'ನಿನಗಿಂತ ಮೊದಲೇ ಅವಳು ನನಗೆ ಸ್ನೇಹಿತೆಯಾಗಿ ಪರಿಚಯ ಆದವಳು ..... ಈವರೆಗೆ ನನ್ನೆಲ್ಲ ಸುಖ ಕಷ್ಟಗಳನ್ನು ಹಂಚಿಕೊಂಡದ್ದು ಬಹುಶಃ ಅವಳ ಹತ್ತಿರ ಮಾತ್ರ ....... ನನ್ನ ಮೊದಲ ಆತ್ಮೀಯ ಸ್ನೇಹಿತೆ ಅವ್ಳು ' .... ಹೀಗೆ ಅವ್ನು ಫೋನಿನಲ್ಲಿ ಹೇಳ್ತಾ ಇದ್ರೆ 'feeling jealous' ಅಂದಿದ್ದೆ ... ಹೌದು .... ಆ ಘಳಿಗೇಲಿ ನಾ ಆ ಮಾತು ಸ್ವಲ್ಪ ತಮಾಷೆಯಾಗಿ ಆಡಿದ್ರು ಎಲ್ಲೋ ಒಂದೆರಡು ಸೆಕೆಂಡ್ ನಿಜಕ್ಕೂ ಹೊಟ್ಟೆಕಿಚ್ಚಾಗಿದ್ದು ಸುಳ್ಳಲ್ಲ .... ಅಂದರೆ ನನ್ನ ಸ್ಥಾನ ಏನಿದ್ರೂ ಅವಳ ನಂತರದ್ದು .... ಯಾಕೋ ಮನಸ್ಸಲ್ಲಿ ಒಂದರೆಗಳಿಗೆ ಏನೇನೋ ಹುಚ್ಚು ಹುಚ್ಚು ಯೋಚನೆ.... ವಾಸ್ತವಕ್ಕೆ ಬಂದಾಗ ...ಅರೆ ಶಿಟ್.... ನಾನದೆಷ್ಟು stupid ಆಗಿ ಯೋಚನೆ ಮಾಡ್ತಿದೀನಿ .... ಏನಾಗಿದೆ ನನಗೆ ...!!!! ಯಾಕೆ ಹೀಗೆ...!!!!
ಅರೆ.... ಅವನಿಗೂ ತನ್ನದೇ ಖಾಸಗಿ ಜೀವನ ಇದೆ... ಅಲ್ಲಿ ಅದೆಷ್ಟೋ ಜನ ಸ್ನೇಹಿತರಿರ್ತಾರೆ .... ಅವರಲ್ಲಿ ನಾನು ಒಬ್ಳು ... ನಿಜ.... ಸ್ವಲ್ಪ ಆತ್ಮೀಯಳು ಅಂದ್ರೂ ತಪ್ಪಾಗಲ್ಲ ... ಆದ್ರೂ..... ಪ್ರತಿಬಾರಿ ಮಾತು ಈ 'ಆದ್ರೂ' ಅನ್ನೋ ಶಬ್ದದಲ್ಲೇ ಕೊನೆಗೊಳ್ಳುತ್ತೆ .... ... ಆದ್ರೂ.... ಅದ್ರಲ್ಲಿ ನಾನೇ ಪ್ರಮುಖವಾಗಿ ಇರಬೇಕು ಅನ್ನೋ ಹುಚ್ಚು ಅದೇಕೋ .... ಮುಖ್ಯವಾಗಿ ಅವನು ಏನು ಅಂತ ಗೊತ್ತು ... ಆ ಹುಡುಗಿಯೂ ಏನು ಅಂತ ಅಲ್ಪ ಸ್ವಲ್ಪ ಗೊತ್ತು.... ನಮ್ಮಿಬ್ಬರ ಸ್ನೇಹ ಎಷ್ಟು ಗಟ್ಟಿ ಅನ್ನೋದು ಗೊತ್ತು ... fir b .... ನಿಜ ಸಮಸ್ಯೆಯಂದರೆ, ಎಲ್ಲಿ ಇತರರು ನನಗಿಂತ ಹೆಚ್ಚು ಆತ್ಮೀಯರಾಗಿ ನನ್ನ ಮತ್ತು ಅವನ ಸ್ನೇಹ ಕಳೆದು ಹೋಗುತ್ತೆ ಅನ್ನೋ ಭಯಾನ.... ??? ಇದ್ರೂ ಇರಬಹುದು... ಅದ್ಯಾಕೆ ಯಾವಾಗ್ಲೂ ಅಷ್ಟು INSECURITY FEELING..!!!! ಯಾಕಿಷ್ಟು POSSESSIVENESS ಯಾವಾಗ್ಲೂ ಈ ಹೆಣ್ಣು ಜೀವಗಳಿಗೆ .... !!!!!
