಲ್ಲಿದ್ದ ಕ್ಯಾಮರಾ ಬೀಳ್ತದೋ ಎಂಬ ಭಯ...ಅಷ್ಟೊಂದು ಜಂಪ್ ...ಜಂಪ್ ..... :))
ಹೀಗಿತ್ತು ಅಲ್ಲಿಯ ರಸ್ತೆ....
ಜೀಪಿನಲ್ಲಿ ಪಯಣಿಸುವಾಗ ದಾರಿ ಮಧ್ಯೆ ಕಂಡುಬಂದ ಹಕ್ಕಿಗಳ ಗುಂಪು...
.ಕೊನೆಗೂ ನಮ್ಮ ಸ್ಥಳ ತಲುಪಿದಾಗ ಹನ್ನೊಂದು ಘಂಟೆ ಸಮಯ ....ನಮಗೆ ಅಲ್ಲಿಯ ಆಫೀಸಿನಲ್ಲಿ ಹಣ ಕಟ್ಟಿ ಅವರದ್ದೇ ವಾಹನದಲ್ಲಿ ಮುಂದಿನ ಪ್ರಯಾಣ....ನಮ್ಮ ಖಾಸಗಿ ವಾಹನಕ್ಕೆ ಒಳಗೆ ಅನುಮತಿಯಿಲ್ಲ ...ಅವರು ಸಧ್ರಢವಾಗಿರುವ ಜೀಪ್ನಲ್ಲಿ ಸುಮಾರು 8-9 ಜನರನ್ನು ಕೂರಿಸಿಕೊಂಡು ಪ್ರಯಾಣ ಶುರು ಮಾಡ್ತಾರೆ...ಪುನಃ ಸುಮಾರು ಮುಕ್ಕಾಲು ಘಂಟೆಯ ದಾರಿ .....ಆ ದಾರಿ ನೆನಪಿಸಿಕೊಂಡರೆ ಈಗಲೂ ಚಳಿ-ಜ್ವರ ಬರುತ್ತೆ....ಸುತ್ತಲು ಕಾಡು ...ಕೊರಕಲು ಹಾದಿ..ಕಲ್ಲು ಮಣ್ಣುಗಳ ಒರಟಾದ ರಸ್ತೆ..ಬೆನ್ನು, ಸೊಂಟದಲ್ಲಿ ಎಷ್ಟು ಮೂಳೆಗಳಿವೆ ಎಂಬುದನ್ನು ಲೆಕ್ಕ ಹಾಕಬಹುದು...ಅಷ್ಟೊಂದು ಅಲುಗಾಟ ... ಇಡೀ ಮೈಯನ್ನು ನುಜ್ಜು ಗುಜ್ಜಾಗ್ಸಿ ಬಿಡುತ್ತದೆ ಆ ಪ್ರಯಾಣ...
ಆ ಜೀಪ್ನಲ್ಲಿ ಕೂತು ಒಂದು ಫೋಟೋ ತೆಗಿಬೇಕಂದ್ರೆ ಹರಸಾಹಸ.... ಹತ್ತಾರು ಕ್ಲಿಕ್ಕ್ಗಳು ...ಎಲ್ಲವೂ ಬ್ಲರ್.... ಎಷ್ಟು ಕಷ್ಟ ಅಂದ್ರೆ, ನಾನು ಕೂತ ಸೀಟ್ನಿಂದ ಕೆಳಗೆ ಬೀಳ್ತಿನೋ, ಅಥವಾ ನನ್ನ ಕೈಯಲ್ಲಿದ್ದ ಕ್ಯಾಮರಾ ಬೀಳ್ತದೋ ಎಂಬ ಭಯ...ಅಷ್ಟೊಂದು ಜಂಪ್ ...ಜಂಪ್ ..... :))
ಹೀಗಿತ್ತು ಅಲ್ಲಿಯ ರಸ್ತೆ....
ಜೀಪಿನಲ್ಲಿ ಪಯಣಿಸುವಾಗ ದಾರಿ ಮಧ್ಯೆ ಕಂಡುಬಂದ ಹಕ್ಕಿಗಳ ಗುಂಪು...
ಮಧ್ಯ ಮಧ್ಯದಲ್ಲಿ ಸಿಗುವ ಸಣ್ಣ ತೊರೆಗಳು...ನಮ್ಮ ಜೀಪ್ ಅದನ್ನು ದಾಟಿಕೊಂಡು ಹೋಗಬೇಕು...ಕೆಲವೊಮ್ಮೆ ನೀರು ಜೀಪಿನ ಒಳಗೆ ನುಗ್ಗಿ ನಮ್ಮ ಕಾಲನ್ನು ತೊಯ್ಸಿತ್ತು ...ಅಷ್ಟೊಂದು ಆಳವಾಗಿತ್ತು ಆ ನೀರು ....ಅಕಸ್ಮಾತ್ ಎಲ್ಲಾದರು ಮಣ್ಣಿನಲ್ಲಿ ಚಕ್ರಗಳು ಸಿಕ್ಕಿ ಹಾಕಿಕೊಂಡರೆ "ಗೋವಿಂದಾ".....
