ಜೀವನದಲ್ಲಿ ಕೆಲವೊಮ್ಮೆ ಎಲ್ಲೋ ಹುಟ್ಟಿ , ಎಲ್ಲೋ ಬೆಳೆದ ಕೆಲವು ವ್ಯಕ್ತಿಗಳನ್ನು ಭೇಟಿ ಆಗ್ತೇವೆ. ಆ ಸಂಬಂಧಗಳು ಎಷ್ಟು ಗಟ್ಟಿಯಾಗಿ ನಮ್ಮನ್ನು ಕೆಲವೊಮ್ಮೆ ಆವರಿಸುತ್ತೆ ಅಂದರೆ ಅದನ್ನು ಊಹಿಸಲಿಕ್ಕೆ ಸಾಧ್ಯ ಆಗದಷ್ಟು. ಬಹುಷಃ ನಾವು ಅದನ್ನು ಕನಸಿನಲ್ಲೂ ಕಲ್ಪಿಸಿಕೊಂಡಿರೋದಿಲ್ಲ ಅಷ್ಟು ಗಾಢವಾಗಿ ಆ ಸಂಬಂಧಗಳು ನಮ್ಮ ಜತೆಯಾಗುತ್ತೆ.
ನನ್ನ ಜೀವನದಲ್ಲಿ ಹೇಳ್ಬೇಕಂದ್ರೆ ಅಂಥಹ ಒಬ್ಬ ವ್ಯಕ್ತಿಗೆ ನಾನು ಪರಿಚಿತಳಾಗ್ತೇನೆ ಅಂಥ ಕನಸಲ್ಲೂ ಅಂದುಕೊಂಡಿರಲಿಲ್ಲ. ಪ್ರೀತಿಯ ಸಹೋದರನ ಸ್ಥಾನದಲ್ಲಿ ಒಬ್ಬ ಹುಡುಗ ನನ್ನ ಬಾಳಿಗೆ ಪ್ರವೇಶ ಪಡೆದದ್ದು ನನಗೆ ತುಂಬಾ ಸಂತೋಷದ ವಿಚಾರ. ಯಾಕಂದ್ರೆ ಇದುವರೆಗೂ ಅಂತಹ ಸಂಬಂಧ ಅನುಭವಿಸಿರದ ನನಗೆ ಏನೋ ಬೆಲೆಕಟ್ಟಲಾರದ ವಸ್ತುವೊಂದು ಸಿಕ್ಕ ಅನುಭವ. ಆ ಸಹೋದರನ ಹೆಸರು "ನಟರಾಜು"... ಬಹಳಷ್ಟು ಜನರಿಗೆ ಪರಿಚಿತ ಮುಖ.
ಮೊದಲೆಲ್ಲಾ ಅವನು ಫೋನ್ನಲ್ಲಿ ಮಾತಾಡೋವಾಗ "ನಾನು ಹೀಗೊಂದು ಅಂತರ್ಜಾಲ ಪತ್ರಿಕೆ ಮಾಡ್ಬೇಕು ಅಂದುಕೊಂಡಿದ್ದೀನಿ ..." ಅಂದಾಗ, ನಾನು "ಮಾಡೋಕ್ಕೆ ಬೇರೆ ಕೆಲಸ ಇಲ್ಲ ..." ಅಂತ ಅದೆಷ್ಟೋ ಸಾರಿ ಅಂದಿದ್ದೆ. ಅದಕ್ಕೆ ಅವನು ಸೀರಿಯಸ್ಸಾಗಿ ..." ಅದು ನನ್ನ ಎಷ್ಟೋ ವರ್ಷಗಳ ಆಸೆ, ಕನಸು...." ಅಂದರೂ ನನಗೆ ನಂಬಿಕೆ ಬರ್ತಾ ಇರಲಿಲ್ಲ. ಎಲ್ಲೋ ಸುಮ್ಮನೆ ತಮಾಷೆ ಮಾಡ್ತಾ ಇದ್ದಾನೆ ಅಂದುಕೋತಾ ಇದ್ದೆ. ಆದರೆ ಇತ್ತೀಚೆಗೆ ಪ್ರತಿಬಾರಿ ಫೋನ್ ಮಾಡಿ ದಾಗ್ಲೂ 'ಪಂಜು' ಬಗ್ಗೆ ಏನೆಲ್ಲಾ ಕೆಲಸಗಳು ನಡೀತಾ ಇದೆ ಅಂತಾ ವಿವರಿಸುವಾಗ ಇವನು ನಿಜಕ್ಕೂ ಇಂಥಹ ಒಂದು ಸಾಹಸ ಶುರು ಮಾಡ್ತಾ ಇದ್ದಾನೆ ಅನ್ನೋ ನಂಬಿಕೆ ಬಂತು.