ಎಲ್ಲೋ ಯಾರಿಗೋ ಯಾವುದೋ ವಿಷಯಕ್ಕೆ ಸಂಬಂಧ ಕಳಚಿ ಬಿದ್ದಿರುತ್ತೆ... ಬಹಳಷ್ಟು ಕಥೆ ಕೇಳಿರ್ತೀವಿ ... ತನಗೂ ಹಾಗೆ ಆಗುತ್ತೆ ಅನ್ನೋ ಆತಂಕಾನಾ!!!! ಇದ್ರೂ ಇರಬಹುದು... ಇಲ್ಲವೇ ನಮಗೆ ಹಿಂದೊಮ್ಮೆ ಆದ ಕೆಟ್ಟ ಅನುಭವಗಳು ಪುನಃ ಮರುಕಳಿಸದೇ ಇರಲಿ ಅನ್ನೋ ಆಸೆನಾ...
ಎಲ್ಲೋ ಯಾರಿಗೋ ಯಾವುದೋ ವಿಷಯಕ್ಕೆ ಸಂಬಂಧ ಕಳಚಿ ಬಿದ್ದಿರುತ್ತೆ... ಬಹಳಷ್ಟು ಕಥೆ ಕೇಳಿರ್ತೀವಿ ... ತನಗೂ ಹಾಗೆ ಆಗುತ್ತೆ ಅನ್ನೋ ಆತಂಕಾನಾ!!!! ಇದ್ರೂ ಇರಬಹುದು... ಇಲ್ಲವೇ ನಮಗೆ ಹಿಂದೊಮ್ಮೆ ಆದ ಕೆಟ್ಟ ಅನುಭವಗಳು ಪುನಃ ಮರುಕಳಿಸದೇ ಇರಲಿ ಅನ್ನೋ ಆಸೆನಾ...
ನಿಜ ... ಈ ಮತ್ಸರಕ್ಕೆ ಮುಖ್ಯ ಕಾರಣ ಸಂಬಂಧಗಳಲ್ಲಿ ಕಾಡೋ ಅಭದ್ರತೆ.... ಅತಿ ಅನಿಸುವಷ್ಟು ನನ್ನದು, ನನ್ನವನು ನನಗೆ ಮಾತ್ರ ಸೇರಿದ ಆತ್ಮೀಯ ವಸ್ತು ಅನ್ನೋ ವಿಚಾರಕ್ಕೆ ಮೂರನೆ ವ್ಯಕ್ತಿಯಿಂದ ಧಕ್ಕೆ ಬಂದಾಗ, ಅದೂ ಮತ್ತೊಬ್ಬ ಹೆಣ್ಣಿನಿಂದ, ಯಾಕೋ ಎಲ್ಲಾ ಅಲ್ಲೋಲ ಕಲ್ಲೋಲ....... ಎಲ್ಲಿ ನಾ ಪ್ರೀತಿಸುವ ಈ ಆತ್ಮೀಯ ಸಂಬಂಧ ನನ್ನ ಕೈ ತಪ್ಪಿ ಹೋಗಿಬಿಡುತ್ತೋ ಅನ್ನೋ ಆತಂಕ .... ಅದು ಈ ಹೆಣ್ಣು ಮಕ್ಕಳಲ್ಲೇ ಜಾಸ್ತಿ ಅಂದರೆ ಸುಳ್ಳಲ್ಲ ...