ಅಂತು ಇಂತು ನಮ್ಮ ತಾಣ ತಲುಪುವಾಗ ಹನ್ನೆರಡು ಘಂಟೆ...ಅಲ್ಲಿಂದ ಪುನಃ ನಡೆದುಕೊಂಡು ಜಲಪಾತ ತಲುಪಬೇಕಿತ್ತು ...ಸ್ವಲ್ಪ ಮೋಡದ ವಾತಾವರಣ ಇತ್ತು ಹಾಗಾಗಿ ಬಿಸಿಲಿನ ಗೊಡವೆ ಇರಲಿಲ್ಲ ...ತಂಪಾದ ಹವೆ....ನಮಗೆ ಕೇವಲ ಒಂದು ಘಂಟೆಯ ಸಮಯ ಅಲ್ಲಿ ವೀಕ್ಷಿಸಲು ನಮ್ಮ ಡ್ರೈವರ್ ನಿಗಧಿ ಮಾಡಿದ್ದರು....
ಜೊತೆಗೆ ಇಬ್ಬರು ಮಕ್ಕಳು, ಅವರಿಬ್ಬರ ಕೈ ಹಿಡಿದುಕೊಂಡು ನಡೆಯಬೇಕಿತ್ತು...ಸ್ವಲ್ಪ ಸ್ವಲ್ಪ ಜಾರುವ ಪಾಚಿಕಟ್ಟಿದ ಬಂಡೆಕಲ್ಲುಗಳು ..ಮರಳಿನಲ್ಲಿ ಕಾಲಿಟ್ಟರು ಜಾರುವ ಪಾದ..
ಮಧ್ಯ ಮಧ್ಯ ಸಿಗುವ ಸಣ್ಣ ಸಣ್ಣ ಹಳ್ಳಗಳು ...ತಂಪಾದ ನೀರು ...ಅದರಲ್ಲಿ ದಾಟುವಾಗ ಒಳ್ಳೆ ಐಸ್ ನೀರಲ್ಲಿ ನಡೆದ ಅನುಭವ...
.
ತಂಪು ತಂಪು ಹರಿವ ನೀರು.... ನಿಸರ್ಗದ ಚಂದ ಇಲ್ಲಿ ಬರ್ಪುರ್ ಕಾಣಬಹುದು....
ದಾರಿ ಮಧ್ಯೆ ಹೀಗಿತ್ತು ಕಲ್ಲು ಬಂಡೆಗಳ ರಾಶಿ...
ಸುಮಾರು 10-15 ನಿಮಿಷ ನಡೆದು ಹೋಗ್ತಾ ಇರಬೇಕಾದ್ರೆ, ನಮ್ಮ ಎದುರಿಗೆ ಕಾಣ ಸಿಕ್ಕಿದ್ದು ಈ ಸುಂದರ ಹಾಲಿನ ಹೊಳೆ...ಇದೇ .."ದೂದ್ ಸಾಗರ್ ಜಲಪಾತ"
ಪ್ರಕೃತಿಯ ಮಧ್ಯೆ ನಾವು...
ಇಲ್ಲಿ ಹೆಚ್ಚಾಗಿ ಕಾಣ ಸಿಗುವವರು ಸಹಾ ವಿದೇಶೀ ಪ್ರವಾಸಿಗರೇ.. ಗೋವಾದ ಮುಖ್ಯ ಆಕರ್ಷಣೆ ಇವರಿಂದಲೇ ಎನ್ನಬಹುದು....
ಚಿತ್ರದ ಮಧ್ಯದಲ್ಲಿ ಕಾಣುತ್ತಿರುವುದು ರೈಲ್ವೆ ಮಾರ್ಗ....
ನಾವು ನಾಲ್ವರು....ಜೊತೆಜೊತೆಗೆ....
ನಾವು ಅಲ್ಲಿ ಇರುವಾಗಲೇ ಗೂಡ್ಸ್ ರೈಲೊಂದು ಪ್ರಯಾಣಿಸುವ ಮನೋಹರ ದೃಶ್ಯ ...
ಮಂಗಗಳಿಗಂತೂ ಪ್ರವಾಸಿಗರಿಂದ ಭೂರಿ ಭೋಜನ....
ಇದನ್ನೆಲ್ಲಾ ಕಣ್ಣು ತುಂಬಿಕೊಂಡು, ಸವಿದು ನಿಗಧಿತ ಸಮಯಕ್ಕೆ ಹೊರಡಬೇಕಿತ್ತು....ನಮ್ಮ ಡ್ರೈವರ್ ನಮಗಾಗಿ ಕಾಯುತ್ತಿದ್ದ ..ಪುನಃ ಅದೇ ಕೊರಕಲು ರಸ್ತೆಯ ಪ್ರಯಾಣ....ನಮ್ಮ ಜೀಪಿನಿಂದ ಸ್ವಲ್ಪ ಹಿಂದೆ ಬರುತ್ತಿದ್ದ ಇನ್ನೊಂದು ಗಾಡಿ, ಅದು ನೀರಿನೊಳಗೆ ಪ್ರಯಾಣಿಸುವಾಗ ಕ್ಲಿಕ್ಕ್ ಮಾಡಿದ್ದು....