ಇ-ಪತ್ರಿಕೆ ಅಂದರೆ ಅದು ಹೇಗಿರುತ್ತೆ . ಅದಕ್ಕೆ ಯಾರಾದ್ರು ಡಿಸೈನರನ್ನು ಹುಡುಕ್ಬೇಕು , ಅದಕ್ಕೆ ಎಷ್ಟೆಲ್ಲಾ ಹಣ ಖರ್ಚಾಗುತ್ತೆ....ಇನ್ನು ಏನೆಲ್ಲಾ ಇದ್ರೆ ಚೆನ್ನಾಗಿರುತ್ತೆ , ಅದೂ-ಇದೂ ಅಂತ ಅವನು ಆಸಕ್ತಿಯಿಂದ ಹೇಳೋವಾಗ, ಕೇಳೋದಷ್ಟೇ ನನ್ನ ಕೆಲಸ. ಯಾಕಂದ್ರೆ ಆ ವೆಬ್ ಪೇಜ್, ಅದರ ಡಿಸೈನ್ ಇದೆಲ್ಲದರ ಗಂಧ-ಗಾಳಿಯು ನನಗೆ ಗೊತ್ತಿರಲಿಲ್ಲ. ಅವನು ಹೇಳೋದು ಕೇಳಿ ಕೇಳಿ, ನನಗೂ ಸ್ವಲ್ಪ ಅದರ ಬಗ್ಗೆ ಜ್ನ್ಯಾನ ಸಿಕ್ತು. ಓ... ಇದು ನಾನು ಅಂದುಕೊಂಡಷ್ಟು ಸುಲಭ ಇಲ್ಲ ಅಂತ ಆಗಲೇ ನನಗೆ ಗೊತ್ತಾಗಿದ್ದು. ಜೊತೆಗೆ ಟೆನ್ಶನ್ ಸಹಾ. ಶುರು ಮಾಡೋ ಪತ್ರಿಕೆ ಚೆನ್ನಾಗಿ ಮೂಡಿ ಬರಲಿ ಅಂತ.
ಇವತ್ತು ಬೆಳಿಗ್ಗೆ ಬೆಳಿಗ್ಗೆ ಫೇಸ್ಬುಕ್ ಆನ್ ಮಾಡಿದ್ರೆ, ಪಂಜು ಪತ್ರಿಕೆ ಅದಾಗಲೇ ಬಿಡುಗಡೆ ಆಗಿ ಬಿಟ್ಟಿತ್ತು. ಬೆಳಿಗ್ಗೆಯೇ ನಾನೆಣಿಸದ "ಸ್ವೀಟ್ ಸರ್ಪ್ರೈಸ್ ".
ಸ್ನೇಹಿತರೇ ಈ ವಾರ ಪತ್ರಿಕೆಯ ವಿಳಾಸ ಹೀಗಿದೆ. http://www.panjumagazine.com/ ಸಮಯವಿದ್ದಾಗ ಭೇಟಿ ಕೊಡಿ. ಹೊಸ ಹೊಸ ಬರಹಗಳನ್ನು ಆಸ್ವಾದಿಸಿ. .... :))
"ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ."