ಅದರಲ್ಲೂ ಇತ್ತೀಚೆಗೆ ಫೇಸ್ ಬುಕ್ ನಿಂದ ಕಲಿತ ದೊಡ್ಡ ಪಾಠ ಇಡೀ ಜೀವನಕ್ಕೆ ಉಪಯೋಗಕ್ಕೆ ಬರುವಂಥದ್ದು .... ಯಾವುದೇ ಅತಿ ಅನ್ನಿಸೋ ಅಷ್ಟು ಹತ್ತಿರಕ್ಕೆ ಬಂದ ಆತ್ಮೀಯ ಅನ್ನೋ ಸಂಬಂಧಗಳನ್ನ ಮಿತಿಯಲ್ಲಿ ಪ್ರೀತಿಸು.... ಯಾವುದೇ ಹುಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಇರುವಷ್ಟು ದಿನ ಅಸ್ವಾದಿಸು ಅಷ್ಟೇ ... ಇವತ್ತಿನ ದಿನ ನನ್ನದು ... ಯಾವುದೋ ಪರಿಸ್ಥಿತಿಗೆ ಮುಂದೊಂದು ದಿನ ಸಂಬಂಧ ಕಳಚಿದರೂ ನೋವು ಅತಿ ಅನಿಸುವಷ್ಟು ಕಾಡಲ್ಲ ಆಗ ....
ಪ್ರತಿಬಾರಿ facebook scroll ಮಾಡೋವಾಗ್ಲು ಕಣ್ಣಿಗೆ ದಿನಕ್ಕೊಮ್ಮೆ ಆದ್ರೂ ಕಾಣೋ quote.... Dont like people more.....Dont expect more.... one day defenately it hurts more .... ಎಷ್ಟು ನಿಜ ಅನ್ಸುತ್ತೆ ಪ್ರತಿ ಬಾರಿನೂ...
ಅದರಲ್ಲೂ ಇತ್ತೀಚೆಗೆ ಫೇಸ್ ಬುಕ್ ನಿಂದ ಕಲಿತ ದೊಡ್ಡ ಪಾಠ ಇಡೀ ಜೀವನಕ್ಕೆ ಉಪಯೋಗಕ್ಕೆ ಬರುವಂಥದ್ದು .... ಯಾವುದೇ ಅತಿ ಅನ್ನಿಸೋ ಅಷ್ಟು ಹತ್ತಿರಕ್ಕೆ ಬಂದ ಆತ್ಮೀಯ ಅನ್ನೋ ಸಂಬಂಧಗಳನ್ನ ಮಿತಿಯಲ್ಲಿ ಪ್ರೀತಿಸು.... ಯಾವುದೇ ಹುಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಇರುವಷ್ಟು ದಿನ ಅಸ್ವಾದಿಸು ಅಷ್ಟೇ ... ಇವತ್ತಿನ ದಿನ ನನ್ನದು ... ಯಾವುದೋ ಪರಿಸ್ಥಿತಿಗೆ ಮುಂದೊಂದು ದಿನ ಸಂಬಂಧ ಕಳಚಿದರೂ ನೋವು ಅತಿ ಅನಿಸುವಷ್ಟು ಕಾಡಲ್ಲ ಆಗ ....
ಪ್ರತಿಬಾರಿ facebook scroll ಮಾಡೋವಾಗ್ಲು ಕಣ್ಣಿಗೆ ದಿನಕ್ಕೊಮ್ಮೆ ಆದ್ರೂ ಕಾಣೋ quote.... Dont like people more.....Dont expect more.... one day defenately it hurts more .... ಎಷ್ಟು ನಿಜ ಅನ್ಸುತ್ತೆ ಪ್ರತಿ ಬಾರಿನೂ...
ಮೊನ್ನೆ ಒಬ್ಬ ಸ್ನೇಹಿತ ಹೇಳ್ತಾ ಇದ್ದ.... ಮದುವೆ ಆಗಿದ್ದೆ ತಡ ಮಾರಾಯ್ತಿ... ಜೀವಕ್ಕೆ ಜೀವ ಕೊಡೋ ಅತಿ ಒಡನಾಟದಲ್ಲಿದ್ದ ಪ್ರೀತಿಯ ತಂಗಿ ಕೋಪ ಮಾಡ್ಕೊಂಡಿದ್ದಾಳೆ .... ನೀನು ನನ್ನ ಜೊತೆ ಮೊದಲಿನ ರೀತಿ ಸಮಯ ಕಳೀತಿಲ್ಲ ... ನಿನಗೆ ನಿನ್ನ ಹೆಂಡತೀನೇ ಜಾಸ್ತಿ ... ಹೀಗೆಲ್ಲ ಆರೋಪ .... ಈಗ ಅದೆಲ್ಲಿಗೆ ಮುಟ್ಟಿದೆ ಅಂದ್ರೆ ದಿನದಿಂದ ದಿನಕ್ಕೆ ಮಾತುಕತೆ ಸಹಾ ಕಡಿಮೆ ಆಗ್ತಾ ಇದೆ .... ಅತ್ತಿಗೆ ಅಂದ್ರೆ ಅವಳ ಬದ್ಧ ದ್ವೇಷಿ .... ಉಫ್ ...