ಅಂತು ಅವರ ಆಫೀಸಿನ ಹತ್ತಿರ ನಮ್ಮನಿಳಿಸುವಾಗ ಸುಮಾರು ಮಧ್ಯಾಹ್ನದ ಎರಡು ಘಂಟೆ....ಊಟದ ಸಮಯವಾಗುತ್ತಿತ್ತು...ನಮ್ಮ ಡ್ರೈವರ್ ಅಬ್ದುಲ್ಲಾ ಊಟದ ಹೋಟೆಲ್ ತಲುಪಲಿಕ್ಕೆ ಇನ್ನು ಅರ್ಧ ಘಂಟೆ ಪ್ರಯಾಣ ಇದೆ ಅಂದ...ಅವನು ಇಳಿಸಿದ್ದು ಒಂದು "ಉಡುಪಿ ಹೋಟೆಲ್ನಲ್ಲಿ"....ಅಲ್ಲಿ ಊಟ ಮುಗಿಸಿ ನಮ್ಮ ಮುಂದಿನ ಪ್ರಯಾಣ ಹತ್ತಿರವೇ ಇದ್ದ ಇನ್ನೊಂದು ಬೀಚ್ ...ಅದರ ಹೆಸರು..."ಪೋಲೋಲಿಂ " (pololeum beach)...
ಇದು ನನ್ನ ಇಷ್ಟವಾದ ಆ ಕಿನಾರೆಯ ಒಂದು ಚಿತ್ರ .... :))
ಅಲ್ಲಿ ತಲುಪುವಾಗಲೇ ಸುಮಾರು ನಾಲ್ಕು ಘಂಟೆಯ ಸಮಯ ...ಅಲ್ಲಿ ಒಂದು ಕಡೆ ಸಮುದ್ರವಾದರೆ ಇನ್ನೊಂದು ಕಡೆ ಸಿಹಿನೀರಿನ ಕೆರೆ ಇದೆ....ಅಲ್ಲಿ ಸಹಾ ಸಣ್ಣ ದೋಣಿಗಳಲ್ಲಿ ಒಂದು ಸುತ್ತು ಹಾಕಿಸುತ್ತಾರೆ...ಸುತ್ತಲು ಚಂದದ ಪ್ರಕೃತಿ ...ಕೈಯಿಂದ ಹುಟ್ಟುಹಾಕುವ ದೋಣಿಯಲ್ಲಿ ನಮ್ಮ ಪ್ರಯಾಣ....ಸುಮಾರು ಮುಕ್ಕಾಲು ಘಂಟೆ ....ತುಂಬಾ ಬಿಸಿಲಿತ್ತು ಆ ಸಮಯದಲ್ಲಿ ...ನನಗೆ ಬಿಸಿಲೆಂದರೆ ಅಲರ್ಜಿ....ಆ ದೋಣಿ ಚಲಾಯಿಸುವವನು ಆ ಹಕ್ಕಿ , ಈ ಹಕ್ಕಿ , ಆ ಮರ,ಈ ಮರ ಎಂದು ಅದರ ಹೆಸರನ್ನೆಲ್ಲಾ ವಿವರಿಸುತ್ತಾ ಇದ್ದರೆ ನನಗೆ ಸುಸ್ತು...ನಾವು ಮನೆಯಲ್ಲಿ ಕೊಂಕಣಿ ಮಾತಾಡುವುದಾದರು ಗೋವಾ ಕೊಂಕಣಿಯ ಶೈಲಿಯೇ ಬೇರೆ.... ನನಗೆ ಅರ್ಧ ಅರ್ಥ ಆದರೆ ಇನ್ನರ್ಧ ಅರ್ಥ ಆಗುವುದಿಲ್ಲ ...ಅವನು ಹೇಳಿದ್ದಕ್ಕೆಲ್ಲ ಸುಮ್ಮನೆ "ಹೂ ...ಹೂ ..." ಅಂತ ತಲೆ ಆಡಿಸ್ತಾ ಕೂತಿದ್ದೆ....ಮಕ್ಕಳಿಬ್ಬರು ಅವರ ಪ್ರಪಂಚದಲ್ಲಿ.....
ಹೀಗೆ ಸಾಗುವಾಗ ತೆಗೆದ ಕೆಲವು ಚಿತ್ರಗಳು....
ದೋಣಿಯಲ್ಲಿ ಪ್ರಯಾಣ ಮಾಡುತ್ತಿರುವ ದೀಪ.... ದೇವದತ್ ... ;-)
ಅಲ್ಲೊಂದು ದೊಡ್ಡ ಬಂಡೆ ...ಅದರ ಮೇಲೊಂದು ಚಿಕ್ಕ ಉರುಟಾದ ಕಲ್ಲು...ಅದು ಹೇಗೆ ಬ್ಯಾಲೆನ್ಸ್ ಮಾಡುತ್ತಿತ್ತೋ ಗೊತ್ತಿಲ್ಲ...ಹೀಗಿರುತ್ತೆ ಕೆಲವೊಮ್ಮೆ ನಿಸರ್ಗದ ಅಂದ ಚಂದ ...
ಆಗ ತಾನೇ ಹಾರಲು ಹೋರಾಟ ಚಂದದ ಪಕ್ಷಿ
ನಮ್ಮ ಬೋಟಿಂಗ್ ಆದ ನಂತರ ಪುನಃ ಸಮುದ್ರ ದಡಕ್ಕೆ ಬಂದಾಗ ಅಲ್ಲಿಯ ವಾತಾವರಣ ಹೀಗಿತ್ತು...ಸಂಜೆ ಐದರ ಸಮಯ....