ಈ ಮೇಲಿನ ಸಾಲುಗಳು ಅವನು ತನ್ನ 'ಪಂಜು' ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರೋದು. ಈ ಸಾಲುಗಳ ಅರ್ಥ, ಅವನನ್ನು ಹತ್ತಿರದಿಂದ ಬಲ್ಲವರು, ಅವನನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತಾಗೋದು..... :))
GREAT VISION.. WISH U N UR TEAM ALL THE BEST :)
ReplyDeleteThank u for your words Apoorva... :))
Deleteನಮ್ಮ ಪ್ರೀತಿಪಾತ್ರರ ಗೆಲುವು ನಮ್ಮದೇ ಗೆಲುವಿನಂತೆ ಸಂಭ್ರಮವ ಹೊತ್ತು ತರುತ್ತಲ್ಲವಾ...
ReplyDeleteನಿಮ್ಮ ಖುಷಿ ನನ್ನದೂ ಕೂಡಾ....
ನಿಜ ಶ್ರೀ...ಒಪ್ಪಿದೆ ನಿಮ್ಮ ಮಾತನ್ನ.... :))
Deleteನಸೀಮ ಮತ್ತು ಪಂಜು ಎರಡೂ ಪ್ರಜ್ವಲಿಸುತಲೇ ಇರಲಿ.
ReplyDeleteಧನ್ಯವಾದಗಳು ಬದರಿಜಿ, ತಮ್ಮ ಹಾರೈಕೆಗೆ....
Deleteಎಲೆ ಮರೆಯ ಕಾಯಿಯಂತೆ ತಾವು ನಂಬಿದ ಕನಸಿನ ಬೆನ್ನೇರಿ ಇಷ್ಟಪಟ್ಟು ಮಾಡುತ್ತಿರುವ ನಟರಾಜು ಅವರ ಶ್ರಮ ಅಭಿನಂದನಾರ್ಹ. ಪ್ರತಿಬಾರಿಯೂ ಅವರ ಲೇಖನಗಳನ್ನು ಓದುವಾಗ ಸಿಗುವ ಮಜವೇ ಬೇರೆ. ಇಂತಹ ಸುಂದರ ಮನಸುಳ್ಳ ನಟರಾಜು ಅವರ ಎಲ್ಲ ಸಾಧನೆಯು ಹೂವಿನ ದೀಪದಷ್ಟೇ ಬೆಳಗುತ್ತಾ ಘಮ ಘಮಿಸುತ್ತಿರಲಿ.
ReplyDeleteಜಯವಾಗಲಿ ವಿಜಯವಾಗಲಿ ಎಲ್ಲದರಲ್ಲೂ ನಮ್ಮವರಿದ್ದಾರೆ ಅವರ ಏಳಿಗೆಯಲ್ಲಿ, ಅವರ ಗುರುತಿಸುವಿಕೆಯಲ್ಲಿ ಸಂತಸ ಕಾಣುವ ನಿಮ್ಮ ಮನಸು ಸಂತಸ ತರುತ್ತದೆ. ಸುಂದರ ಬರಹ...ಹಾಗು ನಟರಾಜು ಅವರ ಪಂಜು ಸದಾ ಬೆಳಗುತ್ತಲಿರಲಿ
ಶ್ರೀಕಾಂತ್ ನಿಮ್ಮ ಪ್ರೀತಿಯ ನುಡಿಗಳಿಗೆ ಹೃದಯ ತುಂಬಿದ ನಮನಗಳು... :))
Delete:) ಅದು ನನಗೂ ಖುಷಿ ಕೊಟ್ಟ ವಿಷ್ಯ. ನಂದೂ ಒಂದು ಲೇಖನ ಪ್ರಕಟವಾಗಿದೆ ಸುಮತಿ!!
ReplyDeleteAll the best for him
ಶುಭಾಶಯಗಳು ಸಂತೋಷ್... :) ಬ್ಲಾಗಿಗೆ ಆಗಾಗ ಬರ್ತಾ ಇರಿ.. :)
Delete