ಇನ್ನೊಬ್ಬ ತಾಯಿಯಂತೂ ಮಗನಿಗೆ ಮದುವೆ ಮಾಡ್ಸಬೇಕು...ಒಳ್ಳೆ ಕೆಲಸ ಸಿಕ್ಕಿದೆ .... ಅವ್ನು ಜೀವನದಲ್ಲಿ SETTLE ಆಗಬೇಕು ಅಂತ ತುದಿಗಾಲಲ್ಲಿ ನಿಂತು ಹೆಣ್ಣು ಹುಡುಕಿ ಮದುವೇನೂ ಆಯ್ತು... ಆದ್ರೆ ಈಗ ಸೊಸೆ ಅಂದ್ರೆ ಅಷ್ಟಕ್ಕಷ್ಟೇ ... ತನ್ನ ಮತ್ತು ತನ್ನ ಮಗನ ಪ್ರೀತಿಯ ಸಂಬಂಧದಲ್ಲಿ ಈ ಹುಡುಗಿ ಒಬ್ಬ ಅಡ್ಡಗೋಡೆ ಅಂಬ ಭಾವ ಆಕೆಗೆ ... ಸೊಸೆಯ ಜತೆ ಮಗನ ಪ್ರೀತಿಯನ್ನ ಹಂಚಿಕೊಳ್ಳೋದು ಯಾಕೋ ಸಹಿಸಲಾಗದ ವಿಚಾರ ಆಕೆಗೆ ..
ಈ ಹೆಣ್ಣು ಜೀವಗಳೇ ಹೀಗಾ... ತನ್ನ ಗಂಡ, ತನ್ನ ಮಗ, ತನ್ನ ಅಣ್ಣ-ತಮ್ಮ, ತನ್ನ ಗೆಳೆಯ ಅದ್ಯಾರೆ ಆಗಿರ್ಲಿ.... ಸ್ವಾರ್ಥಿ ಆಗ್ಬಿಡ್ತೀವಾ ..... ತನ್ನನ್ನಷ್ಟೇ ಪ್ರೀತಿಸ್ಬೇಕು ಅನ್ನೋ ಅತಿ ಸ್ವಾರ್ಥದ ಮನಸ್ಥಿತಿಯನ್ನ ಇಟ್ಟುಕೊಂಡೆ ಹುಟ್ಟಿರ್ತಾರಾ ... ಚಿಕ್ಕ ಅನುಮಾನ.... !!!!
JEALOUSY THY NAME WOMEN.... ಅನ್ನೋ ಮಾತು ಸಹಾ ನಿಜ ಅನ್ಸುತ್ತೆ ಕೆಲವೊಮ್ಮೆ ....
ಆದರೂ ಈ 'ಹೆಣ್ಣು ಮತ್ಸರ' ಆರೋಗ್ಯಕರವಾಗಿ.... ಇನ್ನೊಬ್ಬ ಹೆಣ್ಣಿನ ಜೊತೆ ಜಿದ್ದಾಜಿದ್ದಿ ದ್ವೇಷ ಆಗದಷ್ಟು ಹಿಡಿತದಲ್ಲಿ ಇದ್ರೆ ಉತ್ತಮ ಅನ್ನೋ ಅಭಿಪ್ರಾಯದೊಂದಿಗೆ ...
ಎಲ್ಲರಿಗೂ 'ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು '
ಪ್ರೀತಿಯಿಂದ
ಪ್ರೀತಿಯಿಂದ
ಸುದೀಪ...
ಹಮ್...ಹೊಟ್ಟೆಕಿಚ್ಚು ಎಲ್ರಲ್ಲೂ ತೀರಾ ಸಹಜ ಅನ್ಸತ್ತೆ....ಅದಕ್ಕೆ ಕಾರಣವಾಗುವ ವಿಚಾರಗಳಿಗೆ ಸ್ಪಂದಿಸುವುದು ಮತ್ತು ತಳಮಳಗಳನ್ನು ಹೊರಹಾಕುವ ರೀತಿಯಲ್ಲಿ ಭಿನ್ನತೆ ಇರಬಹುದಷ್ಟೇ.... :)
ReplyDeleteನಿಜ...ಚಿನ್ಮಯ್... ಧನ್ಯವಾದಗಳು ಪ್ರತಿಕ್ರಿಯೆಗೆ.... :)
Deletewell said Munna. liked this write up a lot!!