ದಾಮೋದರ್ ತೆಗೆದ ನಮ್ಮ ಚಿತ್ರ...:))
ಮಕ್ಕಳಿಗೆ ಸಮುದ್ರ ಸ್ನಾನ ಮಾಡಬೇಕೆಂಬ ಆಸೆಯಿದ್ದುದ್ದರಿಂದ ಮನೆಯಿಂದ ಹೊರಡುವಾಗಲೇ ಎರಡು ಜೊತೆ ಬಟ್ಟೆ , ಟವೆಲ್ ಎಲ್ಲಾ ತೆಗೊ0ಡು ಬಂದಿದ್ದೆವು... ನನ್ನ ಯಜಮಾನರು ಮಕ್ಕಳನ್ನು ಕರೆದುಕೊಂಡು ನೀರಿಗೆ ಇಳಿದರೆ ...ನಾನು ಅವರ ಬಟ್ಟೆ , ಬ್ಯಾಗ್ ಕಾದುಕೊಂಡು ದಡದಲ್ಲಿ ಇದ್ದ ಒಂದು ಬೋಟ್ ಹತ್ತಿ ಕೂತಿದ್ದೆ....
ಸೂರ್ಯಾಸ್ತದ ಸಮಯ ... ಹೀಗಿತ್ತು ಗೋವಾದಲ್ಲಿ.....
ಈ ಚಿತ್ರದ ಜೊತೆ ಸುಂದರ ನೆನಪಿದೆ...ಅದೆಂದರೆ .....ನಾನು ಗೋವಾಕ್ಕೆ ಹೋದಾಗಿನಿಂದಲೂ ನನ್ನ ಮೊಬೈಲ್ನಲ್ಲಿ "ಫೇಸ್ ಬುಕ್ " ನೋಡಿರಲಿಲ್ಲ....ಕೆಲವೆಡೆ ನೆಟ್ವರ್ಕ್ ಇದ್ದರೆ ಇನ್ನು ಕೆಲವೆಡೆ ಇಲ್ಲ...ನೆಟ್ವರ್ಕ್ ಸಿಗುವಾಗ ನೋಡೋಕ್ಕೆ ಸಮಯವಿರಲಿಲ್ಲ ... ನಮ್ಮ ರೆಸಾರ್ಟ್ನಲ್ಲoತು bsnl network ಇಲ್ಲವೇ ಇಲ್ಲ....ಹಾಗೆ ಸುಮ್ಮನೆ ಕೂತ ನನಗೆ ...ನೆನಪಾಗಿದ್ದು ಫೇಸ್ ಬುಕ್ .... ಸಿಗ್ನಲ್ ಸಿಕ್ತು...ಓಪನ್ ಮಾಡ್ದೆ...ಆಗ ಕಂಡಿದ್ದು ಒಬ್ಬ ಸ್ನೇಹಿತರ "ಹಾಡಿನ ಲಿಂಕ್ "... ಅದು ಕನ್ನಡದ ಇತ್ತೀಚಿನ ಚಿತ್ರದ ಒಂದು ರೋಮ್ಯಾಂಟಿಕ್ ಹಾಡು ..ಆ ಹಾಡಿನಲ್ಲಿ ನನಗೆ ತುಂಬಾ ಇಷ್ಟವಾದ ಸಂಗೀತ ಮತ್ತು ಸಾಹಿತ್ಯ ಸಹಾ....
ಅದನ್ನು ನೋಡಿ ಅಲ್ಲಿ ಕಾಮೆಂಟ್ ಮಾಡದೇ ....ನನ್ನ ಹತ್ತಿರ ಅವರ ಫೋನ್ ನಂಬರ್ ಇತ್ತು...ಅವರಿಗೊಂದು sms ಕಳಿಸ್ದೆ... " ಹೇ ..ಈ ಹಾಡು ,ಸಾಹಿತ್ಯ ಎಲ್ಲಾ ನಂಗೂ ತುಂಬಾ ಇಷ್ಟ..." ಅಂತ.... ಅದಕ್ಕೆ ಅವರ ಮರು sms ಹೀಗಿತ್ತು...." ಆ ಹಾಡನ್ನು ನನ್ನ ಧ್ವನಿಯಲ್ಲಿ ಕೇಳಬೇಕoದರೆ ನoಗೆ ಫೋನ್ ಮಾಡು...." ಅಂತ ...ಅವರಂತೂ ನನ್ನ ಫ್ರೆಂಡ್ಗಳಲ್ಲಿ ತುಂಬಾ ತುಂಬಾ ಕಂಜೂಸ್ ಅಂತಾನೆ ಹೇಳ್ಬಹುದು... :)) ನನ್ನ ಗ್ರಹಚಾರ ..... ಇವರನ್ನು ಹೇಗೂ ರಿಪೇರಿ ಮಾಡಕ್ಕೆ ಆಗಲ್ಲ ... ಇರಲಿ ಅಂತ .ನಾನೇ ಫೋನ್ ಮಾಡ್ದೆ....ಅವರ ಹತ್ತಿರ ಮಾತಾಡದೆ ತುಂಬಾ ದಿನ ಸಹಾ ಆಗಿತ್ತು ....