ReplyDelete:-)
pachchi
Thank u so much pacchi :-)
Deleteಒಳ್ಳೆಯ ವಿಚಾರವಂತ ಲೇಖನ.
ReplyDeletePossessiveness ತಪ್ಪಲ್ಲ, ಆದರೆ ವ್ಯಕ್ತಪಡಿಸುವಾಗ ಹುಷಾರಾಗಿರಬೇಕಷ್ಟೇ.
ಅಲ್ಲವೇ ಮೇಡಂ
ಖಂಡಿತಾ..... ಬದರಿ ಭಾಯ್....
Deleteಮತ್ತೊಮ್ಮೆ ಧನ್ಯವಾದಗಳು.... :-)
:)
ReplyDeleteShri.... :-)
ReplyDeleteNija Sumathi,
ReplyDeletePossessiveness will come by birth to everyone. But especially for the girls it is more.
Many times it creates loads of problems to everyone.
Whatever, If it is in limits...that is also a kind of LOVE :-)
Neatly written article. Good!
Agreed u r opinion and thank u so much santhosh for the response.... :-)
Deleteಿದೇ ವಿಷಯದ ಬಗ್ಗೆ ಎಷ್ಟೋ ಗೊಂದಲಗಳಿದ್ದವು....
ReplyDeleteಈಗೀಗ ಸ್ವಲ್ಪ ಮಂಜು ಕರಗಿದಂತಿದೆ....
ಒಳ್ಳೆಯ ಬರಹ....
Thank u Raghav :-)
Deleteಮಕ್ಕಳಿಗೆ ತಮ್ಮ ವಸ್ತುಗಳ ಮೇಲೆ ವಿಪರೀತ ಆಸಕ್ತಿ ಹಾಗೂ ಕುತೂಹಲ. ಅದನ್ನು ಇನ್ನೊಬ್ಬರ ಬಳಿ ನೋಡಿದೆ ಇಲ್ಲವೇ ಇನ್ನೊಬ್ಬರು ತೆಗೆದುಕೊಂಡರೆ ಅವಕ್ಕೆ ಮುನಿಸು.. ಇದು ಎಲ್ಲರ ಮನೋಸ್ಥಿತಿ. ಗಂಡು ಹೆಣ್ಣು ಯಾರೂ ಹೊರತಲ್ಲ.. ಗಂಡುಗಳಲ್ಲೂ ಇದು ಇರುತ್ತದೆ.. ಆದರೆ ಹೆಣ್ಣು ಮಕ್ಕಳಲ್ಲಿ ಈ ರೀತಿಯ ಮತ್ಸರ ಬೇಗ ಪ್ರಕಟಗೊಳ್ಳುತ್ತದೆ. ನೀವು ಹೇಳಿದ್ದು ಬರೆದದ್ದೂ ಬರೆಯದೆ ಅರ್ಥ ಹೇಳಿದ್ದು ಎಲ್ಲವೂ ನಿಜ..
ReplyDeleteಒಂದು ಸುಂದರ ಲೇಖನ ಸುಂದರ ದಿನಕ್ಕೆ.. ಲೈಕ್ ಲೈಕ್ ಲೈಕ್ ನಿಮ್ಮ ಲೇಖನಕ್ಕೆ
ಧನ್ಯವಾದಗಳು ಶ್ರೀಕಾಂತ್... :-)
Deleteಹೆಣ್ಣಿಗೆ ಹೆಣ್ಣೇ ಶತ್ರು ಅನ್ನುವ ಸತ್ಯವನ್ನ ಮನದಟ್ಟಿಸಿದ್ದೀರ ನಿಮ್ಮ ಲೇಖನದಲ್ಲಿ. ಹೆಣ್ಣು ಎಷ್ಟು ಪ್ರೀತಿಸುತ್ತಾಳೋ ಅಷ್ಟೇ possessive. When this possessiveness exceeds its limits, loss is also hers!
ReplyDeleteNija.... thank u so much .. :-)
Delete