ಅದು ಸಹಾ STD ... :)) 15-20 ನಿಮಿಷ ಮಾತು ಮುಗಿದ ಮೇಲೆ ಆ ಹಾಡನ್ನು ಹಾಡಿದ್ರು ..." ಪರವಾಗಿಲ್ಲ ಸುಮಾರಾಗಿತ್ತು...".ಆದರು ಸಹಾ ..."ತುಂಬಾ ಚೆನ್ನಾಗಿದೆ" ಅಂತ ಸ್ವಲ್ಪ ಹೊಗಳ್ದೆ ... :)) ಪಾಪ ನಿಜ ಅಂತ ನಂಬಿದ್ರೋ ಗೊತ್ತಿಲ್ಲ.. :p ಅಕಸ್ಮಾತ್ ಇದನ್ನ ಓದಿದರೆ ಅಷ್ಟೇ.... ನನ್ನ ಕಥೆ ಮುಗೀತು... :)) ಹೀಗೆ ಒಂದೊಂದು ಚಿತ್ರದ ಹಿಂದೆ ಸಣ್ಣ ಸಣ್ಣ ನೆನಪುಗಳು ಇರುತ್ತೆ... ಪ್ರತಿ ಸಾರಿ ಈ ಚಿತ್ರ ನೋಡಿದಾಗ ಆ ಕ್ಷಣದ ನೆನಪಾಗುತ್ತೆ.... :))
ಅದನ್ನು ನೋಡಿ ಅಲ್ಲಿ ಕಾಮೆಂಟ್ ಮಾಡದೇ ....ನನ್ನ ಹತ್ತಿರ ಅವರ ಫೋನ್ ನಂಬರ್ ಇತ್ತು...ಅವರಿಗೊಂದು sms ಕಳಿಸ್ದೆ... " ಹೇ ..ಈ ಹಾಡು ,ಸಾಹಿತ್ಯ ಎಲ್ಲಾ ನಂಗೂ ತುಂಬಾ ಇಷ್ಟ..." ಅಂತ.... ಅದಕ್ಕೆ ಅವರ ಮರು sms ಹೀಗಿತ್ತು...." ಆ ಹಾಡನ್ನು ನನ್ನ ಧ್ವನಿಯಲ್ಲಿ ಕೇಳಬೇಕoದರೆ ನoಗೆ ಫೋನ್ ಮಾಡು...." ಅಂತ ...ಅವರಂತೂ ನನ್ನ ಫ್ರೆಂಡ್ಗಳಲ್ಲಿ ತುಂಬಾ ತುಂಬಾ ಕಂಜೂಸ್ ಅಂತಾನೆ ಹೇಳ್ಬಹುದು... :)) ನನ್ನ ಗ್ರಹಚಾರ ..... ಇವರನ್ನು ಹೇಗೂ ರಿಪೇರಿ ಮಾಡಕ್ಕೆ ಆಗಲ್ಲ ... ಇರಲಿ ಅಂತ .ನಾನೇ ಫೋನ್ ಮಾಡ್ದೆ....ಅವರ ಹತ್ತಿರ ಮಾತಾಡದೆ ತುಂಬಾ ದಿನ ಸಹಾ ಆಗಿತ್ತು ....ಅದು ಸಹಾ STD ... :)) 15-20 ನಿಮಿಷ ಮಾತು ಮುಗಿದ ಮೇಲೆ ಆ ಹಾಡನ್ನು ಹಾಡಿದ್ರು ..." ಪರವಾಗಿಲ್ಲ ಸುಮಾರಾಗಿತ್ತು...".ಆದರು ಸಹಾ ..."ತುಂಬಾ ಚೆನ್ನಾಗಿದೆ" ಅಂತ ಸ್ವಲ್ಪ ಹೊಗಳ್ದೆ ... :)) ಪಾಪ ನಿಜ ಅಂತ ನಂಬಿದ್ರೋ ಗೊತ್ತಿಲ್ಲ.. :p ಅಕಸ್ಮಾತ್ ಇದನ್ನ ಓದಿದರೆ ಅಷ್ಟೇ.... ನನ್ನ ಕಥೆ ಮುಗೀತು... :)) ಹೀಗೆ ಒಂದೊಂದು ಚಿತ್ರದ ಹಿಂದೆ ಸಣ್ಣ ಸಣ್ಣ ನೆನಪುಗಳು ಇರುತ್ತೆ... ಪ್ರತಿ ಸಾರಿ ಈ ಚಿತ್ರ ನೋಡಿದಾಗ ಆ ಕ್ಷಣದ ನೆನಪಾಗುತ್ತೆ.... :))
ನಮ್ಮ ಮಾತು, ಹಾಡು ಮುಗಿವಾಗ ನೀರಿನಲ್ಲಿ ಆಟ ,ಸ್ನಾನ ಮುಗಿಸಿ ಮಕ್ಕಳು ವಾಪಾಸ್ ಬಂದರು...ಡ್ರೆಸ್ ಎಲ್ಲ ಬದಲಿಸಿ ಅಲ್ಲಿಂದ ಹೊರಡುವಾಗ ಆರು ಘಂಟೆ...ಅಲ್ಲಿಂದ ಒಂದು ಘಂಟೆ ಪ್ರಯಾಣ ಮಡಗಾಂವ್ ಸ್ನೇಹಿತರ ಮನೆಗೆ....
ಮನೆ ತಲುಪಿ ಮಕ್ಕಳು ಸ್ನಾನ ಮುಗ್ಸಿದ್ದ ಮೇಲೆ ಆಟ ಶುರುಮಾಡಿದ್ರು ...ನಾನು ನನ್ನ ಸ್ನೇಹಿತೆ ಜೊತೆ ಹರಟೆ...ನನ್ನ ಗಂಡ ಸ್ನೇಹಿತರ ಅಂಗಡಿಗೆ...ದಾಮೋದರ್ಗೆ ಅವತ್ತು "A+ ಗ್ರೇಡ್ " ಬಂದಿದ್ದರಿಂದ ತಂದೆಗೆ ಮನೆಗೆ ಹೋದ ಕೂಡಲೇ ಫೋನ್ ಮಾಡಿ "ಪಿಜ್ಹಾ ಪಾರ್ಟಿ " ಅರೇ0ಜ್ ಮಾಡಿದ್ದ...ರಾತ್ರಿ ಊಟದ ಚಿಂತೆ ಇರಲಿಲ್ಲ....ಸ್ನೇಹಿತೆ ಮರುದಿನದ ತಿಂಡಿಗೆ ದೋಸೆ ಹಿಟ್ಟನ್ನು ಮಾತಾಡ್ತಾ ಮಾತಾಡ್ತಾ ರೆಡಿ ಮಾಡಿದ್ರು...9 ಘಂಟೆ ಸಮಯದಲ್ಲಿ ಅಂಗಡಿ ಹುಡುಗ ಪಿಜ್ಹಾ ಮತ್ತು ಕೋಕಾ ಕೋಲಾ ಕೊಟ್ಟು ಹೋದ...ನಾವು ನಾಲ್ವರು ಚೆನ್ನಾಗಿ ತಿಂದು, ಕುಡಿದು ಮುಗಸಿದ್ವಿ ... :))
ಮರುದಿನ ಅಕ್ಟೋಬರ್ 21.... ಗೋವಾದಲ್ಲಿ ನಮ್ಮ ಕೊನೆಯ ದಿನ...ಉಡುಪಿಗೆ ಮಧ್ಯಾಹ್ನದ ರೈಲ್ವೆ ಟಿಕೆಟ್ ಬುಕ್ ಆಗಿತ್ತು....ಅವತ್ತು ಭಾನುವಾರ...ಎಲ್ಲರು ಎದ್ದದ್ದು ಸ್ವಲ್ಪ ನಿಧಾನವಾಗಿ... ಬೆಳಗಿನ ಚಹಾ ಕುಡಿದು ಅದು ಇದು ಮಾತಾಡ್ತಾ ತಿಂಡಿಯ ಸಮಯ...ಬಿಸಿ ಬಿಸಿ ದೋಸೆ-ಚಟ್ನಿ.... :)
ಹತ್ತು ಘಂಟೆಗೆ ಎಳನೀರಿನ ಸಮಾರಾಧನೆ.... ಮಕ್ಕಳಿಗೆ ಚೋಕೊಲೋವಾ ಕೇಕ್ ...ನಂತರ ಸ್ವಲ್ಪ ಸುತ್ತಾಡಿ ಹೊರಟಿದ್ದು ಒಂದು ಅಧ್ಭುತ ರೆಸ್ಟೋರಂಟ್ ನಲ್ಲಿ ಲಂಚ್ಗೆ ..ಆಗ ಸುಮಾರು 12 ಘಂಟೆ ಸಮಯ....
ನಮಗೆ ಎರಡು ದಿನ ಸತ್ಕಾರ ಮಾಡಿದ ಸ್ನೇಹಿತರ ಕುಟುಂಬ...ರೆಸ್ಟೋರಂಟ್ನಲ್ಲಿ ...
ನಮಗೆ ಎರಡು ದಿನ ಸತ್ಕಾರ ಮಾಡಿದ ಸ್ನೇಹಿತರ ಕುಟುಂಬ...ರೆಸ್ಟೋರಂಟ್ನಲ್ಲಿ ...
ನಾರ್ಥ್ ಇಂಡಿಯಾ ತಿಂಡಿ ಮುಗಿಸಿ ಆಗಲೇ ಪ್ಯಾಕಿಂಗ್ ಮಾಡಿ ಇಟ್ಟಿದ್ದ ಲಗೇಜ್ ತಂದು ....ಸ್ನೇಹಿತರಿಗೆ "ಬಾಯ್" ಹೇಳಿ ಸ್ಟೇಷನ್ಗೆ ಬರುವಾಗ ಆಗಲೇ ನಮ್ಮ ರೈಲು ಸಿದ್ಧವಾಗಿ ನಿಂತಿತ್ತು.... ಮಧ್ಯಾಹ್ನ ಎರಡಕ್ಕೆ ಪ್ರಯಾಣ ಶುರು...
ಚಂದದ ಗೋವಾಕ್ಕೆ ವಿದಾಯ ಹೇಳುತ್ತಾ...ಹಲವು ನೆನಪುಗಳ ಜೊತೆ ಪ್ರಯಾಣ ಮರಳಿ ನಮ್ಮ ಗೂಡಿಗೆ....
ಆರು ದಿನಗಳು ...ಆರು ನಿಮಿಷಗಳಂತೆ ಕಳೆದು ಹೋಗಿತ್ತು.....
ಪ್ರಯಾಣ ಮಧ್ಯೆ ಚಹಾ, ಬಿಸ್ಕಿಟ್ ತಿಂತಾ ಸಮಯ ಕಳೆಯುತ್ತಿತ್ತು ....ಸಂಜೆ ಕವಿದು ಕತ್ತಲಾಗುವ ಸಮಯ....ಊರು ಹತ್ತಿರ ಹತ್ತಿರ ಬರುತ್ತಿದ್ದಂತೆ ......ನೀಲಂ ಚಂಡಮಾರುತದ ಅಡ್ಡ ಪರಿಣಾಮ ಶುರುವಾಗಿತ್ತು....ಭಟ್ಕಳ, ಕುಮಟ , ಕುಂದಾಪುರ ದಾಟುವಾಗ ಜೋರು ಮಳೆ.... ಚಳಿಗಾಳಿ....
ದೂರದಿಂದ ಮಣಿಪಾಲದ ಲೈಟ್ ಕಾಣುತ್ತಿತ್ತು ... ನಮ್ಮ ಇಂದ್ರಾಳಿ ನಿಲ್ದಾಣ ಹತ್ತಿರ ಬರುತ್ತಿತ್ತು...ಪುನಃ ಲಗೇಜ್ ತೆಗೆದು ಇಳಿಯಬೇಕಿತ್ತು ...ರೈಲು ನಂತರ ಮಂಗಳೂರಿನೆಡೆಗೆ ಪಯಣಿಸಲಿಕ್ಕಿತ್ತು .... ನಮ್ಮ ಸ್ಟೇಷನ್ನಲ್ಲಿ ಸ್ವಲ್ಪ ಸಮಯ ಮಾತ್ರ ನಿಲುಗಡೆ....ಆ ಮಳೆಯಲ್ಲಿ ಲಗೇಜ್ ಎತ್ತಿಕೊಂಡು ಇಳಿವಾಗ ಸಾಕೋ ಸಾಕು.... ಭಾನುವಾರ ಆದ್ದರಿಂದ ರಿಕ್ಷಾಗಳು ಸಾಕಷ್ಟಿರಲಿಲ್ಲ..ಕೊನೆಗೆ ಒಬ್ಬ ಗುರುತಿನ ಡ್ರೈವರ್ಗೆ ಫೋನ್ ಮಾಡಿ ಆಟೋ ಹತ್ತಿ ಮನೆಗೆ ತಲುಪುವಾಗ ರಾತ್ರಿ 8.30.... ಹೊರಗೆ ಮಿ0ಚುತಿತ್ತು ...ಸಣ್ಣಗೆ ಜಿಟಿಜಿಟಿ ಮಳೆ....
ಮನೆ ತಲುಪಿ ಕೈ ಕಾಲು ತೊಳೆದು .... ಆಗಲೇ ಅತ್ತೆ ಮಾಡಿಟ್ಟ ಊಟ ಮಾಡಿ ಮಲಗಿದ್ದಷ್ಟೇ ..... ಪ್ರಯಾಣದ ಆಯಾಸಕ್ಕೆ ಒಳ್ಳೆಯ ನಿದ್ರೆ.... :))
ಹೀಗೆ ನಮ್ಮ ಗೋವಾದಲ್ಲಿ ಐದು ರಾತ್ರಿ...ಆರು ದಿನ ಮುಗಿದಿತ್ತು.... :))
ಪ್ರೀತಿಯ ಸ್ನೇಹಿತರೆ ನನ್ನ ಜೊತೆ ಗೋವಾದ ಪ್ರಯಾಣ ಮಾಡಿದ ನಿಮಗೆಲ್ಲರಿಗೂ ವಂದನೆಗಳು.... :))
ಪ್ರೀತಿಯಿಂದ
ಸುದೀಪ .....
ಚಂದದ ಕ್ಷಣಗಳು ಅಕ್ಕ..
ReplyDeleteಲೇಖನ ಓಡಿಸಿಕೊಂಡು ಹೋಗುವಂತಿತ್ತು... ನಮಗೂ ಗೋವಾದಲ್ಲಿ ಒಂದು ಸುತ್ತು ಹಾಕಿಸಿತು..
ಸೂಪರ್...
ಧನ್ಯವಾದಗಳು ಮೌನರಾಗದ ಒಡತಿ.... :))
Deleteನದಿ ಎಲ್ಲೋ ಹುಟ್ಟಿ ಹರಿಯುವಾಗ ಅಕ್ಕ ಪಕ್ಕ ಅನೇಕ ಝರಿಗಳು, ತೊರೆಗಳು, ಕೊಳ್ಳಗಳು ಸೇರಿ ಹರಿಯುತ್ತಾ ಸಾಗುತ್ತದೆ..ಹಾಗೆಯೇ ಪ್ರವಾಸ ಕಥಾನಕದಲ್ಲಿ ಅನೇಕ ಚಿಕ್ಕ ಪುಟ್ಟ ಸಂಗತಿಗಳು ಹೋಳಿಗೆಗೆ ತುಪ್ಪ ಸವರಿದಂತೆ ಮುದ ನೀಡುತ್ತದೆ.ನಿಮ್ಮ ಬರವಣಿಗೆಯ ಲಹರಿ
ReplyDeleteಮುದ ನೀಡುತ್ತದೆ...ದೂದ್ ಸಾಗರ..ಜಲಪಾತ ಸದಾ ಹುಮ್ಮಸ್ಸು ತುಂಬುವ ತಾಣ...ರೈಲು ಹಳಿಗಳ ಮೇಲೆ ಚಾರಣ ಇನ್ನಷ್ಟು ಮಜಾ ಕೊಡುತ್ತದೆ..ನೀವು ಹಾದಿ ಬಂದ ದಾರಿಯು ಕೂಡ ಒಳ್ಳೆಯ ಅನುಭವ ಕೊಡುವ ಮಾರ್ಗ..ಚಿತ್ರಗಳು, ಕಡಲ ಕಿನಾರೆಯ ದೃಶ್ಯ, ಪ್ರವಾಸದ ಉಪಸಂಹಾರ ಎಲ್ಲವು ಸೊಗಸಾಗಿದೆ..ನಮ್ಮನ್ನು ಗೋವಾ ಗೆ ಪುಗಸಟ್ಟೆ ಕರೆದು ಒಯ್ದಿದ್ದ ನಿಮ್ಮ ಲೇಖನ ಮಾಲಿಕೆ ಸಂತಸ ಹೊಮ್ಮಿಸುವದರಲ್ಲಿ ಯಶಸ್ವೀ ಆಗಿದೆ...ಅಭಿನಂದನೆಗಳು ನಿಮಗೆ :-)
ಶ್ರೀಕಾಂತ್..... ಒಳ್ಳೆಯ ಪ್ರತಿಕ್ರಿಯೆ.... ನಾನು ಬರೆದದ್ದಕ್ಕೂ ಸಾರ್ಥಕ...ಇಷ್ಟ ಪಟ್ಟಿದ್ದಕ್ಕೆ ವಂದನೆಗಳು.... :))
DeleteAwesome and beautiful places
ReplyDeleteThank u Naveen...:)
DeleteSuper...nimma jote naavu pravaasa maaDida haagittu...
ReplyDeleteಸಂತೋಷ ದಿನಕರ ಸರ್.. :)
Deleteಸುಮತಿ ಅಕ್ಕಾ...
ReplyDeleteಮೊದಲಿಗೆ ಬರಿಯ ಪೋಟೋಗಳನ್ನಷ್ಟೇ ನೋಡಿ,ಇದೇನಿದು ಜಾಸ್ತಿ ಏನೂ ಬರ್ದೇ ಇಲ್ಲಾ ಅಂದ್ಕೊಂಡಿದ್ದೆ....ಆಮೇಲೆ ಆಮೇಲೆ ಸುಮಾರು ಬರಹ ಓದಿ ನನ್ನ ಹೊಟ್ಟೆ ತುಂಬ್ತು..
ಹಾಂ ಇವತ್ತಿನ ಫೋಟೋಗಳಲ್ಲಿ ನನಗೆ ಇಷ್ಟವಾಗಿದ್ದು ಆ ಸೂರ್ಯಾಸ್ತದ ಫೋಟೋ..ಚೆನಾಗಿದೆ..೪-೫ ಬಾರಿ ಮತ್ತೆ ಮತ್ತೆ ನೋಡಿದೆ...
(ಸುಮ್ಮನೆ:"ಆಗಸಕೆ ಏಣಿ ಹಾಕಿ ಆ ಕೆಂಪುಚೆಂಡನ್ನು ಹಿಡಿಯೋಣವೇ??? ಸಾಗರದಿ ದೋಣಿಯ ಏರಿ ಅವನಿಗೆ ಬಲೆ ಹಾಕೋಣವೇ")
ಹಾಂ ಕೊನೆಯಲ್ಲಿ ಒಂದು ದೊಡ್ಡ ಧನ್ಯವಾದ ನಿಮಗೆ ಗೋವಾ ತೋರಿಸಿದ್ದಕ್ಕೆ..ಅದರ ಇನ್ನೊಂದು ಮುಖವನ್ನು(ನನಗೆ) ತಿಳಿಸಿದ್ದಕ್ಕೆ..
ಪುಕ್ಕಟೆ ಕರೆದುಕೊಂಡು ಹೋಗಿದ್ದೀರಾ!!!!!!ಧನ್ಯವಾದ !!!!!
ಆಗಸಕೆ ಏಣಿ ಹಾಕಿ ಆ ಕೆಂಪುಚೆಂಡನ್ನು ಹಿಡಿಯೋಣವೇ??? ಸಾಗರದಿ ದೋಣಿಯ ಏರಿ ಅವನಿಗೆ ಬಲೆ ಹಾಕೋಣವೇ".... ಚಂದದ ಸಾಲುಗಳು ಚಿನ್ಮಯ್.... ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಮನಃ ಪೂರ್ವಕ ಧನ್ಯವಾದಗಳು.... :)
Delete